ಬೆಳಗಾವಿ-05:ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ : ೦೧-೦೧-೨೦೨೪ ರಿಂದ ಸ್ನಾತಕೋತ್ತರ ವಿದಾರ್ಥಿಗಳ ದೀಕ್ಷಾರಂಭ ಕಾರ್ಯಕ್ರಮ ಪ್ರಾರಂಭವಾಗಿ ೦೫-೦೧-೨೦೨೪ ರಂದು ಸಮಾರೋಪ ನೆರವೇರಿತು.
ಮೊದಲ ಹಂತದಲ್ಲಿ ಸೋಮವಾರದಿಂದ ಗುರುವಾರದವರೆಗೆ ವಿಭಾಗದ ಪ್ರಾಧ್ಯಾಪಕರುಗಳು ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾಲಯದ ಕುರಿತು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಈ ವರ್ಷದ ಪಠ್ಯಕ್ರಮದ ಸ್ವರೂಪ ಮತ್ತು ಕನ್ನಡ ಸ್ನಾತಕೋತ್ತರ ಪದವಿಯ ಪ್ರಯೋಜನಗಳ ಕುರಿತು ತಿಳಿಸಿಕೊಟ್ಟರು. ಇದರ ಸಮಾರೋಪ ಸಮಾರಂಭವು ಶುಕ್ರವಾರ ವಿಭಾಗದ ನಿರ್ದೇಶಕರಾದ ಪ್ರೊ. ಗುಂಡಣ್ಣ ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಯೋಜಕರಾದ ಪ್ರೊ. ಸಿ. ಎನ್. ವಾಘಮೋರೆ ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ಹಿಂದುಳಿದ ವರ್ಗಗಗಳ ಘಟಕದ ಸಂಯೋಜಕರಾದ ಪ್ರೊ. ಕೆ. ಕಾಂತರಾಜು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ತಿಳಿಸುವ ಜೊತೆಯಲ್ಲಿ ವಿವಿಧ ಮಾದರಿಯ ವಿದ್ಯಾರ್ಥಿವೇತನದ ಕುರಿತು ಅಂಕಿಅAಶಗಳ ಸಹಿತ ವಿವರಿಸಿದರು.
ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿರುವ ಪುಸ್ತಕ ಮತ್ತು ಪತ್ರಿಕೆಗಳ ಅಂಕಿಅAಶಗಳನ್ನು ನೀಡಿ ಓದಿನಿಂದ ಉಂಟಾಗುವ ಪ್ರಯೋಜನಗಳ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಗುರುತಿನ ಚೀಟಿ ಪಡೆಯುವುದು ಮತ್ತು ಪುಸ್ತಕ ಬಳಕೆಯ ಬಗ್ಗೆ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಓ. ಮಾರಣ್ಣನವರ ಅವರು ತಿಳಿಸಿಕೊಟ್ಟರು. ಆರೋಗ್ಯವೇ ನಿಜವಾದ ಭಾಗ್ಯವೆಂಬ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಅಧಿಕಾರಿಗಳಾದ ಡಾ. ಅಪ್ಪಾಸಾಬ ಕೋಣೆ ಅವರು ವಿದ್ಯಾರ್ಥಿಗಳು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಸ್ವಚಿಕಿತ್ಸಾ ಮನೋಭಾವವನನ್ನು ಹೇಗೆ ಬೆಳಸಿಕೊಂಡು ಬದುಕಬೇಕು ಮತ್ತು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ಸೌಲಭ್ಯದ ಸದುಪಯೋಗ ಪಡೆಯಲು ತಿಳಿಸಿದರು. ಮುಂದುವರೆದು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ಜಗದೀಶ ಗಸ್ತಿಯವರು ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ದಿನಚರಿಗಳಲ್ಲಿ ಯೋಗ ಮತ್ತು ಯಾವುದಾದರೊಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರೆಕೊಟ್ಟರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಪ್ರೊ. ಗುಂಡಣ್ಣ ಕಲಬುರ್ಗಿ ಅವರು ಸಾಹಿತ್ಯವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನೀಡುತ್ತದೆ. ಆ ಕುರಿತು ನೀವು ತೊಡಗಿಕೊಳ್ಳಬೇಕು ಎಂದರೆ. ಕಾರ್ಯಕ್ರಮವನ್ನು ಡಾ. ಗಜಾನನ ನಾಯ್ಕ ಅವರು ಆಯೋಜಿಸಿದರು. ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಶೋಭಾ ನಾಯಕ ಹಾಗೂ ಡಾ. ಪಿ. ನಾಗರಾಜ ಅವರುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಇತರೆ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.