ಬೆಂಗಳೂರು-12: ಖ್ಯಾತ ನಿರೂಪಕಿ, ನಟಿ ಅಪ್ಪಟ ಕನ್ನಡದ ವಾಕ್ ಚಾತುರ್ಯೇ ಅಪರ್ಣಾ ಗುರುವಾರ ಗಂಟಲು ಕ್ಯಾನ್ಸರ್ ನಿಂದ ಕೊನೆಯುಸಿರು ಎಳೆದರು.
ತಮ್ಮ ನಿರರ್ಗಳ ಕನ್ನಡ ಹಾಗೂ ಇಂಗ್ಲಿಷ್ ಮಾತಿನಿಂದ ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದ್ದರು. ಹಲವಾರು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮ ಗಳಲ್ಲಿ ನಿರೂಪಕಿಯಾಗಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಇವರು ಕೆಲಸ ಮಾಡಿದ್ದರು. ಇವರ ಅಗಲಿಕೆ ಕನ್ನಡಿಗರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಕೊನೆಗೂ ಬದುಕಿನ ನಿರೂಪಣೆಗೆ ವಂದನಾರ್ಪಣೆ ಹೇಳಿದರು.