ಸ್ತ್ರೀ ಸಮಾನತೆಯ ಹರಿಕಾರ ಬಸವಣ್ಣ: ಡಾ. ವೀಣಾ ಎಲಿಗಾರ
ಬೆಳಗಾವಿ– 19: ಇಂದಿಗೂ ಸಾಧ್ಯವಾಗದ ಸ್ತ್ರೀ ಸಮಾನತೆ 12ನೇ ಶತಮಾನದ ಮಾನವತಾವಾದಿ ಬಸವಣ್ಣನವರು ಮಹಿಳೆಯರ ಆತ್ಮಬಲವನ್ನ ಹೆಚ್ಚಿಸಿದರು. ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಸಾಹಿತಿ ಡಾ. ವೀಣಾ ಎಲಿಗಾರ ಹೇಳಿದರು. ಅವರು ಬಸವ ಜಯಂತಿ ಅಂಗವಾಗಿ ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಮಹಿಳಾ ಘೋಷ್ಠಿಯಲ್ಲಿ ಶಿವಶರಣರು ಕಂಡ ಬಸವಣ್ಣ ವಿಷಯದ ಮೇಲೆ ಅನುಭವ ಚಿಂತನೆ ಮಾಡಿದರು.
ಬಸವಣ್ಣವರು ಒಂದು ಕಾಲಘಟ್ಟದಲ್ಲಿ ನಿಂತು ವರ್ಗ ವರ್ಣ ಲಿಂಗ ಸಮಾನತೆಗಳನ್ನ ಕಲ್ಪಿಸಿದ್ದು ಸಾಮಾನ್ಯ ಕಾರ್ಯವಲ್ಲ. ಮಹಿಳೆ ಪುರುಷನಷ್ಟೇ ಸರಿಸಮಾನ ಎಂಬ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದರು. ಕಾಯಕದಲ್ಲಿ ಸಮಾನ ಅವಕಾಶವನ್ನು ನೀಡಿದರು. ಅವಳ ಅಭಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದರು. ಅನುಭವ ಮಂಟಪದಲ್ಲಿ ಮಹಿಳೆಯರ ವಿಚಾರಕ್ರಾಂತಿಗೆ ಕರೆ ನೀಡಿದರು. ಇಂದು ಮಹಿಳಾ ಮೀಸಲಾತಿಯನ್ನು ಹತ್ತಿಕುತ್ತಿರುವ ಸಮಯದಲ್ಲಿ ಅಣ್ಣ ಬಸವಣ್ಣನವರು ಇಡೀ ಭಾರತಕ್ಕೆ ಹಾಗೂ ಮಾನವ ಕೋಟಿಗೆ ಆದರ್ಶವಾಗಿ ನಿಲ್ಲುತ್ತಾರೆ. ಅಂತೆ 12ನೇ ಶತಮಾನದ ಅಸಂಖ್ಯ ಶರಣ ಶರಣೀಯರು ಬಸವಣ್ಣನವರನ್ನು ತಮ್ಮ ವಚನಗಳಲ್ಲಿ ಅಗಾಧವಾಗಿ ಸ್ಮರಿಸಿದ್ದಾರೆ. ಅವರ ಸಾಧನೆಗಳನ್ನು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಅಮುಗೆ ರಾಯಮ್ಮ, ಲಕ್ಕಮ್ಮ , ಅಲ್ಲಮ ಪ್ರಭುದೇವ, ಸಿದ್ದರಾಮ, ಚನ್ನ ಬಸವಣ್ಣ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ ಮೊದಲಾದ ಶರಣರ ವಚನಗಳಲ್ಲಿ ಬಸವಣ್ಣನವರು ಉಲ್ಲೇಖ ಗೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಆಗಿದೆ. ಬಸವಣ್ಣನವರು ಭಕ್ತಿ ಭಂಡಾರಿ ಆಗಿ, ವಿಶ್ವಗುರು ಆಗಿ ನೀಡಿರುವ ಸಂದೇಶ ಯುಗ ಯುಗಗಳು ಕಳೆದರೂ ಅಮರವಾಗಿ ಉಳಿದಿವೆ. ಒತ್ತಡದ ಬದುಕಿಗೆ ಅವರ ವಚನಗಳು ದಿವ್ಯ ಔಷಧಿಯಂತಿವೆ. ನಿತ್ಯ ಬದುಕಿಗೆ ಅಳವಡಿಸಿಕೊಂಡಿದ್ದೆ ಆದರೆ ಜೀವನ ಸಫಲವಾಗುವುದು. ಅಂತಹ ಯುವ ಪುರುಷ ಬಸವಣ್ಣನವರನ್ನು ವಿಶ್ವದ ಅನೇಕ ದೇಶಗಳು ಸ್ಮರಿಸುತ್ತೇವೆ. ಅವರ ತತ್ವದಲ್ಲಿ ಸಾಗೋಣವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಜಿಲ್ಲಾ ಘಟಕ ಅಧ್ಯಕ್ಷ ರತ್ನಪ್ರಭಾ ಬೆಲ್ಲದವರು ಮಾತನಾಡುತ್ತಾ, ಬಸವಣ್ಣವರು ಮಹಿಳಾ ಕುಲ ಉದ್ಧಾರಕರಾಗಿ ಸಮಾಜವನ್ನು ಎಚ್ಚರಿಸಿದ ಮಹಾನ್ ದಾರ್ಶನಿಕರು. ಮಹಿಳೆಯರನ್ನು ಸಾಮಾಜಿಕ ಮತ್ತು ಧಾರ್ಮಿಕವಾಗಿ ಮುಕ್ತರನ್ನಾಗಿ ಮಾಡಿ ಅವರನ್ನೂ ಸ್ವಾಭಿಮಾನಿಗಳನ್ನಾಗಿ ಮಾಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಯಾವ ದೇಶದವರು ಸಾಧಿಸದ್ದನ್ನು ಬಸವಣ್ಣವರು 800 ವರ್ಷಗಳ ಹಿಂದೆ ಸಾಧಿಸಿ ತೋರಿಸಿದರು. ಮಹಿಳಾ ಸಮಾಜದ ನಿಜವಾದ ಹರಿಕಾರರು ಬಸವಣ್ಣನವರು. ಇಂದು ನಾವೆಲ್ಲ ಒಂದಡೆಗೆ ಸೇರಿ ಚಿಂತನ ಮಂಥನ ಮಾಡಿದ್ದರೆ ಆದರೆ ಹಿಂದೆ ಬಸವಣ್ಣನವರ ಲಿಂಗ ಸಮಾನತೆಯ ತತ್ವ ಅಡಗಿದೆ ಎಂಬುದನ್ನು ವಿವೇದಿಸಬೇಕು. ಇಂದು ಬಸವ ಜಯಂತಿ ನಿಮಿತ್ತ ನಮ್ಮ ಮಹಾಸಭೆಯು ಪ್ರತ್ಯೇಕ ಮಹಿಳಾ ಘೋಷ್ಠಿಯನ್ನು ಆಯೋಜಿಸುವ ಮೂಲಕ ಮಹಿಳೆಯರ ಆತ್ಮಬಲವನ್ನು ಹೆಚ್ಚಿಸಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಡಾ ಗುರುದೇವಿ ಹುಲೆಪ್ಪನವರಮಠ, ಡಾ. ಎಚ್ ಬಿ ರಾಜಶೇಖರ್, ಶೈಲಜಾ ಬಿಂಗೆ, ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ವಿದ್ಯಾ ಗೌಡರ, ಮಹಾನಂದ ಲೋಕಣ್ಣವರ್ ಉಪಸ್ಥಿತರಿದ್ದರು. ಶಾರದಾ ಪಾಟೀಲ್ ನಿರೂಪಿಸಿದರು. ಬಸವರಾಜ್ ಮಾದಗೌಡ ಪ್ರಸಾದ ಸೇವೆ ಸಲ್ಲಿಸಿದರು. ಮಹಿಳಾ ಘಟಕದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

