ಬೆಳಗಾವಿ– 23: ಇದೇ ದಿನಾಂಕ ೨೬ ಶುಕ್ರವಾರದಂದು ಸಾಯಂಕಾಲ ೬-೩೦ ಕ್ಕೆ ‘ಮರಣ ಮೃದಂಗ’ ನಾಟಕ ನಗರದ ಶೇಖ ಆಸ್ಪತ್ರೆಯ ಎದುರಿಗಿರುವ ರಾಮದೇವ ಹೊಟೇಲ ಹತ್ತಿರ ಇರುವ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಇದೊಂದು ರಾಜಕೀಯ ವಿಡಂಬನಾತ್ಮಕ ನಾಟಕ. ರಾಜೇಂದ್ರ ಕಾರಂತರ ರಚನೆಯಾಗಿದ್ದು ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನವಿದೆ. ಶ್ರೀಪತಿ ಮಂಜನಬೈಲು ಮತ್ತು ಅಂತರಾ ಕುಲಕರ್ಣಿ ಸಂಗೀತವಿದೆ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಾರ್ಯದರ್ಶಿ ಪ್ರಸಾದ ಕಾರಜೋಳ ತಿಳಿಸಿದ್ದಾರೆ.