29/01/2026
IMG-20260123-WA0015

ಬೆಳಗಾವಿ-23: ಬೆಳಗಾವಿಯ ಡಾ| ಸತ್ಯನಾರಾಯಣ್ ಅವರ ನೇತೃತ್ವದ ನಾದ ಸುಧಾ ಸುಗಮ ಸಂಗೀತ ಶಾಲೆಯ ಮಕ್ಕಳು ಮೈಸೂರಿನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿತಗೊಂಡಿತ್ತು. ನಾದಸುಧಾ ತಂಡದ ಮಕ್ಕಳಾದ ಶಾಂಭವಿ ಕುಮಾರಿ, ಗೌತಮಿ ಹಾಗೂ ಡಾ|ಸಂಪ್ರೀತಾ ನಾಗಭೂಷಣ್ ಅವರು ಭಕ್ತಿ ಸಂಗೀತ ಹಾಗೂ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿ ನೆರೆದಿದ್ದ ಜನಸ್ತೋಮದ ಮನ ಗೆದ್ದರು.
ಆತ್ಮ ಶ್ರೀ ಸಂಸ್ಥೆಯ ಅಧ್ಯಕ್ಷ ಗುಣವಂತ ಮಂಜು ಅವರ ಈ ಸಂಸ್ಥೆಯ 510 ನೇ ಕಾರ್ಯಕ್ರಮದ ರೂಪರೇಷೆಗಳನ್ನು ವಿವರಿಸಿದರು.
ಡಾ|ಗುಣವಂತ್ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ ಈ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ| ಸಿ.ಪಿ. ಕೃಷ್ಣಕುಮಾರ್ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಮಷ್ಠಿಯ ಬದುಕು ಸಮಸ್ಯಾತ್ಮಕವಾಗಿದ್ದು ಇದು ಹೋಗಿ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಇದು ಒಂದು ಕ್ರಾಂತಿ ಆಗಬೇಕು ಎಂದು ಆಶಿಸಿದರು. ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಿಲ್ಪ ಕೃಷ್ಣಮೂರ್ತಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!