ಬೆಳಗಾವಿ-26 ರಾಷ್ಟೀಯ ರೈತರ ದಿನಾಚರಣೆಯನ್ನು ಬೆಳಗಾವಿ ಸಮೀಪ ಹಲಗಾ ಗ್ರಾಮದಲ್ಲಿ ಬ್ರಹ್ಮಾಕುಮಾರಿಸ್ ಕೃಷಿ ವಿಭಾಗದ ವತಿಯಿಂದ ಭಾನುವಾರ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜಯೋಗಿನಿ ಬಿ.ಕೆ. ಶಾಂತಾಅಕ್ಕನ್ನವರು ರೈತರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡುತ್ತಾ ಬೇರೆಯವರಿಗೆ ಶಿಕ್ಷಣ ತರಬೇತಿ ನೀಡುವಂತೆ, ರೈತರಿಗೆ ಕೃಷಿಯ ಕುರಿತು ತರಬೇತಿ ನೀಡುವುದು ಅವಶ್ಯಕತೆ ಇದೆ. ವರ್ತಮಾನ ಸಮಯದಲ್ಲಿ ಎಲ್ಲ ರೈತ ಸಮುದಾಯದವರು ನಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಡಾಕ್ಟರ, ಇಂಜಿನೀಯರ್, ಲ್ಯಾಯರ್ ಸರ್ಕಾರಿ ನೌಕರಿ ಹಿಡಿಯಬೇಕೆಂದು ಬಯಸುತ್ತಾರೆ. ಎಲ್ಲರೂ ಇದೆ ರೀತಿ ಮಾಡಿದರೆ ಮುಂಬರುವ ದಿನಗಳಲ್ಲಿ ಎಲ್ಲರಿಗೂ ಆಹಾರ ಸಿಗುವುದು ಕಠಿಣವಾಗುತ್ತದೆ. ಹಳ್ಳಿಗಳಿಂದ ಹಾಲು ಪೇಟೆಗೆ ಹೋಗುತ್ತದೆ. ಪೇಟೆಯಿಂದ ಅಲ್ಕೋಹಾಲ ಹಳ್ಳಿಗೆ ಬರತಾ ಇದೆ ಇದರಿಂದ ರೈತರ ಜೀವನ ಅದೋಗತಿ ಹೋಗುತ್ತಾಯಿದೆ. ಎಲ್ಲರೂ ಆರೋಗ್ಯವಾಗಿ ಇರಬೇಕಾದರೆ, ರಾಸಾಯಿನಿಕ ಮುಕ್ತ ಬೆಳೆಗಳನ್ನು ಬೆಳೆಸಿ, ಒಳ್ಳೆಯ ಆಹಾರ ಸೇವನೆಯಿಂದ ಆರೋಗ್ಯದಿಂದ ಇರಲು ಸಾಧ್ಯ ಎಂದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಶ್ರೀ ಶಿವನಗೌಡಾ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಬೆಳಗಾವಿ ಜಿಲ್ಲಾ ಮಾತನಾಡುತ್ತಾ ರೈತರು ಕಾಯಕ ಯೋಗಿಗಳಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಾಗ ಶಾರೀರಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ. ಇವತ್ತು ಎಲ್ಲರಿಗೂ ಎಲ್ಲವು ಇದೆ. ಆದರೆ ಆರೋಗ್ಯವೇ ಇಲ್ಲ ಇದಕ್ಕೆ ಕಾರಣ. ರಾಸಾಯಿನಿಕ ಬಳಿಕೆ ರೈತರು ಸಾಯವ ಕೃಷಿ ಕೈಗೊಳ್ಳಬೇಕು. ಯಾರು ಸಂಪೂರ್ಣವಾಗಿ ಆರೋಗ್ಯದಿಂದ ಇರುತ್ತಾರೂ ಅವರೇ ನಿಜವಾದ ಶ್ರೀಮಂತರು ಎಂದರು. ಅತಿಥಿಯಾಗಿ ಆಗಮಿಸಿದ ಅಖಂಡ ಕರ್ನಾಟಕದ ರೈತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ವಾಲಿ ಮಾತನಾಡುತ್ತ, ರೈತರಲ್ಲಿ ತಾಳ್ಮೆ ಮುಖ್ಯ ವರ್ತಮಾನ ಸಮಯದಲ್ಲಿ ರೈತರು ಕಷ್ಟಪಟ್ಟು ದುಡಿದರು ಸರಿಯಾದ ಬೆಳೆ ಬರತಾ ಇಲ್ಲ. ಬೆಳೆ ಬಂದರು ಅದಕ್ಕೆ ಸರಿಯಾದ ಬೆಲೆ ಸಿಗತ್ತಾ ಇಲ್ಲ. ಆದ್ದರಿಂದ ರೈತರು ಕೃಷಿ ಮಾಡಲು ಹಿಂಜರಿಯುತ್ತಿದ್ದಾರೆ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗಬೇಕಾಗಿದೆ ಎಂದರು. ರಾಜಯೋಗಿ ಬಿ. ಕೆ. ಮಹಾಂತೇಶ ಅಣ್ಣನ್ನವರು ಯೋಗದ ಮೂಲಕ ಕೃಷಿ ಬಗ್ಗೆ ತಿಳಿಸುತ್ತಾ ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಕೊಟ್ಟಿಗೆ ಗೊಬ್ಬರದಿಂದ ಪ್ಪಪ್ಪಾಯಿ ಹಾಗೂ ಹೆಸರುಕಾಳು ಬೆಳೆಯನ್ನು ಬೆಳೆಯುವ ಅನುಭವವನ್ನು ಹಂಚಿಕೊAಡರು. ಶ್ರೀಮತಿ ರಾಜೇಶ್ವರಿ ರೇಣುಕೆಗೌಡರ ಮಾತನಾಡುತ್ತಾ ಸಮಾಜದಲ್ಲಿ ರೈತರು ಅಂದರೆ ಕಿಳರಮೆ ಉಂಟಾಗಿದೆ. ರೈತನ ಮಗ ಅಂದರೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಈ ರೀತಿ ಆಗಬಾರದು “ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ” ಎಂಬಂತೆ ರೈತರಿಗೆ ಸಮಾಜದಲ್ಲಿ ಗೌರವ ಸಿಗುವ ಹಾಗೇ ಆಗಬೇಕು ಎಂದರು. ರಾಜಯೋಗಿನಿ ಬಿ. ಕೆ. ಮೀನಾಕ್ಷಿ ಅಕ್ಕನ್ನವರು ಈಶ್ವರಿಯ ಸಂದೇಶ ನೀಡಿದರು.
ರಾಷ್ಟೀಯ ರೈತ ದಿನಾಚಾರಣೆ ಅಂಗವಾಗಿ ಪ್ರಗತಿ ಪರ ರೈತರಾದ ಹಲಗಾದ ಶ್ರೀ ತವನಾಪ್ಪ ಪಾಯನ್ನವರ, ಆಲಾರವಾಡದ ಶ್ರೀ ಭೀಮಪ್ಪಾ ಪುನಜಿಗೌಡಾ, ಮಾಸ್ತಮರಡಿಯ ಶ್ರೀ ಮಾರುತಿ ಚೌಗಲಾ, ತಾರೀಹಾಳದ ಯಲ್ಲಪ್ಪಾ ನಿಲಜಕರ ಇವರನ್ನು ಸನ್ಮಾನಿಸಲಾಯಿತು.ಬಿ. ಕೆ. ಸುನಿತಾ ಸ್ವಾಗತಿಸಿದರು, ಬಿ. ಕೆ. ಶ್ರೀಕಾಂತ ನಿರೂಪಿಸಿದರು, ಬಿ.ಕೆ. ಯಲ್ಲಪ್ಪಾ ಪರಾಂಡೆ ವಂದಿಸಿದದರು.