23/12/2024
IMG-20240711-WA0073

ಸ್ವಚ್ಛ ಕನ್ನಡದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ಧಿ ಕೇಳಿ ದಿಗ್ಭ್ರಮೆಯಾಗಿದೆ.

ಕನ್ನಡದ‌ ಬೆಳ್ಳಿತೆರೆ, ಕಿರುತೆರೆಯಲ್ಲಿ ನಟಿಸಿದ್ದ ಅಪರ್ಣಾರವರು, ಲಕ್ಷಾಂತರ ಕಾರ್ಯಕ್ರಮಗಳನ್ನು ನಿರೂಪಿಸಿದ್ದರು‌.

ನಾನು ಸಚಿವೆಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದರು. ಆತ್ಮೀಯ ಗೆಳತಿ ಅಪರ್ಣಾ ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
ಲಕ್ಷ್ಮೀ ಹೆಬ್ಬಾಳಕರ್-ಸಚಿವೆ

error: Content is protected !!