20/04/2026

ಡಾ, ಭವ್ಯಾ ಸಂಪಗಾರ, ವಚನ ಸಾಹಿತ್ಯದಲ್ಲಿ ಪರಮ ಜ್ಞಾನಿಗಳಾದ ಶರಣ ಸಂಕುಲವು ವಿವಿಧ ವಿಷಯಗಳ ಬಗ್ಗೆ ಅಂದರೆ ಖಗೋಳ, ಆರೋಗ್ಯ, ಸಾಮಾಜಿಕತೆ, ದಾಂಪತ್ಯ,ಇಂದ್ರಿಯಾತೀತ ಜ್ಞಾನಗಳನ್ನು ನಮಗೆ ತಿಳಿಸಿದ್ದಾರೆ. ಆಧುನಿಕ ಅತ್ಯದ್ಬುತ ಅನ್ವೇಷಣೆಗಳಲ್ಲಿ ಅತ್ಯಂತ ಶ್ರೇಷ್ಠ ಮತ್ತು ಉಪಯುಕ್ತವಾದ ವೈದ್ಯೆ ವಿಜ್ಞಾನದ ಆಳವಾದ ಅಧ್ಯಯನವನ್ನು ಹನ್ನೇರಡನೆ ಶತಮಾನದಲ್ಲಿ ಶರಣರು ಮಾಡಿದ್ದಾರೆ ಎನ್ನಲು ಲಭ್ಯವಾಗಿರುವ ವಚನಗಳೆ ಸಾಕ್ಷಿ ಎಂದರು. ಹಲವಾರು ಶರಣರ ವಚನಗಳನ್ನು ವಿವರಿಸುತ್ತಾ . “ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ “ ಎಂಬ ವಚನವನ್ನು ವಿವರಿಸುತ್ತಾ ಶರಣ ಸಂಕುಲಕ್ಕೆ ವೈದ್ಯ ವಿಜ್ಞಾನದ ಅರಿವು ಇತ್ತು ಎಂಬುದು ತಿಳಿದು ಬರುತ್ತದೆ ಎಂದರು. ಆದರೆ ವೈದ್ಯ ಲೋಕಕ್ಕೆ ಪಾಶ್ಚಿಮಾತ್ಯರ ಕೊಡುಗೆಗಳನ್ನು ಸಂಭ್ರಮಿಸುತ್ತಿರುವ ನಾವು ನಮ್ಮವರೇ ಆದ ಶರಣರ ಜ್ಞಾನಕ್ಕೆ ಗೌರವ ಕೊಡದಿರುವುದು ನಾಚಿಕೆಯ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಯುವ ಜನತೆಗೆ ಶರಣ ಸಾಹಿತ್ಯವನ್ನು ಪರಿಚಯಿಸಬೇಕು, ವೈದ್ಯ ಲೋಕದ ಅಧ್ಯಯನ ಎಲ್ಲರಿಗೂ ಸಾಧ್ಯವಿಲ್ಲದೆ ಇರಬಹುದು ಆದರೆ ಶರಣರ ವಚನಗಳಲ್ಲಿ ಸಾಮಾನ್ಯರು ಆರೋಗ್ಯ ಶಾಸ್ತ್ರವನ್ನು ತಿಳಿಯಬಹುದು ಎಂದು
ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ದಿನಾಂಕ 18,04,2026ರಂದು ಆಚರಣೆಯ ಸಮಯದಲ್ಲಿ ಶರಣ ವಸಂತ ಬ ತೋರಣಗಟ್ಟಿ ವೇದಿಕೆಯಲ್ಲಿ ಭವ್ಯಾ ಸಂಪಗಾರ ಅವರು ತಮ್ಮ ಉಪನ್ಯಾಸದ ಸಮಯದಲ್ಲಿ ಹೇಳಿದರು.

   ಪೂಜ್ಯ ವಾಗ್ದೇವಿ ತಾಯಿಯವರು ತಮ್ಮ ಆಶಿರ್ವಚನದಲ್ಲಿ ಮನುಷ್ಯ ತನ್ನ ತಾನು ಮೊದಲು ತಿಳಿಯಬೇಕು. ಅಗ್ಘ ವನಿ ಪತ್ರೆಯ ತಂದು ಎಂದು ವಚನ ವಿವರಿಸುತ್ತಾ ಅಗ್ಘವನಿ ಅಂದರೆ ತಿಳಿ ನೀರು ಅಂದರೆ ತಿಳಿ ನೀ ಇರು ಅಂದರೆ ನಿನ್ನನ್ನು ನೀ ತಿಳಿದಿರು ಎಂಬರ್ಥವಾದರೆ ಪತ್ರೆಯಂದರೆ ಹಸುರಿನ ಸಂಕೇತ ಅಷ್ಟೇ ಅಲ್ಲದೆ ಪತ್ರೆ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಬೆಳಿಗ್ಗೆ ಎದ್ದು ಬರಿ ಹೊಟ್ಟೆಯಲ್ಲಿ ಪತ್ರೆ ತಿನ್ನಬೇಕು ಪಾತ್ರೆಗೆ ಸರ್ವರೋಗ ನಿವಾರಕ  ಶಕ್ತಿ ಇದೆ ಎಂದು ಹೇಳಿದರು. ಅರಿದೊಡೆ ಶರಣ ಮರೆದೊಡೆ ಮಾನವ ಮನುಷ್ಯನಾದವನು ತನ್ನ ತಾನು ತಿಕ್ಕಿ ತಿಕ್ಕಿ ಬೆಳಗು ಕನ್ನಡಿಯಾಗಬೇಕು ಪ್ರಕೃತಿಯ ಜೊತೆಗೆ ಬೆರೆತು ಉತ್ತಮ ಆರೋಗ್ಯ ಹೊಂದಬೇಕು ದೇಹ ಮತ್ತು ಮನಸ್ಸಸ್ಥಿತಿ  ಉತ್ತಮವಾಗಿರಲು ಇದ್ದುದರಲ್ಲಿ ಸಂತೃಪ್ತಿ ಹೊಂದಿ ನಿರಾಳ ಭಾವದಿಂದ ಇದ್ದರೆ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯವೆಂದು ಹೇಳಿದರು 

ಪೂಜ್ಯ ಕುಮುದಿನಿ ತಾಯಿಯವರು ವಚನ ಗಾಯನ ಮಾಡಿದರು, ಬಿ , ಈ. ಎಂ, ಎಸ್. ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ಸಂಘದ ಶರಣೆಯರು ಆಯ್ದಕ್ಕಿ ಲಕ್ಕಮ್ಮ ನಾಟಕ ಪ್ರಸ್ತುತ ಪಡಿಸಿದರು, ಅಧ್ಯಕ್ಷರಾದ ಎಸ್ ಜಿ ಸಿದ್ನಾಳರು ಅಧ್ಯಕ್ಷಿಯ ನುಡಿಗಳನ್ನು ಆಡಿದರು, ಶಂಕರ ಶೆಟ್ಟಿ ಸಂಘ ನಡೆದು ಬಂದ ದಾರಿ ಹೇಳಿದರು , ವಚನ ಪ್ರಾರ್ಥನೆ ಶರಣೆಯರಾದ ಶೈಲೇಜಾ ಮುನವಳ್ಳಿ, ಸುನಿತಾ ನಂದೆಣ್ಣವರ, ತ್ರಿವೇಣಿ ಪಾಟಿಲ ಮಾಡಿದರು ಪರಿಚಯ ಮಹಾದೇವ ಕೊರಿ ಮಾಡಿದರು, ಸ್ವಾಗತ, ಪ್ರಾಸ್ತಾವಿಕ,ನಿರೂಪಣೆ ಮತ್ತು ವಂದನಾರ್ಪಣೆ ಶ್ರೀಕಾಂತ್ ಶಾನವಾಡ ನಡೆಸಿಕೊಟ್ಟರು. ಷಟಸ್ಥಲ ಧ್ವಜಾರೋಹಣ ಶರಣ ದಂಪತಿಗಳಾದ ವಿನೋದಾ ಕೆಂಗನಾಳ ಶಂಕರ ಕೆಂಗನಾಳ ನಡೆಸಿ ಕೊಟ್ಟರು ದಾಸೋಹ ಸೇವೆಯನ್ನು ಜೆ ಎಸ್ ನರಸಣ್ಣವರ ಡಿ ಜಿ ಬಾಗೆವಾಡಿ , ಶಂಕರ ಕೆಂಗನಾಳ, ಮತ್ತು ಶೈಲೇಜಾ ಮುನವಳ್ಳಿ ಅವರು ಮಾಡಿದರು. ಶರಣರಾದ ಕಟ್ಟಿಮನಿ ದುಂಡಪ್ಪಾ ಸಂಕೇಶ್ವರ, ಮೋಹನ್ ಮುನವಳ್ಳಿ, ರುದ್ರಗೌಡರ ಡಾ , ಮಗದುಮ ಶರಣೆಯರಾದ ಉಮಾ ಸಂಕೇಶ್ವರ, ಭಾರತಿ ಮಗದುಮ, ಅನುಪಮಾ ಶಾನವಾಡ, ಪ್ರೇಮಾ ಪುರಾನಿಕ ಮಠ ಇನ್ನೂ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!