19/06/2026
IMG-20260618-WA0020

ಬೆಳಗಾವಿ-18: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸತತ 4,400ಅಧಿಕ ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ದೇಶದಲ್ಲಿ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಐತಿಹಾಸಿಕ ದಾಖಲೆ ಬರೆದಿರುವ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಕಾರ್ಯ ಶ್ಲಾಘನೀಯವಾಗಿದ್ದು ಸಮಸ್ತ ದೇಶಾಭಿಮಾನಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಸಲ್ಲಿಸಿದ್ದಾರೆ.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಹೊಂದಿದ್ದ 4,398 ದಿನಗಳ ನಿರಂತರ ಚುನಾಯಿತ ಆಡಳಿತದ ದಾಖಲೆಯನ್ನು ಮೋದಿ ಜೀ ಅವರು ಯಶಸ್ವಿಯಾಗಿ ದಾಟಿದ್ದು, ಇದು ಭಾರತದ ರಾಜಕೀಯ ಚರಿತ್ರೆಯಲ್ಲೇ ಒಂದು ಅಭೂತಪೂರ್ವ ಸುವರ್ಣ ಮೈಲಿಗಲ್ಲಾಗಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ ರಾಜ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಜನಸೇವೆಯ ಪಯಣವು ದೇಶದ 140 ಕೋಟಿ ನಾಗರಿಕರ ಅಚಲ ವಿಶ್ವಾಸದ ಪ್ರತೀಕವಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅವರ ದೂರದರ್ಶಿತ್ವದ ನಾಯಕತ್ವವು ಭಾರತದ ಅಭಿವೃದ್ಧಿಯ ಪಥವನ್ನೇ ಸಂಪೂರ್ಣವಾಗ ಬದಲಾಯಿಸಿದೆ. ‘ಅಂತ್ಯೋದಯ’ ತತ್ವದಡಿ ಆಡಳಿತವನ್ನು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಸಾಧನವನ್ನಾಗಿ ಮಾಡುವ ಮೂಲಕ, ಪ್ರಗತಿಯ ಫಲಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದಾರೆ. ಅವರ ಜನಪರ ಯೋಜನೆಗಳ ದೃಢ ಅನುಷ್ಠಾನದಿಂದಾಗಿ ದೇಶದ 25 ಕೋಟಿಗೂ ಹೆಚ್ಚು ಜನರು ಬಹು ಆಯಾಮದ ಬಡತನದಿಂದ ಮುಕ್ತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.
ಮೋದಿ ಜೀ ಅವರು ದೇಶದ ಯುವಸಮೂಹವನ್ನು ಕೇವಲ ಮತದಾರರನ್ನಾಗಿ ನೋಡದೆ, ನವ ಭಾರತದ ನಿರ್ಮಾಣದ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ. ಕೇಂದ್ರದ ಎನ್‌ಡಿಎ ಸರ್ಕಾರವು ಯುವಜನರಿಗಾಗಿ ಜಾರಿಗೆ ತಂದಿರುವ ಕ್ರಾಂತಿಕಾರಿ ಯೋಜನೆಗಳಾದ, ಪ್ರಧಾನಮಂತ್ರಿ ಮುದ್ರಾ ಯೋಜನೆ’ಯಡಿ ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡುವ ಮೂಲಕ ದೇಶದ ಕೋಟ್ಯಂತರ ಉದ್ಯೋಗಾಕಾಂಕ್ಷಿ ಯುವಕರನ್ನು ಸ್ವಾವಲಂಬಿ ಉದ್ಯೋಗದಾತರನ್ನಾಗಿ ಮಾಡಲಾಗಿದೆ ಎಂದರು. ಇದರೊಂದಿಗೆ ‘ಸ್ಟಾರ್ಟ್-ಅಪ್ ಇಂಡಿಯಾ’ ಮತ್ತು ‘ಸ್ಟ್ಯಾಂಡ್-ಅಪ್ ಇಂಡಿಯಾ’ ಯೋಜನೆಗಳ ಯಶಸ್ವಿ ಅನುಷ್ಠಾನದಿಂದಾಗಿ ಇಂದು ಭಾರತವು ಜಾಗತಿಕ ಮಟ್ಟದಲ್ಲಿ 3ನೇ ಅತಿ ದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಲು ನಮ್ಮ ಯುವಕರ ನಾವೀನ್ಯತೆಯೇ ಕಾರಣವಾಗಿದೆ.
ಯುವಕರ ಕೈಗಾರಿಕಾ ಆಧಾರಿತ ಕೌಶಲ್ಯಾಭಿವೃದ್ಧಿಗಾಗಿ ‘ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ’ (PMKVY) ಮೂಲಕ ತರಬೇತಿ ನೀಡಲಾಗುತ್ತಿದ್ದು, ಇತ್ತೀಚಿನ ‘ಪಿಎಂ ಇಂಟರ್ನ್‌ಶಿಪ್ ಯೋಜನೆ’ಯೂ ದೇಶದ ಅಗ್ರ 500 ಕಾರ್ಪೊರೇಟ್ ಕಂಪನಿಗಳಲ್ಲಿ ಗ್ರಾಜುಯೇಟ್ ಯುವಕರು ನೇರ ಪ್ರಾಯೋಗಿಕ ಅನುಭವ ಹಾಗೂ ಮಾಸಿಕ ಸ್ಟೈಫಂಡ್ ಪಡೆಯಲು ದಾರಿದೀಪವಾಗಿದೆ ಎಂದು ತಿಳಿಸಿದರು.
ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ರಾಷ್ಟ್ರದ ಪ್ರಥಮ ಶಿಕ್ಷಣ ನೀತಿ (NEP)ಯಿಂದ, ಬ್ರಿಟಿಷರ ಕಾಲದ ಹಳೇ ಪದ್ಧತಿಯನ್ನು ಬದಲಾಯಿಸಿ, ಪ್ರಾಯೋಗಿಕ ಮತ್ತು ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ನೀಡಿದೆ. ಕ್ರೀಡಾ ರಂಗದಲ್ಲಿ ‘ಖೇಲೋ ಇಂಡಿಯಾ’ ಯೋಜನೆಯು ಬೆಳಗಾವಿ ಜಿಲ್ಲೆ ಸೇರಿದಂತೆ ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಒಲಿಂಪಿಕ್ಸ್‌ನಂತಹ ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವಜ ಎತ್ತಿಹಿಡಿಯಲು ಆರ್ಥಿಕ ಹಾಗೂ ತರಬೇತಿಯ ಬೆಂಬಲ ನೀಡುತ್ತಿದೆ ಎಂದರು.
ಡಿಜಿಟಲ್ ಇಂಡಿಯಾ ಕ್ರಾಂತಿಯ ಮೂಲಕ ಅಗ್ಗದ ಮತ್ತು ವೇಗದ ಇಂಟರ್ನೆಟ್ ಒದಗಿಸಿರುವುದರಿಂದ ಇಂದು ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಯುವಕರೂ ಸಹ ಮನೆಯಲ್ಲೇ ಕುಳಿತು ಜಾಗತಿಕ ಮಟ್ಟದಲ್ಲಿ ಫ್ರೀಲ್ಯಾನ್ಸಿಂಗ್, ಕಂಟೆಂಟ್ ಕ್ರಿಯೇಷನ್ ಮತ್ತು ಆನ್‌ಲೈನ್ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಎಫ್.ಎಸ್.ಸಿದ್ದನಗೌಡರ ಹರ್ಷ ವ್ಯಕ್ತಪಡಿಸಿದರು.
ಆರು ದಶಕಗಳ ನಂತರ ದೇಶದ ಜನತೆ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಐತಿಹಾಸಿಕ ಜನಾದೇಶ ನೀಡಿದ್ದು, ದೇಶದ ಪ್ರತಿಯೊಬ್ಬ ಯುವಕನೂ ಮೋದಿ ಜೀ ಅವರ ಸಂಕಲ್ಪದಂತೆ 2047ರ ವೇಳೆಗೆ ಸ್ವಾವಲಂಬಿ ‘ಆತ್ಮನಿರ್ಭರ ಭಾರತ’ ರೈತರ ಆದಾಯ ದ್ವಿಗುಣ ಹಾಗೂ ಸುದೃಢ ‘ವಿಕಸಿತ ಭಾರತ’ದ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಜಮ್ಮು ಕಾಶ್ಮೀರದಲ್ಲಿ 370 ರದ್ದತಿ, ಹಿಂದೂ ಹೆಣ್ಣುಮಕ್ಕಳಂತೆ‌ ವಿವಾಹಿತ ಮುಸ್ಲಿಂ ‌ಮಹಿಳೆಯರು ಸ್ವಾಭಿಮಾನದ ಬದುಕಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ತ್ರೀತಲಾಕ ರದ್ದತಿ, ರಾಮ ಮಂದಿರ‌ನಿರ್ಮಾಣ, ರೈಲ್ವೇ ಆಧುನಿಕರಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಜಗತ್ತೆ ಸಂಕಷ್ಟದಲ್ಲಿದ್ದರು ಭಾರತ ಸುಭದ್ರವಾಗಿರುವಂತೆ‌ ನೋಡಿಕೊಳ್ಳುತ್ತಿರುವ ಮೋದಿಜಿ‌ಸಾಧನೆಗೆ ನಮ್ಮದೊಂದು ಸಲಾಂ ಇರಲೆಬೇಕು ಎಂದಿದ್ದಾರೆ.

*”12 ವರ್ಷಗಳ ಯಶಸ್ಸನ್ನು ಕಾರ್ಯಕರ್ತರಿಗೆ ಸಮರ್ಪಿಸಿದ ಪ್ರಧಾನಿ ಮೋದಿ ನಡೆ ಪರಮ ಹೆಮ್ಮೆಯ ಕ್ಷಣ” — “ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ತಮ್ಮ ಈ ಐತಿಹಾಸಿಕ 4,400 ಅಧಿಕ ದಿನಗಳಲ್ಲಿ 100ದೇಶಗಳ ವಿದೇಶ ಪ್ರವಾಸದಲ್ಲಿ ಭಾರತವನ್ನು ಜಗದ್ಗುರವನ್ನಾಗಿಸುವ ಮೂಲಕ ಮಾಡಿದ ಜನಸೇವೆಯ ದಾಖಲೆಯನ್ನು ಸಂಪೂರ್ಣ ಶ್ರೇಯಸ್ಸನ್ನು ತಳಮಟ್ಟದ ನಿಷ್ಠಾವಂತ ‘ಬಿಜೆಪಿ ಕಾರ್ಯಕರ್ತರಿಗೆ’ ಸಮರ್ಪಿಸಿರುವುದು ನಮಗೆಲ್ಲಾ ಅಪಾರ ಹೆಮ್ಮೆ ತಂದಿದೆ. ತಮ್ಮ ವೈಯಕ್ತಿಕ ಸಾಧನೆಗಿಂತ ಬೂತ್ ಮಟ್ಟದ ಕಾರ್ಯಕರ್ತರ ಬೆವರನ್ನು ಗೌರವಿಸಿದ ಅವರ ವಿನಮ್ರತೆ ಜಿಲ್ಲೆಯ ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರಲ್ಲಿ ಪ್ರತಿಯೊಬ್ಬರಲ್ಲೂ ಹೊಸ ಉತ್ಸಾಹ ತುಂಬಿದೆ.”*

Leave a Reply

Your email address will not be published. Required fields are marked *

error: Content is protected !!