25/03/2026
IMG-20260323-WA0011

ಬೆಳಗಾವಿ-23 : ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿದ್ದ ಐತಿಹಾಸಿಕ ಹಲ್ಮಡಿ ಶಾಸನದ ಪ್ರತಿಕೃತಿ ನಾಪತ್ತೆಯಾಗಿದ್ದು, ಶಾಸನ ಮಾಹವಾಗಿರುವುದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶವನ್ನು ಹೋರಹಾಕಿ ಸರ್ಕಾರದ ವಿರುದ್ದ ಕೆಂಡಾಮಂಡಲವಾಗಿದ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.
ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆದು ಹಲ್ಮಡ್ಡಿ ಶಾಸನದ ಪ್ರತಿಕೃತಿಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕೆಂದು ಆದೇಶವಾಗಿ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಈ ಶಾಸನವನ್ನು ಹಾಕಲಾಗಿತ್ತು. 2024ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಅನಾವರಣವನ್ನು ಮಾಡಿದ್ದರು. ಆದರೇ, ಈಗ ಅದು ಮಾಯವಾಗಿದ್ದು, ಇದು ಸಿಎಂ, ಕನ್ನಡ ಸಾಹಿತ್ಯ ಕನ್ನಡ ಪರಂಪರೆಗೆ ಮಾಡಿದ ಅಪಮಾನವಾಗಿದೆ ಎಂದು ಕನ್ನಡ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅಸಮಾದಾನ ಹೋರ ಹಾಕಿದರು.
ಇದೇ ವೇಳೆ ಮತ್ತೋರ್ವ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಮಾತನಾಡಿದಿ, ಹಲ್ಮಡಿ ಶಾಸನದ ಪ್ರತಿಕೃತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಭಿಮಾನವಿಲ್ಲ. ಕಳೆದು ಹೋದ ಶಾಸನವನ್ನುಕನ್ನಡಪರ ಸಂಘಟನೆಗಳ ಆಕ್ರೋಶ್. ಹುಡುಕುವ ಕಾರ್ಯವನ್ನು ಮಾಡುತ್ತೇವೆ. ಒಂದು ವೇಳೆ ಸಿಗದಿದ್ದರೇ ಎಫ್.ಐ.ಆರ್ ದಾಖಲಿಸಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ,ಶ್ರೀನಿವಾಸ್ ತಾಳೂರಕರ್, ವಾಜೀದ್ ಹಿರೇಕುಂಡಿ ಸೇರಿದಂತೆ ಇತರರರು ಕನ್ನರಪರ ಸಂಘಟನೆಯ ಹೋರಾಟಗಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!