19/06/2026
IMG-20260615-WA0007

ಬೆಳಗಾವಿ-17 : ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಡಳಿತದವು ಶೀಘ್ರ ಪರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸೋಮವಾರ ವಿವಿಧ ಬೇಡಿಕೆಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ನೂರಾರು ರೈತರು ಪತ್ರಿಭಟನೆ ನಡೆಸಿದರು. ರೈತರ ಜಮೀನುಗಳ 7/12 ಉತಾರಗಳನ್ನು ಕಂದಾಯ ಇಲಾಖೆ ಒಟ್ಟುಗೂಡಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಹಿಂದೆ ಇದ್ದಂತೆ ಪ್ರತ್ಯೇಕ ಉತಾರಗಳನ್ನು ನೀಡುವಂತೆ ಒತ್ತಾಯಿಸಲಾಗಿದೆ. ಅಲ್ಲದೇ, ಕೆಲವು ಜಮೀನುಗಳಿಗೆ ಸರಕಾರಿ ಮಾರ್ಗಗಳ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಗತ್ಯವಿರುವ ಕಡೆಗಳಲ್ಲಿ ಸರಕಾರದಿಂದ ಮಾರ್ಗಗಳನ್ನು ನಿರ್ಮಿಸಿಕೊಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ರಾಸಾಯನಿಕ ಗೊಬ್ಬರಗಳ ಬೆಲೆ ಅತಿಯಾಗಿ ಏರಿಕೆಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂರಿಯಾ ಗೊಬ್ಬರದ ದರ ಕಡಿಮೆ ಮಾಡಬೇಕು, ಹಾಗೂ ನ್ಯಾನೋ ಉತ್ಪನ್ನಗಳನ್ನು ನೀಡಿ ಹೆಚ್ಚುವರಿ ಹಣ ವಸೂಲಿ ಮಾಡುತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ವೇತನ ನೀಡುವುದರ ಜೊತೆಗೆ, ಗ್ರಾಮ ಪಂಚಾಯಿತಿಗಳ ಮೂಲಕ ರೈತರ ಜಮೀನುಗಳಲ್ಲಿ ಕೃಷಿ ಕಾರ್ಯಗಳಿಗೆ ಅವರನ್ನು ನಿಯೋಜಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ನೀಡಲಾಗುತ್ತಿದ್ದ ಮನೆಗಳ ಕಂಪ್ಯೂಟರ್ ಉತಾರಗಳ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಪುನಃ ಆರಂಭಿಸಬೇಕೆಂದರು.
ಇದಲ್ಲದೆ, ಬೆಳಗಾವಿ ಎಪಿಎಂಸಿ ಆವರಣದಲ್ಲಿ ರೈತರಿಗಾಗಿ ನಿರ್ಮಿಸಲಾಗಿದ್ದ ‘ಸಂಡೇ ಮಾರ್ಕೆಟ್’ ಪ್ರಾಂಗಣವನ್ನು ಖಾಸಗಿ ಮಾರುಕಟ್ಟೆಯವರಿಗೆ ವ್ಯಾಪಾರಕ್ಕಾಗಿ ನೀಡಿರುವುದರಿಂದ ರೈತರು ರಸ್ತೆ ಬದಿಯಲ್ಲಿ ನಿಂತು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೋರ ಹಾಕಿದರು.
ರೈತರು ಅನಿಭವಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಬಸವರಾಜ ರು. ಮೊಕಾಶಿ, ಕುಮಾರ ಶಿ. ನಾವಿ, ರೈತ ಮುಖಂಡ ಪರಶುರಾಮ ಸ. ರೇಡೇಕರ, ಪಾರ್ವತಿ ಈ. ಕಳಸಣ್ಣವರ, ಬಸವರಾಜ ಕ. ಪಾಟೀಲ, ಮಾರುತಿ ಪ. ಬುರ್ಲಿ, ಕಲಗೌಡ ಬಾ. ಪಾಟೀಲ, ವೈಜು ಲ. ಲೂಮ್ಯಾಚೆ ಅಮೃತ ಕ. ಮುದ್ದೆಣ್ಣವರ ಸೇರಿದಂತೆ ಹಲವರು ರೈತ ಮುಖಂಡರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!