ಬೆಳಗಾವಿ-21: ಕಾಂಗ್ರೆಸ್ ಸ್ವಾತಂತ್ರ್ಯ ನಂತರ ತನ್ನ ಆಡಳಿತ ಅವದಿಯಲ್ಲಿ ಹಿಡಿದು ಇಂದಿನವರೆಗೂ ಹಿಂದೂ ವಿರೋಧಿ ನೀತಿ ಅನುಸರಿಸಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ವಿರುದ್ದವಾಗಿ ಕೆಲಸ ಮಾಡಿ ಇಂದು ಭವ್ಯಾಅಯೋದ್ಯ ಶ್ರೀ ರಾಮ ಮಂದಿರ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ರಜೆ ನೀಡದೆ, ನಾವು ಅಯೋದ್ಯಗೆ ಹೋಗುವುದಿಲ್ಲ ನಾನೇ ರಾಮ ಇವರೆ ರಾಮ ಎಂದು ಹೇಳುವ ಕಾಂಗ್ರೆಸ್ ನಾಯಕರು ಹಿಂದೂ ವಿರೋಧಿಗಳಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾದ್ಯಕ್ಷ ಹಾಗೂ ಮಾಜಿ ಶಾಸಕ ಅನೀಲ ಬೆನಕೆ ಹೇಳಿದರು.
ಅವರು ಸದಾಶಿವನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಅವರು ನಮ್ಮ ರಾಮ ನಮ್ಮಹೆಮ್ಮೆ ಅಭಿಯಾನ ಉದ್ದೇಸಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವಯಂ ಪ್ರೇರಣೆಯಿಂದ ಹಿಂದೂ ಸಮಾಜದ ಜನತೆ ದೀಪ,ರಂಗೋಲಿ,ಕೆಸರಿ ದ್ವಜ,ಕೇಸರಿ ಪರಪರಿಗಳ ಮುಖಾಂತರ ಶ್ರೀ ರಾಮನ ಜಾತ್ರೆ ಮಾಡುತ್ತಿದ್ದು ನಾವು ಅವರಿಗೆ ಕೈ ಜೋಡಿಸಿ ಮಂದಿರಗಳ ಸ್ವಚ್ಚತಾ,ಪೂಜಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ನಾವು ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅದ್ಯಕ್ಷ ಸುಭಾಸ ಪಾಟೀಲ ಮಾತನಾಡಿ1992 ರಲ್ಲಿ ಅತಿ ಹೆಚ್ಚು ಕರ ಸೇವಕರು ಕರ್ನಾಟಕದ ಮೂಲೆ ಮೂಲೆಗಳಿಂದ ಹೊಗಿದ್ದರು ಅದರಲ್ಲಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚು ಜನ ಪಾಲ್ಗೊಂಡಿರುವದು ಮತ್ತು
ರಾಮಮಂದಿರ ನಿರ್ಮಾಣದ ಕಾರ್ಯದ ಪ್ರಮುಖ ಸ್ಥಾನದಲ್ಲಿ ನಮ್ಮ ರಾಜ್ಯದವರೆ. ಅದರಲ್ಲಿ ಬೆಳಗಾವಿಯ ಗೋಪಾಲಜಿ ಅನ್ನುವದು ನಮ್ಮ ಜಿಲ್ಲೆಯ ಗೌರವ.ಬಾಲ ರಾಮನ ಮೂರ್ತಿಗೆ ಉಪಯೋಗಿಸಿರುವ ಶಿಲೆ ಕರ್ನಾಟಕದ ಹೆಗ್ಗಣ ದೇವನ ಕೋಟೆದ್ದು ಎನ್ನುವದು ಕನ್ನಡಿಗರದ್ದು.ಬಾಲ ರಾಮನ ಮೂರ್ತಿ ತಯಾರಿಸಿದ ಶಿಲ್ಪಿ ನಮ್ಮ ರಾಜ್ಯದ ಮೈಸೂರಿನ ಅರುಣ ಯೋಗರಾಜ್ ಜೋತೆಗೆ ಮಂದಿರ ನಿರ್ಮಾಣದಲ್ಲಿ ಕರ್ನಾಟಕದ 6ಜನ ಶಿಲ್ಪಿಗಳು ಕಾರ್ಯ ಮಾಡುತ್ತಿರುವದು
ರಾಮ ಮಂದಿರ ಟ್ರಸ್ಟ್ ನಲ್ಲಿ ನಮ್ಮ ರಾಜ್ಯದ ಉಡಪಿ ಪೇಜಾವರ ಶ್ರೀಗಳು ಇರುವದು .ರಾಜ್ಯದ ಶ್ರೀಗಂಧದ ಕಟ್ಟಿಗೆ ಮತ್ತು ಗಂಧದ ಎಣ್ಣೆ ಉಪಯೋಗಿಸುತ್ತಿರುವದು ನಾಡಿನ ಕಂಪ ರಾಮಮಂದಿರದಲ್ಲಿದೆ.
ರಾಮಮಂದಿರ ಸಿಡಿಲು ಮತ್ತು ಭೂಕಂಪದಿಂದ ಸಾವಿರಾರು ವರ್ಷ ರಕ್ಷಣೆ ಪಡೆಯಲಿದ್ದು ಈ ತಂತ್ರಜ್ಞಾನ ಕರ್ನಾಟಕದ ಜೆಈಎಫ್. ಕಂಪನಿ ಒದಗಿಸಿದ್ದು ರಾಜ್ಯದ ತಂತ್ರಜ್ಞಾನದ ವಿಜ್ಞಾನ ಬಳಕೆಯಾಗಿದೆ.ಕರ್ನಾಟಕದ ಸಾದರಹಳ್ಳಿಯಿಂದ 800ಟನ್ ಶಿಲೆ ರಾಮ ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ.
ಇನ್ನೋರ್ವ ಶಿಲ್ಪಿ ಉತ್ತರಕನ್ನಡದ ಕೆಕ್ಕೆರಿಯ ವಿನಾಯಕಗೌಡ ಅವರಿಂದ ವಿನಾಯಕ ಮೂರ್ತಿ ಅರಳಿದೆ. ಇಡಗುಂಜಿಯ ಗಣೇಶ ಬಟ್ ಅವರಿಂದ ಬಲರಾಮ ಮೂರ್ತಿ ಕೆತ್ತನೆ ಮಾಡುವದರೊಂದಿಗೆ ರಾಜ್ಯದ ಶಿಲ್ಪಕಲೆ ರಾಮಮಂದಿರದಲ್ಲಿ ಹಾಸುಹೊಕ್ಕಾಗುದೆ.
ರಾಜ್ಯದ ರಾಜೇಶ ಶೆಟ್ಟಿ ಮಂದಿರದ ವಿದ್ಯುತ್ ವ್ಯವಸ್ಥೆಯ ಸಂಪೂರ್ಣವಾಗಿ ಜವಾಬ್ದಾರಿ ಹೊತ್ತವರು.
ಕೊಪ್ಪಳದ ರಾಮಮೂರ್ತಿ ಸ್ವಾಮಿಗಳು ರಾಮಮಂದಿರದ ದ್ವಾರಭಾಗಿಲು ಕೆತ್ತನೆ ಮಾಡುವದರೊಂದಿಗೆ ರಾಮಂದಿರ ನಿರ್ಮಾಣಕ್ಕೆ ಕರ್ನಾಟಕದ ಅನನ್ಯ ಸೇವೆ ಸಲ್ಲಿಸಿದೆ. ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಅಯೊದ್ಯಯ ನಡುವಿನ ಬಾಂಧವ್ಯವನ್ನ ಬಿಂಬಿಸಲಿವೆ.ದೇಶದಲ್ಲಿ ರಾಮ ಜಪ ನಡೆದರೆ ಹುಬ್ಬಳ್ಳಿಯ ಕರ ಸೇವಕ ಶ್ರೀಕಾಂತ ಪೂಜೇರಿಯವರನ್ನ ಬಂಧನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದರು.
ಜನವರಿ31 ಮಾರ್ಚ25ರ ವರೆಗೆ ರಾಜ್ಯದ ರಾಮ ಭಕ್ತರಿಗೆ ಅಯೋಧ್ಯೆಯ ರಾಮ ದರ್ಶನ ಅಭಿಯಾನ ಹಮ್ಮಿಕೊಳ್ಳಲಾಗುವದು.
ರಾಜ್ಯದ ವಿವಿಧ 25 ಸ್ಥಳಗಳಿಂದ 25ನೇರ ವಿಶೇಷ ರೈಲು ಸಂಚಾರ ನಡೆಯಲಿದೆ.
ರಾಜ್ಯದ ಸುಮಾರು 35ಸಾವಿರಕ್ಕೂ ಹೆಚ್ಚು ರಾಮಭಕ್ತರು ರಾಮ ದರ್ಶನ ಪಾಲ್ಗೊಳ್ಳಲಿದ್ದಾರೆ.ಒಟ್ಟು ಆರು ದಿನಗಳ ಈ ಪ್ರವಾಸದಲ್ಲಿ ಪ್ರತಿಯೊಬ್ಬರಿಗೂ 3ಸಾವಿರ ರೂಪಾಯಿ ವೆಚ್ಚವಾಗಲಿದೆ. ಇದನ್ನು ರಾಮ ಭಕ್ತರೆ ಭರಿಸಬೇಕು.ರೈಲ್ವೆಯಲ್ಲಿ ಉಪಹಾರ ಊಟ ವ್ಯವಸ್ಥೆ ಮಾಡಲಾಗುವದು.ಅಯೋದ್ಯೆಯಲ್ಲಿ 48 ಕಡೆ ಪ್ರಸಾದ ನಡೆಯಲಿದ್ದು ಅದರಲ್ಲಿ 2 ಕಡೆ ಕರ್ನಾಟಕ ರಾಮ ಭಕ್ತರಿಗೆ ಮಿಸಲಿದೆ.ಕರ್ನಾಟಕದ ಭಕ್ತರ ವಸತಿಗಾಗಿ ಆಧುನಿಕ ಜರ್ಮನ ಟೆಂಟ್ ನಿರ್ಮಿಸಲಾಗಿದೆ.
ಪ್ರವಾಸ ಪ್ರಾರಂಭದಿಂದ ಮರಳಿ ಬರುವ ವರೆಗೆ ಕನ್ನಡದಲ್ಲಿ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.ದಿನ ಒಂದಕ್ಕೆ ಒಂದು ರೈಲಿನಲ್ಲಿ 1500ರಾಮಭಕ್ತರು ತೆರಳಲಿದ್ದು ಅವರಿಗೆ ವೈಕ್ತಿಕ ಮಾಹಿಯುಳ್ಳ ಕ್ಯೂ ಆರ್ ಕೊಡ್ ಪತ್ರ ನೀಡಲಾಗುವದು.ಜಿಲ್ಲಾ ಮಾದ್ಯಮ ಸಂಚಾಲಕ ಎಪ್ ಎಸ್.ಸಿದ್ದನಗೌಡರ ಪ್ರಾಸ್ತವಿಕವಾಗಿ ಮಾತನಾಡ ಎಲ್ಲರಿಗೂ ವಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಮಂಗಲ ಅಂಗಡಿ, ಜಿಲ್ಲಾ ಮಹಾನಗರ ಅಧ್ಯಕ್ಷ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮುರಘೇಂದ್ರ ಪಾಟೀಲ,, ಶರದ ಪಾಟೀಲ, ಉಜ್ವಲಾ ಬಡವನಾಚೆ, ಸಂತೋಷ ದೇಶನೂರ ಇನ್ನಿತರರು ಉಪಸ್ಥಿತರಿದ್ದರು.