ಬೆಳಗಾವಿ-25: ತಾರಿಹಾಳ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಮಹಾಪೂಜೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡಿದರು.
ಮಕರ ಸಂಕ್ರಾಂತಿ ದಿನದಂದು ಮಕರ ಜ್ಯೋತಿಯ ದರ್ಶನ ಪಡೆಯಲು ಶಬರಿಮಲೆಗೆ ತೆರಳಲಿರುವ ಎಲ್ಲ ಅಯ್ಯಪ್ಪ ಮಾಲಾದಾರಿಗಳಿಗೆ ಸಚಿವರು ಶುಭ ಹಾರೈಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಪಾಂಡು ಖನಗಾಂವ್ಕರ, ನಾಗಯ್ಯ ಪೂಜಾರಿ, ಸೂರ್ಯಾಜಿ ಜಾಧವ್, ಯಲ್ಲಪ್ಪ ಚಿಕಲಿಕೆ, ಯಲ್ಲಪ್ಪ ಜಿ, ಯಲ್ಲಪ್ಪ ಖನಗಾಂವ್ಕರ್, ಬಾಗೇವಾಡಿ ಸಿ ಪಿ ಐ ನೀಲಗಾರ್, ನಾಮದೇವ್ ಜೋಗನ್ನವರ, ರಮೇಶ್ ಜಳಕನ್ನವರ್, ಈರಪ್ಪ ಭೋಮನ್ನವರ, ಪ್ರಮೋದ್ ಜಾಧವ್, ಅಡಿವೆಪ್ಪ ರಾಗಿಪಾಟೀಲ, ಅನಿಲ ಪೂಜಾರಿ ಹಾಜರಿದ್ದರು.