ಎಂ.ಕೆ.ಹುಬ್ಬಳ್ಳಿ-೧೭: ಪಟ್ಟಣದ ಪೇಟೆ ಓಣಿ ಸಾರ್ವಜನಿಕ ಗಣೇಶೋತ್ಸವಕ್ಕೆ 50ನೇ ಪೂರೈಸಿದ ಹಿನ್ನೆಲೆಯಲ್ಲಿ ಗಣೇಶೋತ್ಸವ ಮಂಡಳಿ ಸುವರ್ಣ ಸಂಭ್ರಮ ಆಚರಿಸಿತು. ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನದಿಂದ ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು ಮಹಿಳೆಯರಿಂದ ಕುಂಭಮೇಳ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಸಂಭ್ರಮದ ಗಣೇಶ ಮೂರ್ತಿ ಮೆರವಣಿಗೆಯು ಜರುಗಿತು. ‘3 ದಿನ ಅನ್ನಪ್ರಸಾದ ನೆರವೇರಿತು. ಸಾಧಕರನ್ನು ಪ್ರತಿದಿನ ಸನ್ಮಾನಿಸಲಾಯಿತು. ಯುವಕರಿಂದ ಖಾಲಿ ಚಕ್ಕಡಿ ಜಗ್ಗುವ ಶರ್ಯತ್ತು, ಶ್ರೀಗಳ ಪ್ರವಚನ, ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ ಜನಮನ ಸೆಳೆಯಿತು. ರಂಗೋಲಿ ಸ್ಪರ್ಧೆಯೂ ಜರುಗಿತು. ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಿಜೆಪಿ ಯುವ ನಾಯಕಿ ಲಕ್ಷ್ಮೀ ಇನಾಮದಾರ, ಮಾಜಿ ಝೆಡ್ ಪಿ ಪಕೀರಪ್ಪ ಸಕ್ರೆನ್ನವರ್,ದಿಗ್ವಿಜಯ್ ಸಿದ್ನಾಳ್,ಸರಿಗಮಪ ಸುಜಾತ ಕಲ್ಮೇಶ್ ಹುಚ್ಚಾನಟ್ಟಿ ,ಎಂ ಕೆ ಹುಬ್ಬಳ್ಳಿ ಪಟ್ಟಣದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,ಕಮಿಟಿಯ ಅಧ್ಯಕ್ಷ ವಿನೋದ್ ಎಲಿಗಾರ್, ಬಸವರಾಜ್ ವಾಲಿ, ವಿಠ್ಠಲ್ ನನ್ನುರ್, ರಾಜು ಪತ್ತಾರ್, ರಾಜು ಮುತ್ನಾಳ, ಪ್ರಕಾಶ್ ಹಲಸಗಿ,ಬಸವರಾಜು ಗಾಣಿಗೇರ್, ಪ್ರಕಾಶ್ ಶಿಗಿಹಳ್ಳಿ, ಪ್ರಶಾಂತ್ ಪುಟ್ಟಿ, ಪ್ರತಿಕ ಇಟಗಿ, ಇನ್ನುಳಿದ ಎಲ್ಲ ಸದಸ್ಯರು ಹಾಜರಿದ್ದರು.ಎಲ್ಲಾ ಕಾರ್ಯಕ್ರಮವನ್ನು ವಿಜಯರಾವತ್ ನೆರವೇರಿಸಿ ಕೊಟ್ಟರು.