17/06/2026
IMG-20260615-WA0015

ಬೆಳಗಾವಿ-17 :ಎಸ್,ಐ,ಆರ್ (sir) (ವಿಶೇಷ ತೀವ್ರ ಪರಿಶೀಲನೆ) ವಿರೋಧಿಸಿ ಕರ್ನಾಟಕ ಮಾರ್ಗ-2 ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸೋಮವಾರ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾಗರಿಕರು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾ ಲಿ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಕರ್ನಾಟಕ ರಾಜ್ಯದಲ್ಲಿ SIR ಪದ್ಧತಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಅವಕಾಶ ನೀಡುವುದಿ̧ಲ್ಲ, ಯಾವುದೇ ರೀತಿಯ ದುಷ್ಟ ಆಟಕ್ಕೆ ಇಲ್ಲಿನ ನಾಗರಿಕರು ಅವಕಾಶ ನೀಡುವುದಿಲ್ಲಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, “ಸಂತ-ಶರಣರ ನಾಡಾದ ಕರ್ನಾಟಕದಲ್ಲಿ ಮೋಸ ಮತ್ತು ವಂಚನೆಗೆ ಅವಕಾಶವಿಲ್ಲ” ಎಂಬ ಘೋಷಣೆಗಳು ಪ್ರತಿಭಟನೆಯುದ್ದಕ್ಕೂ ಮೊಳಗಿದವು.
ಕರ್ನಾಟಕ ರಾಜ್ಯದಲ್ಲಿ SIR ಪದ್ಧತಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವಿಚಾರದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಹಾಜರಿದ್ದರು .

Leave a Reply

Your email address will not be published. Required fields are marked *

error: Content is protected !!