ಬೆಳಗಾವಿ-24 : ಉತ್ತರ ಪ್ರದೇಶ ಮಥುರಾದಲ್ಲಿ ಚಂದ್ರಶೇಖರ ಸ್ವಾಮೀಜಿಗಳನ್ನು ಹತ್ಯೆ ಮಾಡಿದವರ, ವಿರುದ್ದ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿ ಕಾಮದೇನು ಅಯಪ್ಪ ಸಾಮಾಜಿಕ ಸೇವಾ ಸಂಘಟನೆ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸೋಮವಾರ ಕಾಮದೇನು ಅಯಪ್ಪ ಸಾಮಾಜಿಕ ಸೇವಾ ಸಂಘಟನೆ ಕಾರ್ಯಕರ್ತರು ಜಿಲ್ಲಾದಿಕಾರಿಗಳ ಕಛೇರಿಗೆ ಆಗಮಿಸಿ ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್ ಸ್ವಾಮೀಜಿಗಳನ್ನು ಹತ್ಯೆ ಮಾಡಿದವರ ವಿರುದ್ದ ಕಾನೂನಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿ ಪ್ರತಿಭಟನೆ ನಡೆಸಿದರು.
ಮಥುರಾದಲ್ಲಿ ಮಾರ್ಚ್ 21 ರಂದು ಗೋವುಗಳನ್ನು ವಾಹನದಲ್ಲಿ ತುಂಬಿಕೊಂಡು ತೆರಳುತ್ತಿದ್ದ ವೇಳೆ ಚಂದ್ರಶೇಖರ್ ಸ್ವಾಮೀಜಿಗಳ ವಾಹನಕ್ಕೆ ಅಡ್ಡ ಕಟ್ಟಿ ವಾಹನದಲ್ಲಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಹಾಗೂ ಚಂದ್ರಶೇಖರ ಅವರ ನಡುವೆ ವಾಗ್ವಾದ ನಡೆದು ಚಂದ್ರಶೇಖರ ಅವರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿದ್ದಾರೆ. ಗೋ ರಕ್ಷಣೆ ಮಾಡುವವರಿಗೆ ಜೀವಕ್ಕೆ ಬೆಲೆ ಇಲ್ಲದಂತೆಯಾಗಿದೆ ಎಂದು ದುಖಃವನ್ನು ವ್ಯಕ್ತಪಡಿಸಿದರು.
ಗೋ ರಕ್ಷಣೆ ಮಾಡುವದಕ್ಕೆ ಬಂದ ಚಂದ್ರಶೇಖರ ಸ್ವಾಮೀಜಿ ಅವರ ಕೋಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಗೋ ಹತ್ಯೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶಾದ್ಯಂತ ಸಂಫೂರ್ಣವಾಗಿ ಗೋ ಹತ್ಯೆ ಬಂದ ಯಾಗಬೇಕು, ಇಲ್ಲವಾದಲ್ಲಿ ಗೋ ಹತ್ಯೆ ಕೋರವನ್ನು ನಡಯ ರಸ್ತೆಯಲ್ಲಿ ನಿಲ್ಲಿಸಿ ಕಲ್ಲುಗಳಿಂದ ಹೋಡೆಯಬೇಕಾಗಯತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಾಮದೇನು ಅಯಪ್ಪ ಸಾಮಾಜಿಕ ಸೇವಾ ಸಂಘಟನೆ ಜಿಲ್ಲಾಅಧ್ಯರು, ಕಾರ್ಯದರ್ಶಿಗಳು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
