23/12/2024
IMG-20240123-WA0027

ಬೆಳಗಾವಿ-23: ಅಯೋಧ್ಯೆಯಲ್ಲಿ ಜ. 22 ರಂದು ಶ್ರೀರಾಮ ಪ್ರತಿಮೆ ಪ್ರತಿಷ್ಠಾಪನೆಯ ಅಂಗವಾಗಿ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ವತಿಯಿಂದ ಜಿತೋ ಬೆಳಗಾವಿ ಮನೋಜ ಸಂಚೇತಿ ಆಫೀಸನಲ್ಲಿ ಸೋಮವಾರ ಸಾಯಂಕಾಲ ಅಗ್ನಿಹೋತ್ರ ಪೂಜೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಗ್ನಹೋತ್ರ ಪೂಜೆಯನ್ನು ನಡೆಸಿಕೊಟ್ಟ ವಿನಾಯಕ ಲೋಕುರ ಅವತು ಮಾತನಾಡುತ್ತ , ಭಾರತೀಯ ವೇದ ಪುರಾಣಗಳಲ್ಲಿ ಹಾಗೂ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದ ಅಗ್ನಹೋತ್ರ ಪೂಜೆ ಎಂದೆಂದಗೂ ಮಹತ್ವವನ್ನು ಪಡೆದುಕೊಂಡಿದೆ. ನಾವು ವಾಸಿಸುವ ಸ್ಥಳ, ಪರಿಸರ ಹಾಗೂ ವಾತಾವರಣ ಶುದ್ದವಾಗಿರಬೇಕೆಂದರೆ ಪ್ರತಿ ದಿನ ಎಲ್ಲರೂ ಅಗ್ನಿಹೋತ್ರ ಪೂಜೆಯನ್ನು ಮಾಡಬೇಕು. ಪ್ರತಿ ದಿನ ಸುರ್ಯೋದಯ ಮತ್ತು ಸುರ್ಯಾಸ್ತ ಸಮಯದಲ್ಲಿ ಮಾತ್ರ ಅಗ್ನಿಹೋತ್ರ ಪೂಜೆಯನ್ನು ಮಾಡಬೇಕೆಂದು ಅವರು ತಿಳಿಸಿದರು.
ಅನಾದಿಕಾಲದಿಂದಲೂ ಋಷಿ ಮುನಿಗಳು ಅಗ್ನಿಹೋತ್ರ ಪೂಜೆಯನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ಅಗ್ನಿಹೋತ್ರ ಪೂಜೆಯ ಮಹತ್ವವನ್ನು ವಿದೇಶಿಗರು ಸಹ ತಿಳಿದುಕೊಂಡಿದ್ದು, ಅನೇಕ ದೇಶಗಳಲ್ಲಿ ಪ್ರತಿ ಅಗ್ನಿಹೋತ್ರ ಪೂಜೆಯನ್ನು ಮಾಡುತ್ತಿದ್ದಾರೆ ಎಂದು ವಿನಾಯಕ ಲೋಕುರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿತೊ ಪದಾಧೀಕಾರಿಗಳು ಅಗ್ನಿಹೋತ್ರ ಪೂಜೆಯಲ್ಲಿ ಪಾಲ್ಗೊಂಡು ಪೂಜೆಯನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಿದರು. ಜೀತೊ ಅಧ್ಯಕ್ಷ ವಿರಧವಲ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಸತೀಶ ಮೆಹತಾ ಅತಿಥಿಗಳನ್ನು ಪರಿಚಯಿಸಿದರು. ಜಿತೋ ಲೇಡಿಜ ವಿಂಗ ಅಧ್ಯಕ್ಷೆ ಮಾಯಾ ಜೈನ , ಜಿತೋ ಯುಥ ವಿಂಗ ಅಧ್ಯಕ್ಷ ದೀಪಕ ಸುಬೇದಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಜಿತೋ ಕಾರ್ಯದರ್ಶಿ ಅಶೋಕ ಕಠಾರಿಯಾ ವಂದಿಸಿದರು.

error: Content is protected !!