23/12/2024
IMG-20240519-WA0135

ಬೈಲಹೊಂಗಲ-೧೯: ಸ್ವಾತಂತ್ರ್ಯ ಹೋರಾಟಗಾರರಾದ ಅಮಟೂರು ಬಾಳಪ್ಪ ನವರು ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಶ್ರೀ ಗ್ರಾಮದ ಗ್ರಾಮದೇವತೆಯರ ಜಾತ್ರಾ ಪ್ರಯುಕ್ತ ವೀರ ಕೇಸರಿ ಅಮಟೂರು ಬಾಳಪ್ಪ ನಾಟಕ ಪ್ರದರ್ಶನ ಮಾಡುತ್ತಿರುವದು ಅವರ ಚರಿತ್ರೆ ಜನರಿಗೆ ತಿಳಿದು ದೇಶದ ಹೋರಾಟಗಾರ ಛಲ ಹೇಗೆ ಇರುತ್ತದೆ  ಜನರಿಗೆ ತಿಳಿಸುವ ಕಾರ್ಯ ಎಂದು ಚಿತ್ರದುರ್ಗಮಠದ ಯಾದವಾನಂದ ಮಹಾಸ್ವಾಮಿಗಳು ಹೇಳಿದರು.

      ಅವರು ಸಮೀಪದ ಅಮಟೂರು ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯರ ಜಾತ್ರಾ ಪ್ರಯುಕ್ತ ಶನಿವಾರದಂದು ಅಯೋಗಿಸಲಾಗಿದ್ದ ವೀರಕೇಸರಿ ಅಮಟೂರು ಬಾಳಪ್ಪ ನಾಟಕ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದರು.
     ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ ಅಧ್ಯಕ್ಷರಾದ ಬಸಗೌಡ ಪಾಟೀಲ, ಮುಖಂಡರಾದ ಪಂಚನಗೌಡ ದ್ಯಾಮನಗೌಡರ,ಸಚಿನ್ ಪಾಟೀಲ, ಗ್ರಾಂ ಪಂ ಮಾಜಿ ಅಧ್ಯಕ್ಷರಾದ ಸೋಮನಗೌಡ ಪಾಟೀಲ,ಶಂಕರಗೌಡ ಪಾಟೀಲ, ಚಿತ್ರನಟ ಸಿ ಕೆ ಮೆಕ್ಕೆದ,ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
error: Content is protected !!