23/12/2024

ಚಿಕ್ಕೋಡಿ-05:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಚಿಕ್ಕೋಡಿ ವಿಭಾಗ; ಚಿಕ್ಕೋಡಿ

ದಿನಾಂಕ:೦೬.೦೧.೨೦೨೪ ರಿಂದ ೧೨.೦೧.೨೦೨೪ ರವರೆಗೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಯಲ್ಲಮ್ಮವಾಡಿಯ ಶ್ರೀ ಯಲ್ಲಮ್ಮಾದೇವಿ ಜಾತ್ರೆಯು ಜರುಗಲಿದ್ದು, ಜಾತ್ರೆ ನಿಮಿತ್ಯ ಅಥಣಿ/ತೆಲಸಂಗ/ಕಾಗವಾಡ/ಸಾವಳಗಿ/ಬಬಲೇಶ್ವರ/ ಮಿರಜ/ಸಾಂಗ್ಲಿ/ಜತ್ತ ಮುಂತಾದ ಸ್ಥಳಗಳಿಂದ ಪ್ರಯಾಣಿಸುವ ಯಾತ್ರಿಕರಿಗೆ ಚಿಕ್ಕೋಡಿ ವಿಭಾಗದ ಅಥಣಿ ಘಟಕದಿಂದ ವಿಶೇಷ ಹೆಚ್ಚುವರಿ ಬಸ್ಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು. ಹಾಗೂ ಕೊಕಟನೂರದಿಂದ ನೇರವಾಗಿ ಪೂಣೆ, ಮುಂಬೈ, ಬೋರಿವೆಲಿ, ಬಾರಾಮತಿವರೆಗೆ ಹೋಗುವ ಪ್ರಯಾಣಿಕರಿಗೂ ಕೂಡ ವಿಶೇಷ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು.
ಅಥಣಿ ಬಸ್ ನಿಲ್ದಾಣ, ಮಿರಜ ಬಿಂದು, ಹಾಗೂ ಕೊಕಟನೂರ ಜಾತ್ರಾ ಕೇಂದ್ರದಲ್ಲಿ ಪ್ರತ್ಯೇಕ ಜಾತ್ರಾ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು.ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಭಾಗಿಯ ನಿಯಂತ್ರಣಧಿಕಾರಿ ಎಂ.ಆರ್.ಮುಂಜಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !!