ಮೂಡಲಗಿ-21 : ಕುರುಹಿನಶಟ್ಟಿ ಅರ್ಬನ್ ಸೊಸೈಟಿಯ ಪ್ರಸಕ್ತ ಮಾರ್ಚ್ ಕೊನೆಯಲ್ಲಿ 5.85 ಕೋಟಿ ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಸ ಬೆಳಕೂಡ ಹೇಳಿದರು.
ಸಂಘದ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು 17 ಶಾಖೆಗಳನ್ನು ಹೊಂದಿ ಅದರಲ್ಲಿ ನಾಲ್ಕು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೂರು ಶಾಖೆಗಳು ಸ್ವಂತ ನಿವೇಶನ ಹೊಂದಿವೆ ಮತ್ತು ಸದ್ಯದಲ್ಲಿಯೇ ಅಥಣಿ ಪಟ್ಟಣದಲ್ಲಿ ನೂತನ ಶಾಖೆ ಪ್ರಾರಂಭವಾಗಲಿದೆ. ಠೇವುಗಳು 299.70 ಕೋಟಿ ಸಂಗ್ರಹಿಸಿ, 193.47 ಕೋಟಿ ಸಾಲ ವಿತರಿಸಿ, ದುಡಿಯುವ ಬಂಡವಾಳ 345.10 ಹೊಂದಿ, 115.28 ಕೋಟಿ ವಿವಿಧ ಕಡೆ ಗುಂತಾವಣಿ ಮಾಡಿ ಮಾರ್ಚ ಅಂತ್ಯಕ್ಕೆ ನಿವ್ವಳ ಲಾಭ 5.85 ಕೋಟಿ ಹೊಂದಿದ್ದು. ನಿಮ್ಮೆಲ್ಲರ ಸಹಕಾರ ಸದಾ ಈ ಸಂಘಕ್ಕೆ ಇರಲಿ ಎಂದರು.
ನಿರ್ದೇಶಕ ಬಸಪ್ಪ ಮುಗಳಖೋಡ ಮಾತನಾಡಿದರು.
ಪ್ರಧಾನ ಕಛೇರಿಯ ಉಪಾಧ್ಯಕ್ಷ ಇಸ್ಮಾಯಿಲ್ ಕಳ್ಳಿಮನಿ ನಿರ್ದೇಶಕರಾದ ಲಕ್ಕಪ್ಪ ಪೂಜೇರಿ, ಗೊಡಚೆಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ ಇದ್ದರು.
ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
