ನೇಸರಗಿ-04:ನೇಸರಗಿ ಭಾಗದ ರೈತರ ಹಾಗೂ ಸಹಕಾರಿ ರಂಗದ ಸೇವೆಯಲ್ಲಿ ಗ್ರಾಮದ ಅನೇಕ ಹಿರಿಯರ ಶ್ರಮದ ಫಲವಾಗಿ ಇಂದು ನೇಸರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ರೈತರಿಗೆ ಉತ್ಕೃಷ್ಟ ಸೇವೆ ಸಲ್ಲಿಸಿ ಮೂರು ಕಟ್ಟಡಗಳನ್ನು ಹೊಂದಿ ರೈತರ ಪಾಲಿನ ಕಲ್ಪವೃಕ್ಷವಾಗಿ ಈ ಒಂದು ಕಾರ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸಹಕಾರಿ ರಂಗದಲ್ಲಿ ತೊಡಗಿ ನಾನು ನೇಸರಗಿ ಭಾಗದ ರೈತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಮಾಡಿದ್ದೇನೆ ಎಂದು ಮಾಜಿ ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಗ್ರಾಮ ದೇವಿಯ ಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.ನೇಸರಗಿ ಇದರ ಕೇಂದ್ರದ ನಬಾರ್ಡ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಸಹಕಾರಿ ಸಂಘದ ಬಹು ಉದ್ದೇಶಿತ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಕಳೆದ 115 ವರ್ಷಗಳ ಹಿಂದೆ ಸಿದ್ದನಗೌಡರ ಪಾಟೀಲರ ಪ್ರಯತ್ನದಿಂದ ಪ್ರಾರಂಬವಾದ ಪ್ರಾಥಮಿಕ ಸಹಕಾರಿ ಸಂಘಗಳು ಇಂದು ರೈತರ ಒಡನಾಡಿಯಾಗಿ ಕಾರ್ಯ ಮಾಡುತ್ತಿರುವದು ಶ್ಲಾಘನೀಯ. ಈ ಒಂದು ಸಂಘದ ಕಟ್ಟಡ ನಿರ್ಮಾಣಕ್ಕೆ ಕರೋನಾ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ವಿಶೇಷ ಪ್ರಯತ್ನದಿಂದ ಆತ್ಮನಿರ್ಬರ ಭಾರತ ಯೋಜನೆಯಡಿ 3% ಬಡ್ಡಿದರದಲ್ಲಿ 24 ಲಕ್ಷ ಸಾಲ ಈ ಯೋಜನೆಗೆ ಅನುಧಾನ ಮತ್ತು ಸಂಘದಿಂದ 8 ಲಕ್ಷ ಅನುಧಾನ ನೀಡಿ ಒಟ್ಟು 32 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಬೇಕು.ಈ ಸಾಲವನ್ನು ಏಳು ವರ್ಷದಲ್ಲಿ ಸರಿಯಾಗಿ ಪಾವತಿಸಿದರೆ 3 ರಷ್ಟು ಸಬ್ಸಿಡಿ ಪಡೆಯಲಿದ್ದು,ಸಹಕಾರಿ ಸಂಘಗಳು ಸೋಯಾಬೀನ ,ಕಡಲೆ ಬೀಜ ,ಗೊಬ್ಬರ ವಿತರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು,ಆಯುಷ್ಮಾನ ಯೋಜನೆಯಿಂದ ಸ್ಥಗಿತಗೊಂಡ ಯಶಸ್ವಿನಿ ಯೋಜನೆಯನ್ನು ಮರು ಪ್ರಾರಂಬಿಸಲಾಗಿದ್ದು .ಕುಟುಂಬದ ನಾಲ್ಕು ಜನರಿಗೆ ಐದು ಲಕ್ಷ ರೂಪಾಯಿಗಳ ವರೆಗೆ ಆರೋಗ್ಯ ವಿಮೆ ಸಿಗಲಿದ್ದು.ಸದಸ್ಯರಿಗೆ ಲಕ್ಷ ರೂ ಅಪಘಾತ ವಿಮೆ,ಗಾಯಗೊಂಡರೆ 50 ಸಾವಿರ ರೂಗಳ ಪರಿಹಾರ ಇನ್ನೂ ಅನೇಕ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಹಕಾರಿ ಲಭಿಸಲಿವೆ ಮತ್ತು ಸಂಘದ ತಂತ್ರಜ್ಞಾನ ಖರೀದಿಸಲು 3.9 ಲಕ್ಷ ರೂಪಾಯಿಗಳ ಹಣಕಾಸಿನ ಅನುಧಾನ ನೀಡುತ್ತಿದೆ ಎಂದು ಮಹಾಂತೇಶ ದೊಡ್ಡಗೌಡರ ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕರಾದ ಎನ್ ಜಿ. ಕಲಾವಂತ ಮಾತನಾಡಿ ಕರೋನಾ ಸಂದರ್ಭದಲ್ಲಿ ಈ ಯೋಜನೆಯ ಕಾಮಗಾರಿಗೆ ಇ ಟೆಂಡರ ಮೂಲಕ ಜಾರಿಯಾಗಿತು ಆದರೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮನವಲಿಸಿ ಉತ್ತಮ ಕೆಲಸ ಮಾಡಲು ನೂರಿತ ಸ್ಥಳೀಯ ಗುತ್ತಿಗೆದಾರರಿಂದ ಕೆಲಸ ಮಾಡಲು ಮಂಜೂರು ಮಾಡಿಸಿದ್ದು ಆಗಿನ ಶಾಸಕರು ಮತ್ತು ನಮ್ಮ ನಿರ್ದೆಶಕರಾದ ಮಹಾಂತೇಶ ದೊಡ್ಡಗೌಡರ ಅವರೆ ಕಾರಣ ಎಂದರು.
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕರಾದ ಪ್ರಕಾಶ ಮೂಗಬಸವ ಮಾತನಾಡಿ ಇನ್ನೂ ಮುಂದೆ ಪೆಟ್ರೋಲ್ ಬಂಕ್,ಸ್ಥಳಿಯ ಬಜಾರ,ತಂತ್ರಜ್ಞಾನ ಕೇಂದ್ರಗಳು ವಿವಿಧೋದ್ದೇಶ ಸಂಘಗಳ ವಿಸ್ತೀರ್ಣದಲ್ಲಿ ಕೆಲಸ ಮಾಡುವ ಕಾಲ ಬರುತ್ತಿದ್ದು.ಮಹಾಂತೇಶ ದೊಡ್ಡಗೌಡರ ರೈತರ ಪರವಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು ,ಮುಂದೆಯೂ ಭವಿಷ್ಯವನ್ನು ಅನೇಕ ಕಾರ್ಯಗಳನ್ನು ಮಾಡುತ್ತಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಕಾಮದೇನು ಕಲ್ಪವೃಕ್ಷಗಳಾಗಿ ಕೆಲಸ ಮಾಡುತ್ತಿವೆ ಎಂದರು.
ದಿವ್ಯಸಾನಿಧ್ಯ ವಹಿಸಿದ್ದ ಮಲ್ಲಾಪೂರ- ನೇಸರಗಿ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ರೈತರು ಬೇಕಾದ ಅನುಕೂಲಗಳು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ದೊರೆಯುತ್ತಿದ್ದು ಅದರ ಸದುಪಯೋಗ ರೈತರು ಪಡೆದು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿ ರೈತರು ಬೆಳೆದು ಸಹಕಾರಿ ಸಂಘಗಳನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ ನೇಸರಗಿ ಇದರ ಅದ್ಯಕ್ಷರು ಹಾಗೂ ಶ್ರೀ ಸೋಮೇಶ್ವರ ಶುಗರ್ ನಿರ್ದೇಶಕರಾದ ರಾಜಶೇಖರ ಎತ್ತಿನಮನಿ ಮಾತನಾಡಿ ಕಳೆದ ಹತ್ತು ವರ್ಷಗಳ ಅವದಿಯಲ್ಲಿ ರೈತರಿಗೆ ಉತ್ಕೃಷ್ಟ ಸೇವೆ ಸಲ್ಲಿಸಿ ಸಾಲ,ಬೀಜ,ಗೊಬ್ಬರ, ವಿತರಿಸಿದ್ದು ಈ ಒಂದು ಸಾಧನೆಗೆ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದ ಪರಿಶ್ರಮ ,ಗ್ರಾಮದ ಹಿರಿಯರ ಸಹಕಾರದಿಂದ ಕಳೆದ 15 ವರ್ಷಗಳಿಂದ ಚುಣಾವಣೆ ಆಗದೆ ಸಹಕಾರ ರಂಗದ ಸೇವೆಗೆ ಸಹಕರಿಸಿದ ಸಾಧನೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡರು ,ನೇಗಿನಹಾಳ ಪಿಕೆಪಿಎಸ್ ಅದ್ಯಕ್ಷರಾದ ಬಾಬಾಸಾಹೇಬ ಪಾಟೀಲ, ಯುವ ಮುಖಂಡ ಸಚಿನ ಪಾಟೀಲ, ಅಡಿವಪ್ಪ ಮಾಳಣ್ಣವರ, ಗ್ರಾ ಪಂ ಅದ್ಯಕ್ಷರಾದ ನಿಂಗಪ್ಪ ಮಾಳಣ್ಣವರ, ಬಾಳಪ್ಪ ಮಾಳಗಿ,ಮಹಾಂತೇಶ ಕೂಲಿನವರ, ಬೈಲಹೊಂಗಲ ಸಹಕಾರಿ ಸಂಘಗಳ ನಿಬಂದಕರಾದ ಶ್ರೀಮತಿ ಶಾಹೀನ ಅಕ್ತರ,ಬೆಳಗಾವಿ ,ಸಂಘದ ಉಪಾದ್ಯಕ್ಷರಾದ ಶ್ರೀಮತಿ ರತ್ನಾ ಮ.ಪಾಟೀಲ, ಸದಸ್ಯರಾದ ವೀರಪ್ಪಣ್ಣ ಚೋಭಾರಿ,ಶಿವನಗೌಡ ಮ.ಪಾಟೀಲ, ಮಲ್ಲೇಶಪ್ಪ ಮಾಳಣ್ಣವರ,ಪಕ್ಕೀರಪ್ಪ ಸೋಮಣ್ಣವರ,ಸಿದ್ದಪ್ಪ ತುಳಜನ್ನವರ,ಮಹಾಂತೇಶ ಸತ್ತಿಗೇರಿ, ಪಕ್ಕರಪ್ಪ ತೋಟಗಿ,ಯಲ್ಲಪ್ಪ ತಳವಾರ,ಶ್ರೀಮತಿ ಅನ್ನಪೂರ್ಣಾ ರೊಟ್ಟಿ, ಶ್ರೀಮತಿ ಸಾವಿತ್ರಿ ಕೊಲ್ಕಾರ,ಗಂಗಪ್ಪ ಕಾಡಣ್ಣವರ,ಸುರೇಶ ಮತ್ತಿಕೊಪ್ಪ,ಮಕಬುಲ್ ಬೇಪಾರಿ ,ಸುರೇಶ ಕಂಡ್ರಿ,ವ್ಯವಸ್ಥಾಪಕರಾದ ವಿಶ್ವನಾಥ ಕೂಲಿನವರ,ಕ್ಲರ್ಕ ಶ್ರೀಕಾಂತ್ ತರಗಾರ ಹಾಗೂ ಸೋಮನಗೌಡ ಪಾಟೀಲ, ಶಂಕರ ತಿಗಡಿ,ಸಿದ್ದಪ್ಪ ಇಂಚಲ,ಬಸನಗೌಡ ಚಿಕ್ಕನಗೌಡ್ರ,ಗುರುರಾಜ ತುಬಚಿ, ರಮೇಶ ರಾಯಪ್ಪಗೋಳ,ಎಸ್ ವಿ. ಸೋಮಣ್ಣವರ, ಜಗದೀಶ್ ಗೆಜ್ಜಿ,ಅಜ್ಜಪ್ಪ ಯತ್ತಿನಮನಿ,ಡಾ.ಪ್ರಕಾಶ ಹಲ್ಯಾಳ,ಮಲ್ಲಿಕಾರ್ಜುನ ಕಲ್ಲೊಳಿ,ಮಂಜುನಾಥ ಹುಲಮನಿ,ಮಲ್ಲಿಕಾರ್ಜುನ ಸೋಮಣ್ಣವರ,ಸುರೇಶ ಅಗಸಿಮನಿ,ಬಸವರಾಜ ಚಿಕ್ಕನಗೌಡ್ರ, ಮಹಾಂತೇಶ ಕಳ್ಳಿಬಡ್ಡಿ,ಸೋಮಶೇಖರ ಮಾಳಣ್ಣವರ, ಬಸವರಾಜ ಹಿರೇಮಠ,ವಾಸು ಹಮ್ಮನವರ,ಶಿವನಪ್ಪ ಮದೆನ್ನವರ,ಯಮನಪ್ಪ ಪೂಜೇರಿ,ಶೇಖರ ಕಾರಜೋಳ ನೇಸರಗಿ ಮತ್ತು ಸೋಮನಟ್ಟಿ ಗ್ರಾಮಗಳ ರೈತರು,ಸದಸ್ಯರು, ಹಿರಿಯರು, ಮುಖಂಡರು,ಮಹಿಳೆಯರು ಸೇರಿದಂತೆ ಹಲವಾರು ಉಪಸ್ಥಿತಿರಿದ್ದರು.