28/07/2026
IMG-20260727-WA0000

ಬೆಳಗಾವಿ-27:ಎಸ್‌ಐಆರ್ ಕಾರ್ಯದ ಒತ್ತಡದ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೋರ್ವ ಶಿಕ್ಷಕ ಮೃತಪಟ್ಟಿರುವ ಘಟನೆ ಅಥಣಿ ಪಟ್ಟಣದಲ್ಲಿ ಇತ್ತೀಚೆಗೆ  ನಡೆದಿದೆ.

ಮೃತರನ್ನು ಅಥಣಿ ಪಟ್ಟಣದ ನಿವಾಸಿ ಹಾಗೂ ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಪಡದಾಳೆ ತೋಟದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಮತ್ತು ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಕಾಂಬಳೆ ಎಂದು ಗುರುತಿಸಲಾಗಿದೆ.
ಎಸ್‌ಐಆರ್ ಕಾರ್ಯದ ಒತ್ತಡದಿಂದ ಪ್ರಕಾಶ್ ಕಾಂಬಳೆ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಪ್ರತಿದಿನ ಮನೆಗೆ ಬಂದ ಬಳಿಕ “ಎಸ್‌ಐಆರ್ ಕೆಲಸ ತುಂಬಾ ಇದೆ, ಬೇಗ ಮುಗಿಸಬೇಕು, ದಿನವೂ ಒತ್ತಡ ಹೆಚ್ಚುತ್ತಿದೆ” ಎಂದು ಪತ್ನಿ ಹಾಗೂ ಕುಟುಂಬದವರಿಗೆ ಹೇಳಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ರಕ್ತದೊತ್ತಡ (ಬಿಪಿ) ಕಡಿಮೆಯಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಳಿಕ ಅವರು ಮೃತಪಟ್ಟಿದ್ದಾರೆ. “ನನ್ನ ಪತಿಯ ಸಾವಿಗೆ ಎಸ್‌ಐಆರ್ ಕಾರ್ಯದ ಒತ್ತಡವೇ ಕಾರಣ” ಎಂದು ಪತ್ನಿ ಮಾಲಾ ಪ್ರಕಾಶ್ ಕಾಂಬಳೆ ಆರೋಪಿಸಿದ್ದಾರೆ.
ಪ್ರಕಾಶ್ ಕಾಂಬಳೆ ಅವರ ನಿಧನದಿಂದ ಅಥಣಿ ಪಟ್ಟಣದ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶಿಕ್ಷಕರ ವಲಯದಲ್ಲೂ ತೀವ್ರ ಶೋಕ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!