ಬೆಳಗಾವಿ-25 : ಸರ್ಕಾರಿ ನೌಕರರಿಗೆ ನೀಡುತ್ತಿರುವ ಪಿಂಚಣಿಯಲ್ಲಿ ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾ ಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ಮಾರ್ಚ್ನಲ್ಲಿ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆರ್ಥಿಕ ಬಿಲ್ನಲ್ಲಿ 2025ರ ಏಪ್ರಿಲ್ 1ಕ್ಕಿಂತ ಮುನ್ನ ಸೇವಾನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ನೀಡುವ ಪಿಂಚಣಿ ಮತ್ತು ಕೌಟುಂಬಿಕ ಪಿಂಚಣಿಯಲ್ಲಿನ ಕೆಲವು ಸೌಲಭ್ಯ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆಂದು ಪತ್ರಿಭಟನೆಯಲ್ಲಿ ಆಕ್ರೋಶ್ ಹೋರ ಹಾಕಿದರು.
ಪಿಂಚಣಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಕೆಲ ನಿವೃತ್ತ ನೌಕರರು ಮತ್ತು ಅವಲಂಬಿತರು ಸಂಕಷ್ಟಕ್ಕೆ ಸಿಲುಕಲಿದ್ದು, ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ಪ್ರತಿಭಟನೆಯಲ್ಲಿ ಮನವಿ ಮಾಡಿಕೊಂಡರು.
ಈ ವೇಳೆ ಸಂಘದ ಅಧ್ಯಕ್ಷ ಎಸ್.ಜಿ.ಸಿದ್ನಾಳ, ಮಹಾಂತೇಶ ಹಿರೇಮಠ, ಎಂ.ಎಸ್.ಮುದಕವಿ, ಸಂಜೀವ ಬಡಿಗೇರ, ಎಂ.ಕೆ.ಅಗಸರ, ಸುಶೀಲಾ ರಜಪೂತ, ಕುಸುಮಾ ಕುರುಬಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
