14/03/2026
Rllc Photo

ಬೆಳಗಾವಿ-12-: ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ 16 ನೇ ಎಂ. ಕೆ. ನಂಬಿಯಾರ್ ಸ್ಮರಣಾರ್ಥ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ-2026 ಮಾ.13-15 ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್, ನ್ಯಾಯವಾದಿ ಆರ್.ಎಸ್.ಮುತಾಲಿಕ್ ಹಾಗೂ ಕೆಎಲ್ ಎಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಎಸ್.ವಿ.ಗಣಾಚಾರಿ ಅವರು ಮಾಹಿತಿ ನೀಡಿದರು.

ಭಾರತದ ಮಾಜಿ ಅಟಾರ್ನಿ ಜನರಲ್ ಹಾಗೂ ನಮ್ಮ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ ಪದ್ಮವಿಭೂಷಣ ಕೆ. ಕೆ. ವೇಣುಗೋಪಾಲ್ ಅವರ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾರತದ 9 ವಿವಿಧ ರಾಜ್ಯಗಳಿಂದ ಒಟ್ಟು 30 ತಂಡಗಳು ಭಾಗವಹಿಸಲಿವೆ. ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯದ ಸುಮಾರು 50 ಹಿರಿಯ ವಕೀಲರು ಮತ್ತು ಶಿಕ್ಷಣ ತಜ್ಞರು ಮೂಟ್ ನ್ಯಾಯಾಧೀಶರಾಗಿ ಪಾಲ್ಗೊಂಡು ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಿದ್ದಾರೆ.

ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಒಟ್ಟು ರೂ. 1,35,000 ನಗದು ಬಹುಮಾನ ವಿತರಿಸಲಾಗುವುದು. ಇದಲ್ಲದೆ, ಬೆಳಗಾವಿಯ ಹಿರಿಯ ವಕೀಲ ಅಶೋಕ ಎನ್. ಪೋತದಾರ ಅವರ ಹೆಸರಿನಲ್ಲಿ ಶ್ರೇಷ್ಠ ವಾಗ್ಮಿ (Best Mooter) ಪ್ರಶಸ್ತಿಯೊಂದಿಗೆ ರೂ. 6,000 ನಗದು ಬಹುಮಾನ ನೀಡಲಾಗುವುದು.

ಸ್ಪರ್ಧೆಯ ಉದ್ಘಾಟನಾ ಸಮಾರಂಭ ಮಾರ್ಚ್ 13 ರಂದು ಸಂಜೆ 5.30 ಕ್ಕೆ ಬೆಳಗಾವಿಯ ಟಿಳಕವಾಡಿ ಕೆಎಲ್‌ಎಸ್ ಪ್ಲಾಟಿನಂ ಜುಬಿಲಿ ಕಟ್ಟಡದ ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ನಡೆಯಲಿದೆ.

ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಎಂ ಉಪಸ್ಥಿತರಿರುವರು. ಕೆಎಲ್ ಎಸ್ ಅಧ್ಯಕ್ಷ, ಅಡ್ವೊಕೇಟ್ ಪ್ರದೀಪ ಎಸ್. ಸಾವಕಾರ ಅಧ್ಯಕ್ಷತೆ ವಹಿಸುವರು. ಕೆಎಲ್ ಎಸ್ ಚೇರ್ಮನ್ ಎ.ಕೆ.ಟಗಾರೆ ಉಪಸ್ಥಿತರಿರುವರು.
ಕರ್ನಾಟಕ ಲಾ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುವರು. ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸಂಸ್ಥೆಯ 8 ಹಳೆಯ ವಿದ್ಯಾರ್ಥಿಗಳಾದ
ಮೌನೇಶ ಬಡಿಗೇರ, ನವೀನ ಕೋಪಾರ್ಡೆ, ಹಳ್ಯಾಳಪ್ಪ, ಪ್ರಿಯಂಕಾ ರಾಜಗೊಳ್ಕರ್, ಜಗದೀಶ ಕಿತ್ತೂರು, ಶ್ರೇಯಾ ಉತ್ತೂರೆ, ವಿಜಯಕುಮಾರ ಬುದ್ರಿ ಮತ್ತು ನಾಗರಾಜ ತಳವಾರ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಮಾರೋಪ ಸಮಾರಂಭ ಮಾರ್ಚ್ 15 ರಂದು ಸಂಜೆ 4:30 ಕ್ಕೆ ನಡೆಯಲಿದೆ.

ಗೌರವಾನ್ವಿತ ನ್ಯಾಯyಮೂರ್ತಿ ವಿಜಯಕುಮಾರ್ ಎ. ಪಾಟೀಲ ಉಪಸ್ಥಿತರಿರುವರು. ಪ್ರದೀಪ ಎಸ್. ಸಾವಕಾರ ಅಧ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ಬೋರ್ಡ್ ಚೇರ್ಮನ್, ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿರುವರು ಎಂದು ವಿವರಿಸಿದರು.

ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಪ್ರೊ.ಅಶ್ವಿನಿ ಪರಬ್, ಅಣಕು ನ್ಯಾಯಾಲಯ ಸ್ಪರ್ಧೆಯ ಕಾರ್ಯದರ್ಶಿ ಸುನಿಧಿ ಜೋಶಿ, ಮಹಾವಿದ್ಯಾಲಯದ ಮಾಧ್ಯಮ ಸಂಪರ್ಕಾಧಿಕಾರಿ ಮಂಜುನಾಥ ಕಾಳೆ ಹಾಗೂ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸಿರಿದ್ದರು

Leave a Reply

Your email address will not be published. Required fields are marked *

error: Content is protected !!