17/03/2026
IMG-20260130-WA0001

ಬೆಳಗಾವಿ-30: ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿನಿಯರು ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

​ಆರನೇ ತರಗತಿಯ ಲಾವಣ್ಯ ಹಾಗೂ ಮೂರನೇ ತರಗತಿಯ ಮನಸ್ವಿ ಭಂಡಾರಿ ಸತತ ೧ ಗಂಟೆ ೨೬ ನಿಮಿಷ ೨೬ ಸೆಕೆಂಡ್‌ಗಳ ಕಾಲ ಬಿಡುವಿಲ್ಲದೆ ಸ್ಕೇಟಿಂಗ್ ಮಾಡುವ ಮೂಲಕ ‘ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಯು.ಎಸ್.ಎ. ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾರೆ. ನಗರದ ಗೋವಾವೇಸ್ ರೋಟರಿ ಕ್ಲಬ್‌ನಲ್ಲಿ ಈ ಪ್ರದರ್ಶನ ನಡೆಯಿತು.
​ವಿದ್ಯಾರ್ಥಿನಿಯರ ಈ ಅಮೋಘ ಸಾಧನೆಯನ್ನು ಶಾಲೆಯ ಪ್ರಾಂಶುಪಾಲರಾದ ಸೋನಾಲಿ ಕಂಗ್ರಾಳ್ಕರ್ ಅವರು ಶ್ಲಾಘಿಸಿದ್ದಾರೆ. ಈ ಯಶಸ್ಸು ಶಾಲೆ ಮತ್ತು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಅವರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!