ಬೆಳಗಾವಿ-೨೩: ಹಿರಿಯ ಸಾಹಿತಿ ಡಾ. ಹೇಮಾವತಿ ಸೊನೊಳ್ಳಿ ಅವರ ಹೇಮಸಿರಿ ಆತ್ಮಚರಿತ್ರೆಗೆ ಹಾರೂಗೇರಿ ಆಜೂರ ಪ್ರತಿಷ್ಠಾನ ನೀಡುವ ೨೦೨೪ರ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂಬರುವ ಜನೇವರಿ ೨೬ರಂದು ಹಾರೂಗೇರಿ ಹಿಡಕಲ್ ನ ಆಜೂರ ತೋಟದ ಮಹಾ ಮನೆಯಲ್ಲಿ ನಡೆಯಲಿರುವ ೩೫ನೇ ಗಂಗಾರಾಮೋತ್ಸವ ಹಾಗೂ ಆಜೂರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ಹೇಳಿದರು.
