ಬೆಳಗಾವಿ-11: ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಜೆ.ಜಿ.ಎನ್.ಡಿ. ಭರತೇಶ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಮೂರನೇಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ.
ಅಂತರ್ ವಿಶ್ವವಿದ್ಯಾಲಯದ 2023-24 ನೇ ಸಾಲಿನ ಕ್ರಿಡಾ ಸ್ಪರ್ಧೆಗಳನ್ನು ತಮಿಳುನಾಡಿನ ಚೈನೈ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವತಿಯಿಂದ ಈ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು. ಈ ಕ್ರೀಡೆ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ 400 ಮಿಟರ್ ರಿಲೆ ಓಟದ ಸ್ಪರ್ಧೆಯಲ್ಲಿ ಭರತೇಶ ಮಹಾವಿದ್ಯಾಲಯದ ತುಷಾರ ಬೆಕನೆ, ಚೈತನ್ಯ ಮುರಲಿಯಾರ , ಹಾಗೂ ಭುವನ ಪೂಜಾರಿ ಅತ್ಯುತ್ತಮ ಸಾಧನೆಗೈದು ನಾಲ್ಕನೇಯ ಸ್ಥಾನದೊಂದಿಗೆ ಜಯಗಳಿಸಿ ರಾಷ್ಟç ಮಟ್ಟದ ವಿಶ್ವ ವಿದ್ಯಾಲಯಗಳ ಕ್ರೀಡಾ ಸ್ಫರ್ಧೆಗಳಿಗೆ ಆಯ್ಕೆಯಾಗುವುದರ ಜೊತೆಗೆ ಖೆಲೋ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಲು ಮಾನ್ಯತೆ ಪಡೆದುಕೊಂಡಿದ್ದಾರೆ. ಅದರಂತೆ ತುಷಾರ ಭೆಕನೆ ವ್ಯಕ್ತಿಗತ 800 ಮೀ ಓಟದಲ್ಲಿ ತೃತಿಯ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಹೀರಾಚಂದ ಕಲಮನಿ ಪ್ರಾಚಾರ್ಯ ಸುನಿತಾ ದೇಶಪಾಂಡೆ , ದೈಹಿಕ ಶಿಕ್ಷಕ ಪ್ರದೀಪ ಜುವೇಕರ ಅವರು ಈ ಕ್ರೀಡಾಪಟ್ಟುಗಳನ್ನು ಸನ್ಮಾನಿಸಿ ಗೌರವಿಸಿದ್ದಾರೆ.