ಬೆಳಗಾವಿ-27 : ಬ್ಯಾಂಕಿಂಗ್ ಉದ್ಯಮದಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತ್ರತ್ವದಲ್ಲಿ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಯಿತು.
ಮಂಗಳವಾರ ನಗರದ ಧರ್ಮವೀರ ಛತ್ರಪತಿ ಸಂಭಾಜೀ ಮಹಾರಾಜ್ ವೃತ್ತದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ತಮ್ಮ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ನೌಕರರ ದೀರ್ಘ ಕಾಲದ ಬೇಡಿಕೆಯಾದ, ವಾರದ ಐದು ದಿನಗಳ ಕೆಲಸದ ಪದ್ಧತಿಯನ್ನು ಅನುಮೋದಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ಧೋರಣೆ ಮಾಡುತ್ತಿದೆ ಎಂದು ಬೃಹತ್ ಪ್ರತಿಭಟನೆಯಲ್ಲಿ ಆಕ್ರೋಶವನ್ನು ಹೋರ ಹಾಕಿದರು.
2024ರ ಮಾರ್ಚ್ನಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ನೌಕರರ ಒಕ್ಕೂಟಗಳ ನಡುವೆ ಈ ಕುರಿತು ಐತಿಹಾಸಿಕ ಒಪ್ಪಂದವಾಗಿದ್ದರೂ, ಕಳೆದ ಎರಡು ವರ್ಷಗಳಿಂದ ಈ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿ ಬಾಕಿ ಉಳಿದಿದೆ. ಇದರಿಂದ ಕೆರಳಿದ ನೌಕರರು ಮಂಗಳವಾರ ಜಿಲ್ಲೆಯಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿ ಬೀದಿಗೆ ಇಳಿದಿದ್ದೇವೆಂದು ಪ್ರತಿಭಟನಾಕಾರರು ಪ್ರತಿಬಟನೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬ್ಯಾಂಕಿಂಗ್ ನೌಕಕರ ವಿವಿಧ ಬೇಡಿಕೆಗಳ ವಿಚಾರವನನುನ ಉದ್ದೇಶಿಸಿ ಮಾತನಾಡಿದ ವಿಜಯ್ ಹಿರೇಮಠ ಅವರು, ಈಗಾಗಲೇ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಜಾರಿಯಲ್ಲಿದೆ. ಉಳಿದ ಶನಿವಾರಗಳನ್ನೂ ರಜಾ ದಿನಗಳೆಂದು ಘೋಷಿಸುವ ಬದಲಾಗಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ನೌಕರರು ಸಿದ್ಧರಿದ್ದಾರೆ. ಈ ಯೋಜನೆಗೆ ಐಬಿಎ ಒಪ್ಪಿಗೆ ಸೂಚಿಸಿದ್ದರೂ, ಕೇಂದ್ರ ಹಣಕಾಸು ಸಚಿವಾಲಯವು ಅಂತಿಮ ಮುದ್ರೆ ಒತ್ತಲು ವಿಳಂಬ ಮಾಡುತ್ತಿರುವುದು ನೌಕರರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಸರಕಾರ ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನೆಯ ಮೂಳಕ ಕೇಂದ್ರ ಸರಕಾರಕ್ಕೆ ಎಚ್ರಿಕೆಯನ್ನು ನೀಡಿದರು.
ಈ ವೇಳೆ ಬ್ಯಾಂಕಿಂಗ್ ಸಂಘಟನೆಯ ಪ್ರಮುಖ ಕ್ವೀರ್ಸಾಗರ್, ಸುನಿಲ್ ಎಸ್ ಸೇರಿದಂತೆ ಸಾವಿರಾರು ಬ್ಯಾಂಕ್ ನೌಕರರ ಸಿಂಬಧಿಗಳು ಉಪಸ್ಥಿತರಿದ್ದರು.
