23/12/2024

ಹುಕ್ಕೇರಿ-22: ಹುಕ್ಕೇರಿ ತಾಲೂಕಿನ ಅಕ್ಕಿವಾಟ ಗ್ರಾಮದಲ್ಲಿ ರಾಮನವಮಿ ಹುಣ್ಣಿಮೆ ಮತ್ತು ರಾಮಮಂದಿರ ನಿರ್ಮಾಣದ ನಿಮಿತ್ಯ ಗ್ರಾಮದಲ್ಲಿ ಹನುಮಾನ್ ಮಂದಿರ ಹಾಗೂ ಬಸವೇಶ್ವರ ಮಂದಿರ ಕಳಸಾರೋಣ ಕಾರ್ಯಕ್ರಮ ಶ್ರೀ ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಶಿ ಇವರ ಅಮೃತ ಹಸ್ತದಿಂದ ನೆರವೇರಿತು.

 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಗಳು ಪ್ರತಿಯೊಬ್ಬ ಮನುಷ್ಯನು ದೇಶದ ಬಗ್ಗೆ ಊರಿನ ಬಗ್ಗೆ ಶ್ರದ್ಧೆಯಿಂದ ಸೇವೆ ಮಾಡಿದರೆ ದೇಶ ಸೇವೆ ಗ್ರಾಮ ಸೇವೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಸಮಾಜಕ್ಕಾಗಿ ಸೇವಾ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು ಸನ್ಮಾನಿತರು ಸಂತೋಷ ಬಾಬು ಬಲೋಬಾಳ ಬಾಬುರಾವ್ ಬಿ ಹನಿಮನಾಳ ಮಾರುತಿ ಬರ್ಮಾ ಶೆಟ್ಟೆನ್ನವರ್ ಅನಿಲ್ ನಲವಡೆ ರಮೇಶ್ ಕಾಂಬ್ಳೆ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಊರಿನ ಸುಮಂಗಲರು ಕುಂಭಕೋಡ ಆರತಿಮೇಳ ಕರಡಿಮಜಲು ಊರಿನ ಬೀದಿಗಳಲ್ಲಿ ಸಂಚರಿಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು ಕಾರ್ಯಕ್ರಮವನ್ನು ಅಪ್ಪಾಸಾಬ ಸತಾಪ್ಪ ಶೆಟೆನವರ್ ನಿರೂಪಿಸಿದರು

error: Content is protected !!