30/03/2026
IMG-20260325-WA0000

ಬೆಳಗಾವಿ-25: ಕೇಂದ್ರ ಸರ್ಕಾರದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ಘನತೆ ಮತ್ತು ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿ ನಗರದಲ್ಲಿ ಪ್ರತಿಭಟನಾ ರ್ಯಾ ಲಿ ನಡೆಸಿದರು.
ಸೋಮವಾರ ನಗರದ ಚೆನ್ನಮ್ಮ ವೃತ್ತದಿಂದ ಲೈಗಿಂಕ ಲಿಂಗತ್ವ ಅಲ್ಪ ಸಂಖ್ಯಾತ ಕಾರ್ಯಕರ್ತರು ಪ್ರತಿಭಟನಾ ರ್ಯಾ ಲಿ ಮೂಲಕ ಆಗಮಿಸಿ, ಜಿಲ್ಲಾಧಿಕಾರಿಗಳ ಕಛೇರಿ ಎದುರು ಕೇಂದ್ರದ ವಿರುದ್ದ ಪ್ರತಿಭಟಸಿದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 2026ರ ಹೊಸ ತಿದ್ದುಪಡಿ ಮಸೂದೆಯು ಸಂವಿಧಾನಬದ್ಧವಾಗಿ ಸಿಕ್ಕಿರುವ ಲಿಂಗ ಗುರುತಿನ ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಐತಿಹಾಸಿಕ ‘ನಲ್ಸಾ’ ತೀರ್ಪಿನ ಅನ್ವಯ ದೊರೆತಿರುವ ದೇಹದ ಸ್ನಾಯತ್ತತೆ ಮತ್ತು ಮೂಲಭೂತ ಹಕ್ಕುಗಳಿಗೆ ಈ ಮಸೂದೆ ನೇರ ಧಕ್ಕೆ ತರುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ್ ವನ್ನು ಹೋರ ಹಾಕಿದರು.
2017ರ ಕರ್ನಾಟಕ ರಾಜ್ಯ ಲಿಂಗತ್ಯ ಅಲ್ಪಸಂಖ್ಯಾತ ನೀತಿಗೆ ಈ ಹೊಸ ತಿದ್ದುಪಡಿ ವಿರುದ್ಧವಾಗಿದೆ. “ಟ್ರಾನ್ಸ್ಜೆಂಡರ್” ಎಂಬ ಪದದ ವ್ಯಾಪ್ತಿಯನ್ನು ಸೀಮಿತಗೊಳಿಸುವ ಮೂಲಕ ಸಮುದಾಯದ ದೊಡ್ಡ ವಿಭಾಗವನ್ನೇ ಕಾನೂನಿನ ರಕ್ಷಣೆಯಿಂದ ಹೊರಗಿಡಲು ಯತ್ನಿಸಲಾಗುತ್ತಿದೆ ಎಂದರು.
ಕೂಡಲೇ ಈ ವಿವಾದಿತ 2026ರ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಪೂರ್ಣ ನಾಗರಿಕರಾಗಿ ಒಳಗೊಳ್ಳುವ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಮಸೂದೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ಎಚ್ಚರಿಕೆ ನೀಡಿದರು.
ಈ ವೇಳೆ ಲಿಂಗತ್ವ ಅಲ್ಪ ಸಂಖ್ಯಾತರು ಜಿಲ್ಲಾಧ್ಯಕ್ಷರು ಕಾರ್ಯದರ್ಶೀಗಳು, ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!