12/12/2025

 ಬೆಳಗಾವಿ-26:  ಜಾಂಬೋಟಿಯ ಶ್ರೀ ಮಂಜುನಾಥ ದುರ್ಗಾದೇವಿ ದತ್ತ ಮಂದಿರ ಟ್ರಸ್ಟ್ ಕಮೀಟಿಯ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ದತ್ತ ಜನ್ಮೋತ್ಸವ’ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಹೆಚ್ಚು ದೈವೀ ಭಕ್ತರಾಗಿದ್ದು, ಯಾವುದೇ ಕೆಲಸವನ್ನು ಮಾಡುವ ಮುನ್ನ ದೇವರನ್ನು ಸ್ಮರಿಸುತ್ತಾರೆ. ನಿತ್ಯ ದೇವರನ್ನು ಪೂಜಿಸುತ್ತಾರೆ. ಪ್ರತಿಯೊಂದು ಗ್ರಾಮದಲ್ಲೂ ಒಂದಿಲ್ಲೊಂದು ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಆರಾಧಿಸುತ್ತಾರೆ. ನಾನು ಕೂಡ ದೈವೀ ಭಕ್ತಳಾಗಿದ್ದು, ನನ್ನ ಗ್ರಾಮೀಣ ಕ್ಷೇತ್ರದ ದೇವಸ್ಥಾನಗಳಿಗೆ ಅತೀ ಹೆಚ್ಚು ಅನುದಾನ ನೀಡಿದ್ದೇನೆ. ಜೊತೆಗೆ ದೇವರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮಂಜುನಾಥ ಮಹಾರಾಜ, ಅರುಣ ಮಹಾರಾಜ, ಯುವರಾಜ ಕದಂ, ಗಂಗಣ್ಣ ಕಲ್ಲೂರ, ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ರವಿ ಕಾಡಗಿ, ಸುನಿಲ್ ಹಂಜಿ, ಅಡಿವೇಶ್ ಇಟಗಿ ಜಿ.ಕೆ.ಪಾಟೀಲ, ರಘು ಖಂಡೇಕರ್ ಪ್ರದೀಪ್ ಪಾಟೀಲ, ಉಪಸ್ಥಿತರಿದ್ದರು.

error: Content is protected !!