ನೇಸರಗಿ-20:ಕನ್ನಡ ನಾಡು ,ನುಡಿ,ಜಲ,ನೆಲ ,ಸಂಸ್ಕ್ರತಿ, ಸಾಹಿತ್ಯ ರಕ್ಷಣೆಗೆ ವಿದ್ಯಾರ್ಥಿಗಳು ಸದಾ ಬದ್ದರಾಗಿ ಕಾರ್ಯ ನಿರ್ವಹಿಸಿ ಮುನ್ನಡೆದರೆ ಕನ್ನಡತನ ಇನ್ನಷ್ಟು ಗಟ್ಟಿಯಾಗುತ್ತದೆ ಮತ್ತು ಕನ್ನಡ ಹೋರಾಟಗಾರ ಡಾ. ಪಾಟೀಲ ಪುಟ್ಟಪ್ಪನವರ ಹೋರಾಟದ ಹಾಗೇ ಕನ್ನಡ ಬೆಳೆಸಲು ಹೋರಾಡೋಣ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷರಾದ ಮೋಹನ ಬಸವನಗೌಡ.ಪಾಟೀಲ ಹೇಳಿದರು.
ಅವರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಆಚರಿಸಿದ ಕನ್ನಡ ಹಬ್ಬ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬೈಲಹೊಂಗಲ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಎನ್ ಆರ್.ಠಕ್ಕಾಯಿ ಮಾತನಾಡಿ ದೇಶ ಪ್ರೇಮದ ಜೊತೆಗೆ ತಾಯಿ ಕನ್ನಡಾಂಬೆಯನ್ನು ಪ್ರೀತಿಸಿ,ಉಳಿಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದ್ದು ಆ ಕನ್ನಡ ಬೆಳೆಸುವದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯರಾದ ಡಾ.ಪಕ್ಕೀರಗೌಡ ಡಿ.ಗದ್ದಿಗೌಡರ ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರೆಪಿತರಾಗಿ ಆತ್ಮವಿಶ್ವಾಸದಿಂದ ಹೆಮ್ಮೆಯಿಂದ ಕನ್ನಡ ಹಬ್ಬ ಆಚರಿಸುತ್ತಿರುವದು ನಮಗೆ ಹೆಮ್ಮೆ ತಂದಿದ್ದು, ಕನ್ನಡ ಜಲ,ನೆಲ,ಸಾಹಿತ್ಯ, ಸಂಗೀತ, ಕೋಟೆ,ಕೊತ್ತಲು,ಇತಿಹಾಸ ಬೆಳವಣಿಗೆಗೆ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು ಅದಕ್ಕಾಗಿ ಟೊಂಕ ಕಟ್ಟಿ ನಿಂತು ಕನ್ನಡವನ್ನು ಬೆಳೆಸಬೇಕೆಂದರು.
ಕಾರ್ಯಕ್ರಮದಲ್ಲಿ ಭೋಧಕರಾದ ಶ್ರದೇವಿ ನರವಾಡ,ಶಿವಾನಂದ ಹಿರೇಮಠ, ಎಂ ಬಿ. ಕೊಪ್ಪದ,ವಿನಯ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ, ಪೃಥ್ವಿರಾಜ್ ಎನ್,ನೇಂದ್ರಪ್ಪ,ಡಾ.ರೇಣಕಿಗೌಡರ,ಡಿ ಎಸ್.ಹುಡೇದ,ಸುರೇಖಾ ಶೆಟ್ಟಿ, ಪ್ರತೀಕ ಕಾಮಾನಿ,ಸುರೇಶ ಜಾದವ,ಗಿರಿಗೌಡ ಚೋಬಾರಿ,ಬಾಗ್ಯ ಮರೋಳ,ವಿ ಜಿ.ಅಂಗಡಿ, ಡಾ.ಪದ್ಮಾ ಹೊಸಕೋಟಿ,ರವೀಂದ್ರ ಪೂಜೇರಿ, ಆರ್ ವಾಯ್.ಗೌಡರ, ಎನ್ ಐ.ಸತ್ತಿಗೇರಿ, ಗಡಾದ,ಅಶೋಕ ಬಾಗಿ ,ವಿದ್ಯಾರ್ಥಿ,ವಿದ್ಯಾರ್ಥಿನೀಯರು,ಕನ್ನಡ ಹಬ್ಬದ ಪದಾಧಿಕಾರಿಗಳು ಭಾಗವಹಿಸಿದ್ದರು.