29/01/2026
IMG-20260126-WA0001

೨೩-೧-೨೦೨೬ ರಂದು ನೇತಾಜಿ ಸುಭಾಶ್ಚಂದ್ರ ಭೋಸರ

ಜನ್ಮದಿನದಂದು
ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆ ಧಾರವಾಡ ಆವರಣದಲ್ಲಿ ಅನೌಪಚಾರಿಕವಾಗಿ ನೇತಾಜಿಯವರನ್ನು ಸ್ಮರಿಸಿ, ಪುತ್ಥಳಿಗೆ ವಂದಿಸಿ ಗೌರವ ಸಲ್ಲಿಸಲಾಯಿತು.

ಹಿರಿಯ ಲೇಖಕರಾದ ಸ.ರಾ.ಸುಳಕೂಡೆ
ಯವರ ‘ಸುವರ್ಣ ಸೌರಭ’ ಭಾಗ ೧- ಭಾಗ ೨
ಕರ್ನಾಟಕ ನಾಮಕರಣೋತ್ಸವ ನೆನಪಿನ ಎರಡು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೋ.ಯು.ಎನ್ ಸಂಗನಾಳಮಠ ಮುಂತಾದ ಅನೇಕ ಹಿರಿಯರ ಉಪಸ್ಥಿತಿಯಲ್ಲಿ ಅನಾವರಣ ಗೊಳಿಸಲಾಯಿತು.

ಸುಳಕೂಡೆ ಯವರ
ಸಾಮಾಜಿಕ,ಸಾಹಿತ್ಯಿಕ,ಸಾಂಘಿಕ ಬದುಕೇ ರೋಚಕ
ಎಂದು ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷರೂ,
,ಅಧ್ಯಾತ್ಮ ಚಿಂತಕ ಹಿರಿಯ ಸಾಹಿತಿಗಳೂ ಆದ ವಿದ್ಯಾಧರ ಮುತಾಲಿಕ ದೇಸಾಯಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆ ಮಾಡಿದ ಪ್ರೋ.ಸಂಗನಾಳಮಠರವರು ಮಾತನಾಡಿ,
ಸುಳಕೂಡೆಯವರದು ಬಹುಮುಖ ಸಾಧನಾ ವ್ಯಕ್ತಿತ್ವ. ಸಾಹಿತ್ಯ ಕ್ಷೇತ್ರದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದವರು.
ಕನ್ನಡಕ್ಕಾಗಿ ಅಹರ್ನಿಸಿ ದುಡಿದೂ ನೇಪಥ್ಯದಲ್ಲಿರುವ ಮಹನೀಯರ,ಸಂಘ ಸಂಸ್ಥೆಗಳ
ಮುಂತಾದವರನ್ನು ಕೃತಿ ಮುಖಾಂತರ ಪರಿಚಯಿಸುವ
ಮಹತ್ಕಾರ್ಯ‌ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘ,ನಾಗನೂರು ರುದ್ರಾಕ್ಷಿಮಠ,ಭಾಲ್ಕಿ ಹಿರೇಮಠ ಸಂಸ್ಥಾನ
ಮುಂಬಯಿ ಯ ಸೃಜನಾ ಮಹಿಳಾ ಲೇಖಕಿಯರ ಸಂಘಟನೆ,ಪತ್ರಿಕೋದ್ಯಮಿ ಎಂ.ಜಿ ಆರ್ ಆರಾಧ್ಯ,ಅದರಗುಂಚಿ ಶಂಕರಗೌಡರು,ಆಲೂರ ವೆಂಕಟ ರಾಯರು,
ಚಿಂಚಣಿ ಅಲ್ಲಮ ಪ್ರಭುಮಠ…

ಹೀಗೆ ಹೊಸ ಹಳೆಯ ತಲೆಮಾರುಗಳನ್ನು
ಪರಿಚಯಿಸುತ್ತ ಹೊಸ ಆಚರಣಾ ಪಥ ತೋರಿದ್ದಾರೆ.ಈ ಗ್ರಂಥದ ಎಲ್ಲವೂ,ಎಲ್ಲರೂ ಅನುಕರಣಿಯರೇ ಆಗಿದ್ದಾರೆ.
ಸುಳಕೂಡೆ ಎಂದರೆ
ಹೊಸ ಯೋಜನೆಗಳ ರೂವಾರಿ ಎನ್ನಬಹುದು ಎಂದರು.

ಸಂಪಾದನಾ ಕಾರ್ಯ ಅಷ್ಟು ಸುಲಭವಲ್ಲ.ನಿಗದಿತ ಸಮಯದೊಳಗೆ ಲೇಖನ ತರಿಸಿಕೊಳ್ಳುವುದು ತುಂಬಾ ಕಠಣ ಕಾರ್ಯ.ಅದನ್ನೆಲ್ಲ ಎದುರಿಸಿ ಈ ಇಳಿವಯಸ್ಸಿನಲ್ಲೂ ಕ್ರಿಯಾಶೀಲ
ರಾಗುತ್ತಿದ್ದಾರೆ.ಇದೊಂದು ಅನುಕರಣೀಯ ವ್ಯಕ್ತಿತ್ವ ಎಂದು
ಶುಭ ಹಾರೈಸಿದರು.
ಸುಳಕೂಡೆಯವರು ತಮಗೆ ಸಹಕಾರ ನೀಡಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿದರು.

Leave a Reply

Your email address will not be published. Required fields are marked *

error: Content is protected !!