ಬೆಳಗಾವಿ-೦೩: ಯುಗಲ ಮುನಿಗಳು ಎಂದೇ ಪ್ರಸಿದ್ದಿ ಪಡೆದು ಕರ್ನಾಟಕದ ನಾಡಿನಾದ್ಯಂತ ವಿಹಾರ ನಡೆಸುತ್ತ ಇತ್ತಿಚಿಗೆ ಬೆಳಗಾವಿಗೆ ಆಗಮಿಸಿದ ಪ.ಪೂ.ಶ್ರೀ. 108 ಅಮರಕೀರ್ತಿ ಹಾಗೂ ಪ.ಪೂ.ಶ್ರೀ.108 ಅಮೋಘಕೀರ್ತಿ ಮುನಿಗಳನ್ನು ಬೆಳಗಾವಿ ನಗರದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ಕಳೆದ ಡಿಸೆಂಬರ ತಿಂಗಳಿನಲ್ಲಿ ವೇಣುರನಲ್ಲಿ ನಡೆದ ಭಗವಾನ ಬಾಹುಬಲಿ ಮಸ್ತಕಾಭಿಷೇಕದ ಕಾರ್ಯಕ್ರಮವನ್ನು ಮುಗಿಸಿಕೊಂಡು ವಿಹಾರ ಮಾಡುತ್ತ ಇದಿಗ ಈ ಯುಗಲ ಮುನಿಗಳು ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗಾವಿಯ ಅನಿಗೋಳ,ಹಿಂದವಾಡಿ ಕೋರೆಗಲ್ಲಿಯ ಬಸದಿಗಳಿಗೆ ಮುನಿಗಳು ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪ.ಪೂ.ಶ್ರೀ.108 ಅಮರಕೀರ್ತಿ ಮುನಿಗಳ 50 ನೇ ಜನ್ಮ ಜಯಂತಿ ಆಚರಣೆಯನ್ನು ಮೇ 5 ರಂದು ಮಧಾಹ್ನ 2 ಗಂಟೆಗೆ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಸಲು ಸಮಾಜದ ವತಿಯಿಂದ ನಿರ್ಣಯಿಸಲಾಗಿದೆ. ಈ ಸಮಾರಂಭದ ಸಾನಿಧ್ಯವನ್ನು ಪ.ಪೂ.ಶ್ರೀ. 108 ಅಮೋಘಕೀರ್ತಿ ಮುನಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ.
ಈ ಸಮಾರಂಭಕ್ಕೆ ಬೆಳಗಾವಿಯ ಸಮಸ್ತ ಜೈನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಆಯೋಜಕರು ಕೋರಿದ್ದಾರೆ.