23/12/2024
IMG-20240712-WA0005

ಬೆಳಗಾವಿ-12: ಬೆಳಗಾವಿ ಗ್ರಾಮೀ‌ಣ ಕ್ಷೇತ್ರದ ನ್ಯೂ ವೈಭವ್ ನಗರದ ನೂತನ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆಯನ್ನು‌ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೌಸರ್ ಜಹಾನ್ ಸೈಯದ್, ಸದಸ್ಯರಾದ ಫಕೀರವ್ವ ಬೆಳಗಾವಿ, ಸುವರ್ಣ ಲಕ್ಕಣ್ಣವರ, ಅರ್ಚನಾ ಪಠಾಣಿ, ಅಯೂಬ್ ಖಾನ್ ಪಠಾಣ, ಬಂಡೆ ನವಾಜ್ ಸೈಯದ್, ಷರೀಫ್ ಸನದಿ, ರಂಜಾನ್ ಮನಿಯಾರ‌ ಮುಂತಾದವರು ಉಪಸ್ಥಿತರಿದ್ದರು.
ನಂತರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ.ಎಚ್ ಗ್ರಾಮದ ರಜಾಕ್ ಕಾಲೋನಿಯ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ಕೈಗೊಂಡು ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.

ಈ ಸಮಯದಲ್ಲಿ ಖತಾಲ್ ಮುಜಾವರ್, ಯೂನುಸ್ ಕಾಕತಿ, ಖಲೀಂ ಮುಲ್ಲಾ ಹಾಗೂ ಜಮಾತ್ ನ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!