23/12/2024

ಬೆಳಗಾವಿ-27:  ಗ್ರಾಮದ ಎಲ್ಲ ಬೇಡಿಕೆಗಳನ್ನೂ ಪರಿಗಣಿಸಿ ಆದ್ಯತೆಯ ಮೇಲೆ ಕಾರ್ಯಗತಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಸುರ್ತೆ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸುರ್ತೆ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು. ನಾನು ರಾಜ್ಯಕ್ಕೆ ಮಂತ್ರಿ ಇರಬಹುದು. ಆದರೆ ನಿಮ್ಮ ಮನೆ ಮಗಳು. ಮನೆ ಮಗಳಾಗಿ ನನ್ನ ಕರ್ತವ್ಯದ ಅರಿವು ನನಗಿದೆ. ನಿಮ್ಮಿಂದಾಗಿ ನಾನು ಈ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ. ಹಾಗಾಗಿ ನಿಮ್ಮ ಋಣ ತೀರಿಸುವ ಕೆಲಸದಲ್ಲಿ ಹಿಂದಡಿ ಇಡುವ ಮಾತೇ ಇಲ್ಲ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಬಸವಂತ ಬೆನಕೆ, ಸಂಜಯ್ ಗೋಜಗೆಕರ್, ರಮೇಶ್ ಗುಮಾತೆ, ಕೃಷ್ಣ ಪಾಟೀಲ, ಉಮೇಶ್ ನಾಯ್ಕ್, ರಾಜು ಭಾಂಡಗೆ, ರಘುನಾಥ್ ಖಂಡೇಕರ್, ಸುರೇಖಾ ಕೇಸರಕರ್, ಸಂಗೀತಾ ನಾಯ್ಕ್, ಲಕ್ಷ್ಮಣ ಡೊಂಗರೆ, ಶಿವಾಜಿ ನಾಯ್ಕ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

error: Content is protected !!