ಬೆಳಗಾವಿ-20: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 10, ಚಿಕ್ಕೋಡಿ ಕ್ಷೇತ್ರದಿಂದ 6 ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಯಾಗಿದ್ದು, ಅರ್ಜಿಗಳನ್ನು ಹೈಕಮಾಂಡ್ ಗೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಸಿದ್ದತೆ ಬಗ್ಗೆ ಈಗಾಗಲೇ ದೆಹಲಿ ಮತ್ತು ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಇನ್ನೊಂದು ವಾರದಲ್ಲಿ ಚುನಾವಣಾ ತಯಾರಿ ಚುರುಕುಗೊಳ್ಳಲಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಸಚಿವರಿಗೆ ಯಾವುದೇ ಮಾನದಂಡ ವಿಲ್ಲ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಆದರೆ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಕು ಸಾಧ್ಯವಿಲ್ಲ. ಹೀಗಾಗಿ ತೆಲೆದಂಡ ಎಂಬುವುದು ಸುಳ್ಳು. ಇಂತಹ ಯಾವುದೇ ವಿಚಾರಗಳು ಹೈಕಮಾಂಡ್ ಮುಂದಿಲ್ಲವೆಂದು ಹೇಳಿದರು.
ಇನ್ನು ಲೋಕಸಭಾ ಚುನಾವಣೆಗಾಗಿ ಎಐಸಿಸಿ, ಕೆಪಿಸಿಸಿ ಹಾಗೂ ಸಿಎಂ ಅವರಿಂದ ಆಂತರಿಕ ಸಮೀಕ್ಷೆ ನಡೆದಿದೆ ಎಂದರು.
ಅಯೋಧ್ಯೆಗೆ ಹೋದರೆ ಅಷ್ಟೇ ಹಿಂದುತ್ವ ಆಗಲು ಸಾಧ್ಯವಿಲ್ಲ. ಸ್ವತಃ ಪ್ರಧಾನಿ ಮೋದಿ ಅವರೇ ಜ 22ಕ್ಕೆ ಅಯೋಧ್ಯೆ ಗೆ ಬರಬೇಡಿ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಜ. 22ನೇ ತಾರೀಖು ಬಿಟ್ಟು ಬೇರೆ ದಿನಗಳಲ್ಲಿ ಅಯೋಧ್ಯೆ ಗೆ ಹೋಗುವುದಾಗಿ ಹೇಳಿದ್ದಾರೆ. ಕಾರಣ ಈ ವಿಷಯಕ್ಕೆ ರಾಜಕೀಯ ಬೇರೆಸುವುದು ಸರಿಯಲ್ಲ. ಅನೇಕ ಸ್ವಾಮೀಜಿ ಗಳು ಇನ್ನೂ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ವಗೊಂಡಿಲ್ಲ. ಅದಕ್ಕಾಗಿ ನಾವು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲವೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಎಲ್ಲಾ ನಿರ್ಧಾರಗಳನ್ನು ರಾಮ ಮಂದಿರ ಟ್ರಸ್ಟ್ ನವರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ಯಾಮ್ ಘಾಟಗೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಕಿರಣ ಸಾಧುನ್ನವರ್, ಕಾಂಗ್ರೆಸ್ ಮುಖಂಡರಾದ ರಾಜಾ ಸಲೀಂ, ಬಸವರಾಜ ಶೇಂಗಾವಿ ಉಪಸ್ಥಿತರಿದ್ದರು.