29/01/2026
IMG-20260126-WA0000

ಬೆಳಗಾವಿ-26 : ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ನೇಸರಗಿ ಇವರ ನೇತೃತ್ವದಲ್ಲಿ ವಿರಾಠ ಹಿಂದು ಸಮ್ಮೇಳನವು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದಿಂದ ಶೋಭಾ ಯಾತ್ರೆ ಪ್ರಾರಂಭವಾಗಿ ಬಸ ನಿಲ್ದಾಣದ ಮೂಲಕ ಗ್ರಾಮದಲ್ಲಿ ಸಂಚರಿಸಿ, ಗ್ರಾಮದ ಗಲ್ಲಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆ ಕರ್ನಾಟಕ ಚೌಕದಲ್ಲಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಹಿಂದೂ ಸಮಾವೇಶ ಕಾರ್ಯಕ್ರಮನ್ನು ಉದ್ದೇಶಿಸಿ ಆರ್ ಎಸ್ ಎಸ್ ಬೆಳಗಾವಿ ವಲಯದ ಪ್ರಚಾರಕರಾದ ಸತೀಶ ಕುಮಾರ ಮಾತನಾಡಿ ಇವತ್ತು ದೇಶದ 7000 ಗ್ರಾಮಗಳಲ್ಲಿ ಆರ್ ಎಸ್ ಎಸ್ ಕಾರ್ಯ ನಿರ್ವಹಿಸುತ್ತಿದೆ. ಹಿಂದೆ, ಇಂದು ಜಗತ್ತಿನ ಅತೀ ದೊಡ್ಡ ಸಂಘಟನೆ ಆಗಿದೆ ಆರ್ ಎಸ್ ಎಸ್ ಸಂಘ. ದೇಶ ನಮ್ಮದು ಅಂತಾ ಬದುಕಬೇಕು, ಮೊಗಲರಿಗೆ, ಬ್ರಿಟಿಷರಿಗೆ ಹಂತ ಹಂತವಾಗಿ ಭಾರತೀಯರು ಬಿಸಿ ಮುಟ್ಟಿಸಿದ್ದಾರೆ, ದೇಶ ಭಕ್ತಿ, ದೇಶದ ಘನತೆ ಸಾರಿದ 100 ವರ್ಷಗಳಿಂದ ಹಿಂದೂಗಳ ಒಗ್ಗೂಡಿಕೆಗೆ ಕಾರ್ಯ ಆರ್ ಎಸ್ ಎಸ್ ಸಂಘ ಮಾಡಿದೆ. ಭಾರತದ ಸಂತ ಪರಂಪರೆ ಆದರ್ಶವಾದದು,ಭಾರತ ಪುಣ್ಯ ಭೂಮಿ ಆಗಿತ್ತು, ಸುತ್ತಲಿನ ದೇಶಗಳು ಭಾರತ ಸಂಸ್ಕೃತಿ ಮೆಚ್ಚಿ, ಸಮಾಜಕ್ಕೆ ಮೆಚ್ಚಿ , ಜಗತ್ತಿನ ಜನ ಭಾರತೀಯರ ಹಾಗೆ ಬದುಕಬೇಕು, ಆಹಾರ ಪದ್ಧತಿ ಭಾರತ ಶ್ರೇಷ್ಠ, ಭಾರತಕ್ಕೆ ಹಿಂದುಸ್ಥಾನ ಅನ್ನುತ್ತಾರೆ, ಇದಕ್ಕೆ ಕುಟುಂಬ ಪದ್ಧತಿ ಇರಲಿ, ಹಿಂದೂ ಜನರಲ್ಲಿ ಜಾಗ್ರತೆ ಬೆಳೆಸುವದು, ಭಾರತದಲ್ಲಿ ತಾಯಿ ಭೂಮಿ, ಹಿಂದೂ ಭೂಮಿ,ಹಿಂದೂ ಸಮಾಜ ಎಲ್ಲರೂ ಒಗ್ಗೂಡಿ ಸಾಧು ಸಂತರ ನೇತೃತ್ವದಲ್ಲಿ ಕೆಲಸ ಆಗಬೇಕು. ಭಾರತೀಯರು ಅಂತಂದ್ರೆ ಅದು ಭಾರತೀಯರು ಇವತ್ತು ಭಾರತೀಯ ಪರಂಪರೆ ಉಳಿಬೇಕು ಸನಾತನ ಪರಂಪರೆ ಉಳಿಬೇಕು, ದೇಶದ ಅನೇಕ ಸ್ಥಳಗಳಲ್ಲಿ ಇವತ್ತು ವಿರಾಟ್ ಹಿಂದೂ ಸಮ್ಮೇಳನ ನಡೆಯುತ್ತಿದೆ. ಕಾರಣ ನಮ್ಮೆಲ್ಲರನ್ನ ಜಾಗೃತರನ್ನಾಗಿ ವಿವೇಕಾನಂದರು ಯಾವಾಗಲೂ ಒಂದು ಮಾತನ್ನು ಹೇಳ್ತಾ ಇದ್ದರು ಎಳ್ಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಅಂತ ತಿಳ್ಕೊಂಡು ಇವತ್ತು ಎಲ್ಲರೂ ಜಾಗೃತರಾಗಿ ಇವತ್ತು ನಾವು ಗುರಿ ಮುಟ್ಟುವವರೆಗೂ ಈ ಒಂದು ಕಾರ್ಯವನ್ನು ನಾವು ಯಾವತ್ತೂ ಕೂಡ ಹಿಂದೆ ಸಾಗಬೇಕಾಗಿದೆ. ಭಾರತೀಯ ಪರಂಪರೆ ಇವತ್ತು ಎಲ್ಲರೂ ಕೂಡ ಭಾರತೀಯ ಪರಂಪರೆಯನ್ನು ಸ್ಮರಿಸುಸ್ತಾರೆ.
ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು ಹಿಂದೂ ಧರ್ಮವನ್ನ ಒಂದು ಗಟ್ಟಿಯನ್ನಾಗಿ ಬೆಳೆಸಬೇಕು.
ಬ್ರಿಟಿಷರು ಬಂದ್ರು ಮೊಘಲರಿ ಬಂದ್ರು ಶಾಹಿಗಳ ಬಂದ್ರು ಎಷ್ಟೇ ಎಲ್ಲರೂ ಬಂದು ನಮ್ಮನ್ನು ತುಳಿಲಿಕ್ಕೆ ತೊಳೀಲಿಕ್ಕೆ ನೋಡಿದರು ಕೂಡ ಇವತ್ತು ಹಿಂದೂ ಧರ್ಮ ಗಟ್ಟಿಯಾಗಿ ನಿಂತಿದೆ. ಅದಕ್ಕಾಗಿ ದೇಶದಲ್ಲಿರುವ ಎಲ್ಲ ಹಿಂದುಗಳು ಒಂದಾಗಬೇಕೆಂದು ಕರೆ ಕೊಟ್ಟರು.
ಯಾಕೆ ಇವತ್ತು ಇಂಗ್ಲೀಷ್ ಬೇಕಾಗಿದೆ ಇವತ್ತು ಜಾತಿ ಜಾತಿಗಳಿಂದ ಹೊರಗೆ ಬಂದು ನಮ್ಮ ಭಾರತೀಯ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು. ಇದಕ್ಕೆ ಮಹಾತ್ಮ ಗಾಂಧಿ,ಶಿವಾಜಿ ಮಹಾರಾಜಾ, ರಾಣಿ ಚನ್ನಮ್ಮ್, ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್, ಲಾಲ ಬಹಾದ್ದೂರ ಶಾಸ್ತ್ರೀ, ವಿವೇಕಾನಂದರು ಸೇರಿದಂತೆ ಅನೇಕ ಮಹಾನ್ ಪುರುಷರು ಸಾರಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಜಯನಗರ ಪ್ರಾಂತ ಕಾರ್ಯದ ಊಹಿಕ ರಾಷ್ಟ್ರ ಸೇವಾ ಸಮಿತಿಯ ಶ್ರೀಮತಿ ವೇದ ಕುಲಕರ್ಣಿ ಅವರು ಮಾತನಾಡಿ ಒಂದು ಸಂಸ್ಕೃತಿಯಲ್ಲಿ ಮಹಿಳೆಗೆ ಕೊಟ್ಟಂತ ಉನ್ನತ ಸ್ಥಾನವನ್ನು ನಾವು ಬೇರೆ ಎಲ್ಲೂ ಕಾಣಲಿಕ್ಕೆ ಸಾಧ್ಯವಿಲ್ಲ ಅದು ಕೇವಲ ಸನಾತನ ಧರ್ಮದಲ್ಲಿ ಮಾತ್ರ ಸಾಧ್ಯ ರಾಷ್ಟ್ರಪತಿಗಳನ್ನು ದೇಶಕ್ಕೆ ನೀಡಿದೆ ಮಹಿಳೆಯರಿಗೆ ಕೊಟ್ಟ ಸ್ಥಾನಮಾನ ಪ್ರಕೃತಿಯನ್ನು ಎಲ್ಲಾ ದೇವತೆಗಳನ್ನ ಕೊನೆಗೆ ದೇಶವನ್ನೇ ತಾಯಿ ಅಂತ ಪೂಜಿಸುವಂತ ಒಂದು ಪವಿತ್ರವಾದ ಸಂಸ್ಕೃತಿ ನಮ್ಮದು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರರ ಸಂಭ್ರಮ ದೇಶದ ರಕ್ಷಣೆಗಾಗಿ ದೇಶದ ಅಭಿವೃದ್ಧಿಗಾಗಿ ರಾಷ್ಟ್ರ ಪ್ರೇಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿದ್ದ ಲಕ್ಷಾಂತರ ಕಾರ್ಯಕರ್ತರ ಒಂದು ಸಂಘಟನೆ ಆಗಿದೆ. ಹಿಂದೂ ಸಮ್ಮೇಳನ ಅಂದ್ರೆ ಹಿಂದೂ ಜನರ ಜಾಗೃತಿಯ ಸಲುವಾಗಿ ಈ ಸಮ್ಮೇಳನಗಳನ್ನ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸಮಾಜಕ್ಕೆ ಹಿಂದೂ ಧರ್ಮವನ್ನು ಸಂರಕ್ಷಿಸಲು ಸಶಕ್ತ ಭಾರತವು ರಾಷ್ಟ್ರ ನಿರ್ಮಾಣ ಮಾಡಲು ಒಂದು ರಹಧಾರಿಯನ್ನು ಸಂಘ ಹಾಕಿಕೊಟ್ಟಿದೆ ಅದೇ ನಮ್ಮ ಪಂಚ ಪರಿವರ್ತನಾ ಕಾರ್ಯಕ್ರಮವನ್ನಾಗಿ ಮಾಡಲಾಗುತ್ತಿದೆ ಮಹಿಳಾ ಮತ್ತು ಪುರುಷ ಸಮಾನ ದೇಶ ನಿರ್ಮಾಣ ಆಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನೇಸರಗಿ- ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಈ ದೇಶಗಳಲ್ಲಿ ಹುಟ್ಟಿದ್ದೇವೆ ಎಂದರೆ ಗರ್ವದಿಂದ ಹಿಂದೂಗಳಿಗೆ ಎದೆ ತಟ್ಟಿಕೊಂಡು ಹೇಳಬೇಕು ನಾನು ಹಿಂದು ಭಾರತೀಯ ಎಂದು, ಸಾವಿರಾರು ವರ್ಷಗಳಿಂದ ಭಾರತ ಎಂದು ಹೆಸರು ಕರೆಯಲಾಗುತ್ತದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ರಾಮಾಯಣ, ಮಹಾಭಾರತ ಒಳ್ಳೆಯ ಸಂದೇಶ ಸಾರುವ ಆದರ್ಶ ಅವರಿಗೆ ಕಲಿಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಿತ್ತೂರು ಕಲ್ಮಟ ಹಾಗೂ ದೇಶನೂರ ವಿರಕ್ತಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿದ್ದರು, ಸುತಗಟ್ಟಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಹಣಬರಹಟ್ಟಿಯ ಕೆಳದಿ ಮಠದ ಬಸವಲಿಂಗ ಶಿವಾಚಾರ್ಯರು, ನಿವೃತ್ತ ಶಿಕ್ಷಕ ಸಿ ವ್ಹಿ ಕಟ್ಟಿಮನಿ ಈ ಭಾಗದಲ್ಲಿ ಆರ್ ಎಸ್ ಎಸ್ ಹಾಗೂ ಒಂದೇ ಮಾತರಂ ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಬಿ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷ, ವನ್ನೂರ ಪಿ ಕೆ ಪಿ ಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಹಿಂದೂ ಸಮ್ಮೇಳನ ಸಂಚಲನ ಸಮಿತಿ ಅಧ್ಯಕ್ಷ ಈರಪ್ಪ ಸೋಮಣ್ಣವರ, ಮುಖಂಡ ಶ್ರೀಕರ ಕುಲಕರ್ಣಿ,ಶ್ರೀಮತಿ ಸಾವಿತ್ರಿ ಕೋಲಕಾರ, ಮಹಾಂತೇಶ ಕೂಲಿನವರ,ಶ್ರೀಶೈಲ ಕಮತಗಿ, ನೇಸರಗಿ ಹಿಂದೂ ಸಮ್ಮೇಳನ ಸಂಚಲನ ಸಮಿತಿ ಸದಸ್ಯರು, ಸೇರಿದಂತೆ ನೇಸರಗಿ ಭಾಗದ ಅನೇಕ ಹಿಂದೂ ಮುಖಂಡರು, ಹಿಂದೂ ಕಾರ್ಯಕರ್ತರು ಭಾಗಿಯಾಗಿರುದ್ದರು.

Leave a Reply

Your email address will not be published. Required fields are marked *

error: Content is protected !!