23/12/2024
IMG-20240120-WA0051

ವಾರಣಾಸಿ-20: ಕಾಶಿ ಜಂಗಮವಾಡಿ ಮಠದಲ್ಲಿ ಶ್ರೀ ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶದ, ತೆಲಂಗಾಣ ರಾಜ್ಯಗಳಿಂದ ಶನಿವಾರ ಅಯೋಧ್ಯಾಪುರಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಶಿ ಜಗದ್ಗುರುಗಳು, ವೀರಶೈವ ಮಠಾಧೀಶರು ಇವತ್ತು ಅಯೋಧ್ಯಾಪುರಕ್ಕೆ ಶ್ರೀ ಪೀಠದಿಂದ ತೆರಳುತ್ತಿದ್ದೇವೆ. ಅಯೋಧ್ಯೆಯ ಶ್ರೀರಾಮನ ಬಾಲ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗುವುದರ ಮೂಲಕ ಅಲ್ಲಿಯ ಕಾರ್ಯವನ್ನು ನೋಡಿ ಸಂತೋಷ ಪಡುತ್ತಿದ್ದೇವೆ ಎಂದರು.
ಕೊಟ್ಟೂರು ಚಾಣುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಪುರಮಠದ ಶ್ರೀ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಡಾ. ಜಯಚಂದ್ರ ಸ್ವಾಮೀಜಿ, ಗುಬ್ಬಿ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಮಹಾರಾಷ್ಟ್ರದ ನಾಗನಸೂರ ಶ್ರೀಕಂಠ ಶಿವಾಚಾರ್ಯರು, ಸೋಗೂರೇಶ್ವರ ಸ್ವಾಮೀಜಿ ಸೇರಿದಂತೆ ಸುಮಾರು 25 ಜನ ಮಠಾಧೀಶರು ಅಯೋಧ್ಯಾಪುರಕ್ಕೆ ತೆರಳಿದರು.

error: Content is protected !!