23/12/2024

ಬೆಳಗಾವಿ-12:ಬೆಳಗಾವಿಯ ನಗರದ ಸಮೀಪದಲ್ಲಿರುವ, ರಾಷ್ಟ್ರೀಯ ಹೆದ್ದಾರಿ ೪ ರ ಬದಿಯ ಭೂತರಾಮನಟ್ಟಿಯ ಮುಕ್ತಿಮಠದ ಮಕರ ಸಂಕ್ರಮಣಜಾತ್ರಾ ಮಹೋತ್ಸವವವು ಇದೇ ಜನೇವರಿ ೧೪ ರಂದು ಅದ್ದೂರಿಯಾಗಿ ಆರಂಭವಾಗಲಿದ್ದು ದಿ ಃ ೧೮ ರಂದು ಮುಕ್ತಾಯವಾಗಲಿದೆ.

ಈ ಜಾತ್ರೆಯ ನಿಮಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಆ ನಿಮಿತ್ಯ ಆ ಕ್ಷೇತ್ರವನ್ನು ಹಾಗೂ ಶ್ರೀಗಳನ್ನು ಪರಿಚಯಿಸುವ ಲೇಖನ ಇದು.
ಸುಕ್ಷೇತ್ರ ಮುಕ್ತಿಮಠದ ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ನೇತೃತ್ವದಲ್ಲಿ ೨೦೨೪ ರ ಜನೇವರಿ ೧೪ ರಿಂದ ೧೮ ರ ವರೆಗೆ ಮಕರ ಸಂಕ್ರಮಣದ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗುತ್ತಲಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಇದು ಮಾನವಜನ್ಮದ ಸಂಕುಲ ಶಿವಭಕ್ತರಿಗೆ ಒಂದೇ ಕುಲ ಎನ್ನುವ ಮಹಾನ ಸಂದೇಶ ನೀಡುವ ನಿಟ್ಟಿನಲ್ಲಿ ಶ್ರೀ ಮುಕ್ತಾಂಬಿಕಾ ಅಮ್ಮನವರ ಸನ್ನಿಧಿ ಶ್ರೀ ಕ್ಷೇತ್ರ ಮುಕ್ತಿಮಠದ ಪಂಚಗ್ರಾಮ ಭೂಕೈಲಾಸದ ಪುಣ್ಯಸ್ಥಳದಲ್ಲಿ ಈ ಸಲವೂ ಪ್ರತಿವರ್ಷದ ಪರಂಪರೆ ಪದ್ಧತಿಯಂತೆಅದ್ದೂರಿಯಾಗಿ ಜರುಗುತ್ತಲಿದೆ.
ಬೆಳಗಾವಿ ತಾಲೂಕಿನ ಮುಕ್ತಿಮಠವು ತನ್ನ ಸುತ್ತಮುತ್ತಲಿನ’ ಪಂಚಗ್ರಾಮಗಳ’ ಭಕ್ತರ ಆಶಯ ಭಾವನೆಗಳಿಗೆ, ಅವರ ಭಕ್ತಿಯ ಆಶಯಗಳಿಗೆ ಸ್ಪಂದಿಸಿ ಅವರೆಲ್ಲ ಸರ್ವರೀತಿಯ ಸುಧಾರಣೆಗೆ ಭಕ್ತಿಯ ಜಾಗೃತಿಗೆ ಉತ್ತಮ ನಡೆನುಡಿ ಆದರ್ಶಪ್ರಾಯ ಬದುಕಿಗೆ ಸಜ್ಜಾಗಿಸಿದೆ.ಜೊತೆಗೆ ರಾಜ್ಯದ ಉತ್ತರಕರ್ನಾಟಕ, ಮಹಾರಾಷ್ಟç, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ನಾಡಿನ ನಾನಾಮೂಲೆಗಳಿಂದ ಭಕ್ತರನ್ನು ಹೊಂದಿದೆ. ಶ್ರದ್ಧೆ ಭಕ್ತಿಯಿಂದ ಶ್ರೀಮಠವನ್ನು ಆರಾದಿಸಿದವರನ್ನು ಹರಿಸಿದೆ, ಹಾರೈಸಿದೆ ಅವರ ಬದುಕು ಪಾವನ ಮಾಡಿದೆ ನಂಬಿದ ಭಕ್ತರು ಶ್ರೀ ಮಠದ ಕೃಪೆಗೆ ಪಾತ್ರರಾಗಿತನ್ನ ಬದುಕಿನಲ್ಲಿ ಹಲವು ಬದಲಾವಣೆಗೆ ಶ್ರೀ.ಮಠವು ಸಹಕಾರಿಯಾಗಿದೆ.
ಮಾನವಕುಲದಕಲ್ಯಾಣಕ್ಕೆ ಭೂಮಿಯ ಮೇಲೆ ಗುರುವಿನ ಅವತಾರಿಯಾಗಿಧರೆಗೆ ಬಂದ ಮಹಿಮಾ ಪುರುಷ, ದೇವ ಸ್ವರೂಪಿ ಪೂಜ್ಯ ಶ್ರೀ. ಷ.ಬ್ರ.ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದೂರದಕಲ್ಬುರ್ಗಿಜಿಲ್ಲೆಯಿಂದ ಭಕ್ತರಭಾವನೆಗೆಓಗೊಟ್ಟುಇಲ್ಲಿಗೆ ಬಂದು ಶ್ರೀ. ಮಠದಉದಯಕ್ಕೆಕಾರಣರಾದವರುಅವರಕಠೋರತಪೋ ಅನುಷ್ಠಾನಗಳು ನಮಗೆಲ್ಲ ಬೆಳಕಾಗಿವೆ. ಧರ್ಮದ ಮಾರ್ಗದಲ್ಲಿಜೀವನ ಸಾಕ್ಷಾತ್ಕಾರ ಕರುಣಿಸಿದ ಸದ್ಗುರುಇವರಾಗಿರುವರು. ಬಾಲ್ಯದಲ್ಲಿಯೇ ಸರ್ವಸಂಗ ಪರಿತ್ಯಾಗಿಯಾಗಿಆದ್ಯಾತ್ಮದ ಸೆಳೆತಕ್ಕೆ ಆಕರ್ಷಿತರಾಗಿದೇಶ ಸಂಚಾರಗೈದುಇವರಿಗೆದೇವರು ದಿವ್ಯ ಶಕ್ತಿ ಕರುಣಿಸಿರುವುದಕ್ಕೆ ಇಂದಿನ ಹಲವಾರು ಪವಾಡಗಳು ಪುಣ್ಯ ಘಟನೆಗಳು ನಮ್ಮ ಮುಂದೆ ಸಾಕ್ಷಿಯಾಗಿವೆ ಭಕ್ತರಉದ್ದಾರಕ್ಕೆ ಸಹಾಯಕವಾಗಿ ಉಳಿಯುತ್ತವೆ.
ಚಿಕ್ಕ ವಯಸ್ಸಿನಲ್ಲಿಯೇ ಇವರು ಶಿವನ ಧ್ಯಾನದ ಅನುಷ್ಠಾನ ಆರಂಭಿಸಿದ ಇತಿಹಾಸಇವರ ಪೂರ್ವಜನ್ಮದದೈವಿಶಕ್ತಿಯ ಪವಾಡವೇಆಗಿದೆ, ನೂರಕ್ಕೂ ಹೆಚ್ಚು ಅನುಷ್ಠಾನಗಳನ್ನು ಪೂಜ್ಯರುಗೈದಿರುವರುಅವರು ಮಾಡಿರುವಒಂದು ವರ್ಷದಅನ್ನ-ಆಹಾರಾಧಿ ಬಿಟ್ಟುಕಠೋರವಾಗಿ ಆಚರಿಸಿದ ಅನಷ್ಠಾನವು ಭಕ್ತರನ್ನುಉದ್ದರಿಸಲು ಸಹಕಾರಿಯಾಗಿದೆ. ಅವರತಪೋಶಕ್ತಿ ಶ್ರೀಮಠವನ್ನು ಸಿದ್ದಿಪೀಠವನ್ನಾಗಿಸಿದೆ.ಅದರ ಪೂರ್ವದಲ್ಲಿ ೧೧ ನೇಯ ವಯಸ್ಸಿನಲ್ಲಿಯೇ ದೇಶದಅತ್ಯಂತ ಪವಿತ್ರ ಶ್ರೀ ಕ್ಷೇತ್ರಗಳಾಗಿರುವ ಹಿಮಾಲಯ ಕೇದಾರಗಳಲ್ಲಿ ಹೋಗಿ ಕಠೋರ ಅನುಷ್ಠಾನಗೈದಿರುವರುದೇಶ ಸಂಚಾರ ಮಾಡಿರುವರು.
ತಮ್ಮ ಸಂಚಾರದಕೊನೆಯ ಹಂತದಲ್ಲಿ ಬೆಳಗಾವಿ ನಗರದ ಸಮೀಪದ ಭೂತರಾಮನಹಟ್ಟಿಯ ಹಚ್ಚ ಹರಿದಿನ ಅಂದಿನ ದಟ್ಟವಾದಅರಣ್ಯದಿಂದ ಸುತ್ತುವರೆದಿರುವ ನಿಸರ್ಗರಮಣೀಯಗ್ರಾಮವನ್ನುಆಯ್ದುಕೊಂಡು ಭಕ್ತರ ಬದುಕನ್ನುಉದ್ದರಿಸಲು ಬಂದರು, ಶ್ರೀಗಳ ವಾಸ್ತವ್ಯದ ಕೆಲವೇ ಕೆಲವು ದಿನಗಳಲ್ಲಿ ಮುಕ್ತಿಮಠವಾಗಿ ಸಹಸ್ರಾರು ಭಕ್ತರಆಕರ್ಷಣೆಯ ಶ್ರದ್ಧಾಕೇಂದ್ರವಾಯಿತು. ಧಾರ್ಮಿಕ ಪಾವನ ಶಕ್ತಿಯಕೇಂದ್ರವಾಗಿ ಬೆಳೆದಿರುವುದು ಶ್ರೀಗಳ ತಪೋಶಕ್ತಿಯಿಂದ ಎಂದು ಹೇಳಬಹುದು.

೨೦೦೨ ರಿಂದ ೨೦೦೩ ರ ವರೆಗೆ ಒಂದು ವರ್ಷದ ಪರ್ಯಂತರಅನ್ನಆಹಾರಾದಿ ತ್ಯಜಿಸಿ ಸೂರ್ಯಚಂದ್ರರ ಬೆಳಕಿಲ್ಲದ ಆಳವಾದ ಗವಿಯ ನೆಲ ಸಮಾಧಿಯಲ್ಲಿ ಶಿವ ಸಮಾಧಿಸ್ಥರಾಗಿಅತ್ಯುಗ್ರತಪೋಯೋಗಾನುಷ್ಠಾನ ಪೂರೈಸಿದ ಮಹಾ ಮಹಿಮ ಶಿವಯೋಗಿಗಳು ಅವರುತಮ್ಮತಪಶಕ್ತಿಯಿಂದ ಈ ಭೂಮಿಯನ್ನು ಪುಣ್ಯಮಯಗೊಳಿಸಿರುವರು.
ಮುಕ್ತಿಮಠದ ಶಕ್ತಿ ಸ್ಥಳದಲ್ಲಿ ಮುಕಾಂಬಿಕೆ ದೇವಾಲಯ, ಜಗದ್ಗುರು ಪಂಚಾಚಾರ್ಯರ ಲಿಂಗೋದ್ಭವ ಮೂರ್ತಿಗಳು, ಭೂಕೈಲಾಸಮಂದಿರ, ನಂದಿ ಜೊತೆಗೆ ಸಧ್ಯ ನಿರ್ಮಾಣವಾಗಿರುವಕಲ್ಯಾಣಮಂಟಪವೂ ಸೇರಿದಂತೆ ಹಲವು ದೇವಾಲಯಗಳ ಕಟ್ಟಡಗಳು ಆಕರ್ಷಣಿಯವಾಗಿ ನಿರ್ಮಾಣವಾಗಿವೆ. ಭಕ್ತರಉದ್ಧಾರವೇ ಮಠದ ಪ್ರಥಮಆದ್ಯತೆಯಾಗಿದೆ. ಮುಕ್ತಿಮಠದಲ್ಲಿ ಸಿದ್ದಿವಿನಾಯಕ ಮಂದಿರ ನಿರ್ಮಾಣವಾಗಿದೆ, ಹಿಡಕಲ್‌ಜಲಾಶಯದಲ್ಲಿ ಮುಳುಗಿದ್ದ ಜೋಡಿ ಲಿಂಗಗಳನ್ನು ತೆಗೆದುಕೊಂಡು ಬಂದು ಶ್ರೀ ಮಠದಲ್ಲಿ ಪ್ರತಿಷ್ಠಾಪಿಸಿ ದಿನವೂ ಬಿಲ್ವಾರ್ಚನೆಯಿಂದ ಪೂಜಿಸುವ ವ್ಯವಸ್ಥೆಯನ್ನು ಶ್ರೀಗಳು ಮಾಡಿರುವರು ದೇಶದ ಪ್ರಮುಖ ನಾಲ್ಕು ಶಕ್ತಿ ದೇವತೆಗಳಾದ ಮಧುರೆಯ ಮೀನಾಕ್ಷಿ, ಕಂಚಿಯಕಾಮಾಕ್ಷಿ, ಕನ್ಯಾಕುಮಾರಿಯಜಲಜಾಕ್ಷಿ, ಕಾಶಿಯ ವಿಶಾಲಾಕ್ಷಿ ದೇವಾಲಯಗಳ ರೀತಿಯಲ್ಲಿ ಮುಕ್ತಿಮಠದಲ್ಲಿ ಮುಕ್ತಾಂಬಿಕಾ ದೇವಿಯ ಮಹಾಮಂದಿರವನ್ನು ನಿರ್ಮಿಸಿ ಅಮ್ಮನವರ ನಿತ್ಯಕುಂಕುಮಾರ್ಚನೆಯಂತಹ ಸರ್ವ ಪೂಜೆಯ ವ್ಯವಸ್ಥೆ ಮಾಡಲಾಗಿದೆ. ಪವಿತ್ರಧಾರ್ಮಿಕ ಕ್ಷೇತ್ರಗಳಾದ ಕಾಶಿ, ಕೇದಾರ, ರಾಮೇಶ್ವರ ಭೀಮಾಶಂಕರ ಗಳಿಗೆ ಹೋಗುವ ಅವಶ್ಯಕತೆಇಲ್ಲದ ಸ್ಥಿತಿ ಭಕ್ತರಿಗೆ ಮಾಡಿರುವರುಅಂದರೆ ೧೨ ದ್ವಾದಶ ಜ್ಯೋತಿರ್ಲಿಂಗಗಳ ಮಹಾಮಂದಿರ ನಿರ್ಮಿಸಿ ಇಲ್ಲಿಯೇ ಶಿವನನ್ನು ನೆಲೆಗೊಳಿಸಿದ್ದಾರೆ.ಶಿವನೊಂದಿಗೆ ಅಮ್ಮ ಪಾರ್ವತಿಯನ್ನು ಪ್ರತಿಷ್ಠಾಪಿಸಲು ಶ್ರೀಗಳು ಶಿವಪಾರ್ವತಿಯರ ಕೈಲಾಸ ಮಹಾಮಂದಿರವನ್ನು ನಿರ್ಮಿಸಿ ಹಬ್ಬ ಹರಿದಿನಗಳಲ್ಲಿ ಕಲ್ಯಾಣೋತ್ಸವದಂತಹ ಕಾರ್ಯಕ್ರಮ ಜರುಗಲು ಕಾರಣರಾಗಿದ್ದಾರೆ. ಲಿಂಗವಂತಜನಾಂಗದ ಉದ್ಧಾರಕರಾಗಿರುವ ಶ್ರೀ ಜಗದ್ಗುರು ಮೂಲ ಪಂಚಾಚಾರ್ಯರ ಮಹಾಮಂದಿರ ಸ್ಥಾಪಿಸಿ ಕೇದಾರ, ಉಜ್ಜಯನಿ, ಶ್ರೀಮದ್ ರಂಭಾಪುರಿ, ಶ್ರೀ ಜ್ಞಾನಕ್ಷೇತ್ರ ಕಾಶಿಯ ಜಗದ್ಗುರುಗಳನ್ನು ನಿರಂತರವಾಗಿ ಮೇಲಿಂದ ಮೇಲೆ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಯಿಸಿ ಸಕಲರನ್ನು ಪುನೀತರನ್ನಾಗಿ ಮಾಡುತ್ತಿರುವರು. ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅನುಷ್ಠಾನಗೈದ ಸ್ಥಳದಲ್ಲಿ ಅನುಷ್ಠಾನ ಮಂದಿರ ನಿರ್ಮಾಣವಾಗಿದೆ.ಪ್ರತಿನಿತ್ಯ ಸದ್ ಭಕ್ತರಿಗಾಗಿಅನ್ನದಾಸೋಹ ಮಂದಿರ ನಿರ್ಮಿಸಲಾಗಿದೆ.ಶಾಂತಿ ನೆಮ್ಮದಿ ಅರಸಿಬರುವ ಭಕ್ತರಿಗೆತಂಗುದಾಣ ಹಾಗೂ ಯಾತ್ರಾ ನಿವಾಸಗಳನ್ನು ನಿರ್ಮಿಸಲಾಗಿದೆ ಬೃಹತ್‌ವಾದಕಲ್ಯಾಣ ಮಂಟಪ ನಿರ್ಮಾಣಗೊಂಡು ಮದುವೆಗಳು ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲು ಸಹಾಯಕವಾಗಿವೆ.
ಮುಕ್ತಿಮಠಕ್ಕೆ ಆಗಮಿಸುವ ಜನರಿಗೆ ನಿತ್ಯಅನ್ನದಾಸೋಹವಿದೆ.ಭಕ್ತರಿಗೆತಂಗಲು ವಿಶ್ರಾಂತಿ ಕೊಠಡಿಗಳಿವೆ. ಬಡ ಮಕ್ಕಳಿಗೆ ಉಚಿತವಾದ ಶಿಕ್ಷಣ ಪ್ರಸಾದ ವ್ಯವಸ್ಥೆಕಲ್ಪಿಸಲಾಗಿದೆ.ನಿತ್ಯ ಸಹಸ್ರಾರು ಭಕ್ತರು ಶ್ರೀ ಮಠಕ್ಕೆ ಆಗಮಿಸಿ ಪೂಜ್ಯರದರ್ಶನ ಭಾಗ್ಯ ಮಾತೆ ಮುಕ್ತಾಂಬಿಕೆಯದರ್ಶನ ಭಾಗ್ಯ ಪಡೆದುಕೊಳ್ಳುವರು ತನ್ಮೂಲಕತಮ್ಮಜೀವನವನ್ನು ಪುಣ್ಯಮಯ ಪಾವನ ಮಾಡಿಕೊಳ್ಳುವರು.ಶ್ರೀ ಮಠದಆವರಣದಲ್ಲಿ ಭಕ್ತರಿಗಾಗಿಗ್ರಂಥಾಲಯ ಸೇವೆ ಇದೆಜ್ಞಾನಒದಗಿಸಲು ಸಾವಿರಾರು ಗ್ರಂಥಗಳು ಲಭ್ಯವಿದೆ.ಶ್ರೀಮಠದ ಆವರಣವು ಪ್ರಶಾಂತ ನಿಲಯವಾಗಿದೆ.ನಿರಂತರ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜ್ಯ ಶ್ರೀಗಳು ನಾಡಿನ ಮೂಲೆ ಮೂಲೆಗೂ ಭಕ್ತರಕೋರಿಕೆ, ಆಶಯದಂತೆ ಭಾಗವಹಿಸಿ ಹರಸುತ್ತಿರುವರು. ಪ್ರತಿವರ್ಷಜಾತ್ರಾ ಮಹೋತ್ಸವ ಮಕರ ಸಂಕ್ರಮಣದಲ್ಲಿಐದು ದಿನಗಳ ಕಾಲ ಜರುಗುತ್ತಿದ್ದು ವಿಶೇಷ ಜಾತ್ರಾ ಮಹೋತ್ಸವಜರುಗುತ್ತಿವೆ ಈ ಪುಣ್ಯಮಯಜಾತ್ರೆ ವೀಕ್ಷಿಸಲು ಸಾವಿರಾರುಕಣ್ಣು ಸಾಲದುಜಾತ್ರಾಕಾರ್ಯಕ್ರಮ ನೋಡುವುದೇ ಪುಣ್ಯಮಯವಾಗಿದೆ. ವಿವಿದೆಡೆ ಶಾಖಾ ಮಠಗಳು ಬೆಳೆಯುತ್ತಿವೆ ಎಲ್ಲವೂ ಮೂಲ ಮಠದಷ್ಟೇಸಮರ್ಥವಾಗಿ ಭಕ್ತರಉದ್ದಾರಕ್ಕೆ ಶ್ರಮಿಸುತ್ತಿವೆ. ಬೀದರಜಿಲ್ಲೆಯ ಹುಮನಾಬಾದತಾಲೂಕಿನ ಶ್ರೀ. ಇಟಗಾದ ಮುಕ್ತಿ ಮಠವೂ ನೂತನವಾಗಿ ಪೂಜ್ಯರ ಕೃಪಾರ್ಶಿರ್ವಾದದಿಂದ ಉನ್ನತ ಹಂತದಲ್ಲಿ ಬೆಳೆಯಬೇಕಾಗಿದೆ.
ನಾಡಿನ ಸಾಮಾಜಿಕಧಾರ್ಮಿಕ, ಶೈಕ್ಷಣಿಕರಂಗದಲ್ಲಿ ಮುಕ್ತಿಮಠದ ಪಾತ್ರವೂ ಸ್ಮರಣೀಯವಾಗಿದೆ.
ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ಸಾಮಾನ್ಯರಲ್ಲ, ಬಹುದೊಡ್ಡ ಮಹಾನ ಸಾಧಕರು, ಪೂಜಾ, ಯಜ್ಞ, ಯಾಗಾದಿ ಮಾಡಿ ಸಕಲಸಿದ್ಧಿ ಅನುಷ್ಠಾನವನ್ನು ಗಳಿಸಿಕೊಂಡವರು. ಸಕಲ ದಿವ್ಯ, ದೈವ, ಶಕ್ತಿಯನ್ನು ಸಾಧಿಸಿಕೊಂಡವರು.ಸಾಧನೆಯುಅವರಿಗೆ ಪ್ರಥಮ ಹೆಜ್ಜೆಯಾದರೆ ಭಕ್ತಿಯುಎರಡನೆಯ ಹೆಜ್ಜೆಯನ್ನಾಗಿಸಿಕೊಂಡವರು.
ಈ ಕಲಿಯುಗದಲ್ಲಿ ಸತತ ಪರಿಶ್ರಮ ಸದೃಢವಾದ ಮನಸ್ಸಿನ ಭಕ್ತಿ ಸಾಧಿಸಿದ ಸಿದ್ಧಿಯ ಫಲವಾಗಿ ಇಂದು ಮಹಾನಯೋಗಿ, ತಪಸ್ವಿಯಾಗಿ ನಮ್ಮ ಮುಂದೆ ಕಂಗೊಳಿಸುತ್ತಿರುವರು.ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶಿವಶರಣರ ವಿಚಾರಧಾರೆಗೆ ಬದ್ಧರಾದವರು.ಭಕ್ತರನ್ನುಉದ್ಧರಿಸಲು ಅವತರಿಸಿದ ಮಹಾನ ಮಹಿಮರು.ಅವರ ನುಡಿ ಆಲಿಸಲು ಸಂತೋಷವೆನಿಸುತ್ತದೆ.ಭಕ್ತರನ್ನುಆತ್ಮೀಯವಾಗಿ ಮಾತನಾಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ, ಸಾಂತ್ವನ ನೀಡುವಎಲ್ಲರಿಗೂ ಭಕ್ತಿಗೌರವ ಶ್ರೀಗಳ ಮೇಲೆ ಹೆಚ್ಚಿಸುತ್ತದೆ.ಭಕ್ತರನ್ನುಉದ್ಧರಿಸಲು ಅವತರಿಸಿದ ಮಹಾನ ಮಹಿಮರುಅವರ ನುಡಿ ಆಲಿಸಲು ಸಂತೋಷವಾಗುತ್ತದೆ.
ಮಾನವನಿಗೆ ಗೋವು ನೀಡುವ ಪ್ರತಿಫಲ ಬಹಳವಿದೆ, ಗೋವು ಮಾನವರನ್ನು ಹೀಗೆ ಪ್ರಶ್ನೆ ಮಾಡುತ್ತದೆ” ಇಟ್ಟರೆ ಸೆಗಣಿಯಾದೆ, ಸುಟ್ಟರೆ ಕುರುಳಾದೆ, ಸಂಸ್ಕಾರ ನೀಡಿದರೆ ಶರಣರ ನೋಸಲಿಗೆ ಧರಿಸುವ ವಿಭೂತಿಯಾದೆ”, ನೀನಾರಿಗಾದೆಯೋ ಎಲೆ ಮಾನವಎಂದು, ಗೋವುಗಳು ಹಲವು ರೀತಿಯ ಪ್ರಯೋಜನಗಳನ್ನು ಮಾನವನಿಗೆ ನೀಡುತ್ತದೆ. ನೀವು ಯಾರಿಗೆಉಪಯೋಗವಾದೆಎಂದು ಪ್ರಶ್ನಿಸಿಸುತ್ತದೆ.
ಕಲಿಯುಗದಲ್ಲಿಧರ್ಮಅವಶ್ಯಕತೆ ಬಹಳೇ ಇದೆಜಗತ್ತಿನಲ್ಲಿಧರ್ಮ ಉಳಿಯಬೇಕಾದರೆ ಗೋ ಹತ್ಯೆಯನ್ನು ನಿಷೇದಿಸಬೇಕು.ನಿಲ್ಲಿಸಬೇಕುಎಂಬ ಆಗ್ರಹ ಶ್ರೀಗಳದ್ದಾಗಿದೆ.ಮುಕ್ತಿಮಠದಆವರಣದಲ್ಲಿ ಸಸ್ಯ ಶ್ಯಾಮಲೆಯು ರಾರಾಜಿಸುತ್ತಿದ್ದಾಳೆ, ಶ್ರೀಗಳ ಆದಮ್ಯಆಸಕ್ತಿಯ ಫಲವಾಗಿ ಇಲ್ಲಿಅಪಾರವಾದ ಸಸ್ಯ ಸಂಪತ್ತುಇದೆ.
“ಭಗವಂತನು ಹುಟ್ಟು ಹಾಕಿದ ಸಕಲ ಜೀವರಾಶಿಗಳಲ್ಲಿ ಮನುಷ್ಯಜನ್ಮಅತ್ಯಂತ ಶ್ರೇಷ್ಠವಾಗಿದೆ.ಮನುಷ್ಯನಾಗಿ ಹುಟ್ಟುವುದು ಬಹು ದುರ್ಲಭಅದನ್ನು ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಭಕ್ತರಿಗೆಕರೆ ನೀಡಿರುವ ಪೂಜ್ಯರು ಮಾನವನಾದವನು ಸಜ್ಜನ ಶರಣರು ಹೇಳಿದ ಮಾತುಗಳನ್ನು ಕೇಳಿ ಎಚ್ಚರಾದರು.ಮಾನವಜನ್ಮ ಸಾರ್ಥಕವಾಗುತ್ತದೆ.ಜೀವನದಲ್ಲಿ ನೆಮ್ಮದಿ, ಶಾಂತಿದೊರೆಯಬೇಕಾದರೆ ಶರಣರದರ್ಶನ ಮಾಡಬೇಕು.ಸತ್ಸಂಗದಲ್ಲಿ ಪಾಲ್ಗೋಳ್ಳಬೇಕು.ಶ್ರದ್ಧಾ ಭಕ್ತಿ ಬೆಳೆಸಿಕೊಳ್ಳಬೇಕು” ಎನ್ನುವ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳ ವಿಚಾರಗಳನ್ನು ಆಲಿಸುವುದೇ ಬಹುದೊಡ್ಡ ಭಾಗ್ಯಎನ್ನಬಹುದು.
ನಮ್ಮ ಸಂಸ್ಕೃತಿಯ ಪ್ರಾಚೀನ ಬೇರುಗಳಿಗೆ ಹೊಸ ಚಿಗುರನ್ನು ಸೇರಿಸುತ್ತಾ ತಮ್ಮ ಸಮನ್ವಯ ದೃಷ್ಠಿ, ಮೃದು ವಚನ, ಸಕಲ ಜಪ, ತಪ, ಸಾಹಿತ್ಯ ಸಂಸ್ಕೃತಿ, ಧರ್ಮಾಚರಣೆ, ಸಮಾಜ ಸುಧಾರಣೆ ಮುಂತಾದ ಕಾರ್ಯಗಳಿಂದ ಶ್ರೀ ಮುಕ್ತಿಮಠವನ್ನು ಇನ್ನಷ್ಟು ಉಜ್ವಲವಾಗಿರಿಸಿದವರು. ಅವರ ಸಾಧನೆ ಸಿದ್ಧಿಗಳಿಗೆ ಈಗ ಇಪ್ಪತ್ತಾರರ ಸಂಭ್ರಮ. ಆ ಸಂಭ್ರಮಕ್ಕೆ ನೂರಾಗಲಿ ಇನ್ನಷ್ಟು ದ್ವಿಗುಣವಾಗಲಿ. ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೂ ಶ್ರೀಗಳವರ ರಚನಾತ್ಮಕ ಕಾಯಕಗಳು ದಾರಿದೀಪವಾಗಲಿ!.
ಇಂಥ ಮಹಾನ ಗುರುವಿನ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಸಾಲಿನ ಜಾತ್ರಾ ಮಹೋತ್ಸೋವದಲ್ಲಿ ನಾವು ನೀವೆಲ್ಲ ಭಾಗಿಗಳಾಗಿ ಶ್ರೀ ಗುರುವಿನ ಆರ್ಶೀವಾದ ಪಡೆದು ಸದ್ಗುರುವಿನ ಕೃಪೆಗೆ ಪಾತ್ರರಾಗಿ ನಮ್ಮಜೀವನ ಪಾವನ ಮಾಡಿಕೊಳ್ಳೋಣ

error: Content is protected !!