ಬೆಳಗಾವಿ-14 : ನಗರದಲ್ಲಿ ಹೆಚ್ಚುತ್ತಿರುವ ಇರಾನ್ ಮುಖಂಡ ಅಲಿ ಖಮೇನಿಯ ಭಾವಚಿತ್ರಗಳನ್ನು ಕೂಡಲೇ ಪೊಲೀಸ್ ಇಲಾಖೆ ತೆರವುಗೊಳಿಸಬೇಕು. ಇಲ್ಲದಿದ್ದರೇ, ನಗರದಲ್ಲಿ ಅಫಲ್ಖಾನ್ ವಧೆ ಮಾಡಿದ ಛತ್ರಪತಿ ಶಿವಾಜೀ ಮಹಾರಾಜರು, ಮತ್ತು ಖಮೇನಿ ವಧೆ ಮಾಡಿದ ಇಸ್ರೇಲ್ ಪಿಎಂ ನೇತ್ಯಾನಹೂ ಭಾವಚಿತ್ರಗಳಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುತ್ತೇವೆ. ತಾಕತ್ತಿದ್ದರೇ ತೆರವುಗೊಳಿಸಿ ತೋರಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ-2 ಚಲನಚಿತ್ರವನ್ನು ಮಹಿಳೆಯರು, ಯುವತಿಯರು ಮತ್ತು ಮಕ್ಕಳನ್ನು ಕರೆದುಕೊಂಡು ಚಲನಚಿತ್ರಗ್ರಹಕ್ಕೆ ಹೋಗಿ ಪ್ರತಿಯೊಬ್ಬರು ವಿಕ್ಷಿಸಬೇಕು. ಇದೊಂದು ಮನೋರಂಜನಾತ್ಮಕ ಚಿತ್ರವಲ್ಲದೇ, ಇದರಲ್ಲಿ ಹಿಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಲವ್ ಜಿಹಾದ್ನನ್ನು ತೋರಿಸಿದ ವಾಸ್ತವಾಂಶದ ಆಧಾರಿತ ಚಲನಚಿತ್ರವಾಗಿದೆ ಎಂದರು.
ಶ್ರೀರಾಮಸೇನೆಯೂ ಲವ್ ಜಿಹಾದ್ ತಡೆಗಟ್ಟಲೂ ಸಹಾಯಣವಾಣಿ ಪ್ರಾರಂಭಿಸಿ 2 ವರ್ಷಗಳು ಗತಿಸಿದ್ದು, ಸುಮಾರು 2 ಸಾವಿರ ಕರೆಗಳು ಬಂದಿವೆ. ಅದರಲ್ಲಿ ಶೇ. 75 ರಷ್ಟು ಸಮಸ್ಯೆಯನ್ನು ಶ್ರೀರಾಮಸೇನೆಯೂ ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.
ಇನ್ನು ಕುಂಭಮೇಳದಲ್ಲಿ ಮೊನಾಲಿಸಾ ಎಂದು ಸುಪ್ರಸಿದ್ದಗೊಂಡಿದ್ದ ರುದ್ರಾಕ್ಷಿ ಮಾರುತ್ತಿದ್ದ ಯುವತಿಯನ್ನು ಫರ್ಮಾನ್ ಖಾನ್ ಎಂಬಾತ ಮದುವೆಯಾಗಿದ್ದಾನೆ. ಕೇರಳ ಮತಾಂತರದ ಕೇಂದ್ರಬಿಂದುವಾಗಿದೆ. ಮೊನಾಲಿಸಾ ಎಂದು ಪ್ರಸಿದ್ಧಿಯನ್ನು ಪಡೆದ ಯುವತಿಯೊಂದಿಗೂ ಮುಂದೊಂದು ದಿನ ಅನ್ಯಾಯವಾಗುವುದು ನಿಶ್ಚಿತ ಎಂದು ತಿಳಿಸಿದರು.
