23/12/2024
IMG-20240121-WA0023

ಪೀರಜಾದೆ ಆಟೋಮೊಬೈಲ್ಸ್‌ ಐದನೇಯ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಳಗಾವಿ-21: ಸಿಬ್ಬಂದಿಗಳ ಸತತ ಪರಿಶ್ರಮ, ಗ್ರಾಹಕರಿಗೆ ನೀಡಿರುವ ಗುಣಮಟ್ಟ ಸೇವೆಯಿಂದ ಪೀರಜಾದೆ ಆಟೋಮೊಬೈಲ್ಸ್‌ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಸಂಸ್ಥಾಪಕ ಎ.ಎಸ್. ಪೀರಜಾದೆ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾದ ಪೀರಜಾದೆ ಆಟೋಮೊಬೈಲ್ಸ್ ಐದನೇಯ ವಾರ್ಷಿಕೋತ್ಸವದಲ್ಲಿ ಸಿಬ್ಬಂದಿಗಳ ಅತ್ಯುತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಜಾಜ್ ಆಟೋ ಲಿಮಿಟೆಡ್ ನವರು ನಮಗೆ ಬಹಳಷ್ಟು ಶಕ್ತಿ ತುಂಬಿದ್ದಾರೆ. ಅವರ ಸಹಾಯ-ಸಹಕಾರದಿಂದ ರಾಜ್ಯದ ಮೂರು ಜಿಲ್ಲೆಯಲ್ಲಿ ಪೀರಜಾದೆ ಆಟೋಮೊಬೈಲ್ಸ್‌ ಕಾರ್ಯನಿರ್ವಸುತ್ತಿವೆ. ಬ್ಯಾಂಕಗಳ ಜೊತೆಗಿರುವ ಉತ್ತಮ ಬಾಂಧವ್ಯದಿಂದ ನಮ್ಮ ವ್ಯವಹಾರ ಸರಾಗವಾಗಿ ನಡೆಯುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಹಕರಿಗೆ ವಾಹನಗಳನ್ನು ಮಾರಾಟ ಮಾಡಿದರೆ ಸಾಲದು ಅವರ ಕುಂದುಕೊರತೆಗಳನ್ನು ತ್ವರಿತವಾಗಿ, ಸೌಜನ್ಯದಿಂದ ಪರಿಹರಿಸಬೇಕಿದೆ. ಅವರ ಸಮಸ್ಯೆಗಳನ್ನು ತೃಪ್ತಿಕರವಾಗಿ ಸ್ವೀಕರಿಸಿ ತಕ್ಷಣವೇ ಪರಿಹರಿಸುವ ಕಾರ್ಯವನ್ನು ಮಾಡಿದಾಗ ಮಾತ್ರ ಉತ್ತಮ ಕಂಪನಿ ಕಟ್ಟಲು ಸಾಧ್ಯ ಎಂದು ಹೇಳಿದರು.

ಬಜಾಜ್ ಆಟೋ ಲಿಮಿಟೆಡ್ ಸೇಲ್ಸ್ ರೀಜನಲ್ ಮ್ಯಾನೇಜರ್ ರಾಘವೇಂದ್ರ ಎ. ಅವರು ಮಾತನಾಡಿ, ಗ್ರಾಹಕರ ವಿಶ್ವಾಸ ಗಳಿಸಿ ಬಜಾಜ್ ಆಟೋ ಲಿಮಿಟೆಡ್ ಭಾರತದಲ್ಲಿ ನಂ 1 ಸ್ಥಾನದಲ್ಲಿದೆ. ಮತ್ತು 72 ದೇಶಗಳಲ್ಲಿ ವಿಸ್ತಾರಹೊಂದಿ, ಸೇವೆ ಸಲ್ಲಿಸುತ್ತಿದೆ. ಗ್ರಾಹಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಾಗ ಮಾತ್ರ ಕಂಪನಿಗಳು ಬೆಳೆಯಲು ಸಾದ್ಯ. ಅದಕ್ಕೆ ಸಿಬ್ಬಂದಿ ಶ್ರಮವೂ ಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಬಜಾಜ್ ಆಟೋ ಲಿಮಿಟೆಡ್ ಸುಮಾರು ಶೇ 82% ಮಾರುಕಟ್ಟೆ ಪಾಲು ಪಡೆದಿದೆ‌. ಇದಕ್ಕೆಲ್ಲ ಕಾರಣ ಅತ್ಯುತ್ತಮ ತಂತ್ರಜ್ಞಾನ, ಗ್ರಾಹಕರ ಸಂತೃಪ್ತಿ ಹಾಗೂ ಬ್ಯಾಂಕ್ ಮತ್ತು ಪೈನಾಸ್ಸ್ ಗಳ ಸಹಕಾರ. ರಾಜ್ಯದ ಬಜಾಬ್ ಡಿಲರ್‌ಗಳಾದ ಪಿರಜಾದೆ ಆಟೋಮೋಬೈಲ್ಸ್ ಅವರು ಕಂಪನಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ 2023 ರಲ್ಲಿ 1600 ಆಟೋ ಗಳನ್ನು ಸೆಲ್‌ ಮಾಡಿ ಕಂಪನಿಯ ಬಲವರ್ಧನೆಗೆ ಸಹಕಾರ ನೀಡಿದ್ದಾರೆ.

ಪೀರಜಾದೆ ಅವರು, ಕರ್ನಾಟಕದಲ್ಲಿ ಅತ್ಯುತ್ತಮ ಸರ್ವಿಸ್ ಡಿಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಅವರ ಶ್ರಮದಿಂದ ಪಿರಜಾದೆ ಅಟೋ ಮೊಬೈಲ್ ಐದು ವಾರ್ಷಿಕೊತ್ಸವ ಆಚರಿಸಿಕೊಳ್ಳುತ್ತಿದೆ, ಅವರು ಇನ್ನು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು. ಪಿರಜಾದೆ ಅಟೋ ಮೊಬೈಲ್ ಸೇಲ್ಸ್ ಸರ್ವಿಸ್ ಪರಿಗಣಿಸಿ ಬಜಾಜ್ ಕಂಪನಿಯರು ನಾಲ್ಕು ಚಕ್ರ ವಾಹನ ಸೇಲ್ಸ್ ಮಾಡಲು ಅನುಮತಿ ‌ನೀಡಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಬೆಳಗಾವಿ, ಬಾಗಲಕೋಟ, ವಿಜಯಪುರದಲ್ಲಿ ಕಾರ್ಯನಿರ್ವಸುತ್ತಿರುವ ಪೀರಜಾದೆ ಬಜಾಜ್‌ ಅಟೋ ಮೊಬೈಲ್ಸ್‌ ಸಿಬ್ಬಂದಿಗಳಿಗೆ ಅತ್ಯುತ್ತಮ ಸೇಲ್ಸ್‌ ಮ್ಯಾನೇಜರ್‌ , ಸೇಲ್ಸ್‌ ಸರ್ವಿಸ್‌ , ಹೀಗೆ ಹಲವಾರು ಪ್ರಶಸ್ತಿಗಳನ್ನು ಸಿಬ್ಬಂದಿಗಳಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುಖ್ತಾರ್ ಪಠಾಣ್ , ಸರ್ವಿಸ್ ಮಾನ್ಯೇಜರ್ ಆನಂತಪದ್ಮನಾಭ, ವಿಶ್ವನಾಥ ಹಾನಗಲ್, ಅನಿತಾ , ಸಿದ್ಧಲಿಂಗೇಶ್ವರ , ಪುಣೆ ಪೀಪಲ್ಸ್ ಬ್ಯಾಂಕ್ ಮ್ಯಾನೇಜರ ಜಗದೀಶ್ , ಶಹಬಾಜ್‌ , ಇಬ್ರಾನ್ ಪೀರಜಾದೆ , ಇರಪಾನ್ ಪೀರಜಾದೆ , ಎಜಾದ್ ಪೀರಜಾದೆ , ಅಪ್ತಾಬ್ ಐರಾಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!