ಬೆಳಗಾವಿ-26:ಬೆನನ್ ಸ್ಮಿತ ಕಾಲೇಜ್ ಆಫ್ ಫೈನ್ ಆರ್ಟ್ಸ್ ಬೆಳಗಾವಿಯಲ್ಲಿ ಕ್ರಿಸಮಸ್ ಹಬ್ಬದ ಪ್ರಯುಕ್ತ ಜಿಂಗಲ್ ಬೆಲ್ಸ್ ೨೦೨೩ ಈವೆಂಟ್ ಆಯೋಜಿಸಲಾಗಿತ್ತು.
ಆನಂದಕ್ಕಾಗಿ ಒಂದು ಕಲೆ ಮತ್ತು ಜೀವನಕ್ಕಾಗಿ ಒಂದು ವೃತ್ತಿ ನೆಮ್ಮದಿಯ ಜೀವನಕ್ಕೆ ಅವಶ್ಯ ಮತ್ತು ಅನಿವಾರ್ಯ ಲಲಿತಕಲೆಗಳು ನಮ್ಮ ಭಾವನೆಗಳ ಉದಾತ್ತ ಅಭಿವ್ಯಕ್ತಿಗಳಾಗಿವೆ. ಭಾವನೆಗಳು ಇಲ್ಲದ ಮನುಷ್ಯ ಕಾಡು ಗಲ್ಲು ಇದ್ದಂತೆ, ಕಾಡು ಗಲ್ಲನ್ನು ಗುದ್ದಿದರೂ ಅಷ್ಟೇ ಮುದ್ದಿಸಿದರೂ ಅಷ್ಟೇ ಅದು ಯಾವುದಕ್ಕೂ ಪ್ರತಿಕ್ರಯಿಸುವದಿಲ್ಲ. ಸೌಂದರ್ಯಪ್ರಜ್ಞೆ ಮತ್ತು ಅದನ್ನು ವ್ಯಕ್ತಪಡಿಸುವ ಕಲೆ ಇಲ್ಲದವ ಕಗ್ಗಲ್ಲಿನಂತೆ. ಬೆಳಗಾವಿಯ ಏಕೈಕ ವಿಶಿಷ್ಟ ಲಲಿತ ಕಲಾ ವಿದ್ಯಾಲಯದ ಮೂಲಕ ಬೆನನ್ ಸ್ಮಿತ್ ಸಂಸ್ಥೆಯು ಯುವ ಜನತೆಯಲ್ಲಿ ಕಲೆ ಕೌಶಲ್ಯವನ್ನು ಅಭಿವ್ಯಕ್ತಿಸುವ ಸಮರ್ಥ ವೇದಿಕೆ ಒದಗಿಸಿ ಕಲಾರಾಧಕರ ಕೃತಜ್ಞತೆಗೆ ಪಾತ್ರವಾಗಿದೆ ಎಂದು ಕ್ರಿಸಮಸ್ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಜಿಂಗಲ್ ಬೆಲ್ಸ್ ೨೦೨೩ ಈವೆಂಟ್ ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ. ಗುರುದೇವಿ ಉ. ಹುಲೆಪ್ಪನವರಮಠ ಹೇಳಿದರು. ವಿವಿಧ ಸ್ಪರ್ಧೇಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಇನ್ನೇತರ ಅತಿಥಿಯಾಗಿ ಶ್ರೀ ವಿಜಯ ಎಲಿಷ್, ಸಂಯೋಜಕರು ಬೆನನ್ ಸ್ಮಿತ್ ಅಂಗ ಸಂಸ್ಥೆ ಹಾಗೂ ಪ್ರಾಚಾರ್ಯರು ಬೆನನ್ ಸ್ಮಿತ್ ಪದವಿ ಪೂರ್ವ ಮಹಾವಿದ್ಯಾಲಯ, ಬೆಳಗಾವಿ. ಡಾ. ಸ್ಯಾಮುಯೆಲ್ ಡೇನಿಯಲ್, ಪ್ರಾಚಾರ್ಯರು ಬೆನನ್ ಸ್ಮಿತ್ ಪದವಿ ಮಹಾವಿದ್ಯಾಲಯ ಬೆಳಗಾವಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ. ವೃಂದಾ ರುಕಡಿಕರ್‌ರವರು ವಹಿಸಿದ್ದರು.
ಪ್ರೊ. ರೀಟಾ ವಿ. ಬಣಗಾರ, ಪ್ರೊ. ದೇವದತ್ತ ರುಕಡಿಕರ, ಪ್ರೊ. ಅಡಿವೆಪ್ಪಾ ಮುಸರಿ, ಪ್ರೊ. ದೇವರಾಜ ಪೂಜಾರಿ, ಪ್ರೊ. ಅಭಿಜೀತ ದೇವ, ಶ್ರೀಮತಿ. ಎಮಿಲಾ ಬಣಗಾರ ಹಾಗೂ ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರ. ನೀಲೇಶ ಪಾಟೀಲ ಮತ್ತು ಕುಮಾರಿ. ದಿವ್ಯಾ ಕಂಗ್ರಾಳ್ಕರ್ ನಿರೂಪಿಸಿದರು. ಕಾರ್ಯಕ್ರಮವನ್ನು ಕುಮಾರಿ. ಶ್ರೇಯಾ ಕುಲಕರ್ಣಿ ವಂದಿಸಿದರು.