ಬೆಳಗಾವಿ-18: ನೋಡಲು ಸುಂದರವಾದ ತೆಟ ಮೈಸೂರಿನ ಐತಿಹಾಸಿಕ ಲಲಿತ್ ಮಹಲ್ ಪ್ಯಾಲೆಸ್‌ನಂತೆ ಇರುವ ಕಟ್ಡಡ, ಒಮ್ಮೆ ನೋಡಿದರೆ ಇನ್ನೊಮ್ಮೆ ತಿರುಗಿ ನೋಡಬೇಕೆನ್ನುವ ಕಾತುರ, ಇದು ಯಾವ ರಾಜರು ಕಟ್ಟಿರುವ ಅರಮನೆ ಎಂದು ಹುಬ್ಬೆರಿಸದರಿ…..ಇದು ಬೆಳಗಾವಿ ಜಿಲ್ಲೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವ ವೇದಿಕೆ.
ಹೌದು…ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜ. 19, 20, 21ರಂದು 20ನೇ ಸತೀಶ್ ಶುಗರ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನಡೆಯುತ್ತಿದ್ದು, ಕೊನೆಯ ಕ್ಷಣದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮ ಜ. 19ರಂದು ಸಂಜೆ 5 ಗಂಟಗೆ ಪ್ರಾರಂಭವಾಗಲಿದ್ದು, ಮೂರು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಗೇರಿಸಲಿವೆ. ಈ ಕಾರ್ಯಕ್ರಮದ ಮುಖ್ಯ ಸಂಘಟಿಕರಾದ ರಿಯಾಜ ಚೌಗಲಾ ಅವರು ವಿಶೇಷ ಆಹ್ವಾನದ ಮೇರೆಗೆ ಅನೇಕ ಗಣ್ಯರು ಕರದಂಟು ನಾಡಿಗೆ ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಈ ಬಾರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯನ್ನು ಮೈಸೂರಿನ ಐತಿಹಾಸಿಕ ಲಲಿತ್ ಮಹಲ್ ಪ್ಯಾಲೆಸ್‌ನಂತೆ ವೇದಿಕೆ ನಿರ್ಮಿಸಲಾಗಿರುವುದು ನೋಡಗರ ಆಕರ್ಷಣೆ ಕೇಂದ್ರ ಬಿಂದುವಾಗಿದೆ.
ಲಲಿತ್ ಮಹಲ್ ಪ್ಯಾಲೆಸ್ ವೇದಿಕೆ ವಿವಿರ: ಈ ಬಾರಿ ನಡೆಯುವ 20ನೇ ಸತೀಶ್ ಶುಗರ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಮಾದರಿಯಂತೆ ವೇದಿಕೆ ಸಿದ್ದಗೊಂಡಿದೆ. ಪ್ರತಿ ಭಾರಿ ನಡೆಯುವ ಈ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಿರುವುದು ಮಹಾಲಿಂಗ ರುದ್ರಪ್ಪ ಹೊಸಕೋಟೆ ಅವರು ಎಂಬುವುದು ಇನ್ನೊಂದು ವಿಶೇಷವಾಗಿದೆ. ಈ ವೇದಿಕೆ 120 ಫುಟ್ ಅಗಲ, 20 ಫುಟ್ ಉದ್ದ, 35 ಫುಟ್ ಎತ್ತರದಲ್ಲಿ ಲಲಿತ್ ಮಹಲ್ ಪ್ಯಾಲೆಸ್ ವೇದಿಕೆ ನಿರ್ಮಾಣಗೊಂಡಿದೆ. ಒಟ್ಟು 2.800 sqr ಫುಟ್‌ದಲ್ಲಿ ವೇದಿಕೆ ಸಿದ್ದಗೊಂಡಿದೆ. ಈಗಾಗಲೇ ನಗರದ ಬೀದಿಗಳು ಸಿಂಗಾರಗೊಂಡಿದ್ದು ಬರುವ ಜನರಿಗೆ ವಿಶಾಲವಾದ ಜಾಗದಲ್ಲಿ ಸಾರ್ವಜನಿಕರಿಗೆ ಕುಳಿತು ಕಾರ್ಯಕ್ರಮ ವೀಕ್ಷಿಸಲು 12 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.
ಐತಿಹಾಸಿಕ ಸ್ಳಳಗಳೇ ಇಲ್ಲಿ ವೇದಿಕೆ: ಗೋಕಾಕದಲ್ಲಿ ಸತೀಶ್ ಶುಗರ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ನಿರ್ಮಾಣವಾಗುವ ವೇದಿಕೆಗಳು ಐತಿಹಾಸಿಕ ಸ್ಥಳವಾಗಿವೆ. ಅದರಲ್ಲೂ ಹಿಂದೆ ನಿರ್ಮಾಣಗೊಂಡ ಐಫೆಲ್ ಟವರ್, ಮೈಸೂರು ಪ್ಯಾಲೆಸ್, ಬೆಂಗಳೂರು ಪ್ಯಾಲೆಸ್, ಮಹೇಶ್ಮತಿ ಕೋಟೆ. ದೆಹಲಿ ಕೋಟೆ ಮಾದರಿಯಲ್ಲೇ ವೇದಿಕೆಗಳ ಸಿದ್ದಗೊಂಡಿದ್ದವು. ಈ ಭಾರಿಯೂ ವಿಭಿನ್ನವಾಗಿ ಹೊಸಕೋಟೆ ಅವರ ತಂಡದ ಕೈ ಚಳಕದಿಂದ ಮೈಸೂರಿನ ಲಲಿತ್ ಮಹಲ್ ಪ್ಯಾಲೆಸ್ ಮಾದರಿಯಂತೆ ವೇದಿಕೆ ನಿರ್ಮಾಣವಾಗಿರುವುದು ನೋಡುಗರನ್ನು ಸೂಜಿಯಂತೆ ಕಟ್ಟಿ ಹಾಕುತ್ತಿದೆ.
ಭರದಿಂದ ಸಾಗಿದ ಸಿದ್ಧತೆ: 20ನೇ ಸತೀಶ್ ಶುಗರ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಂದೇ ದಿನ ಬಾಕಿ ಉಳಿದಿದ್ದು, ಗೋಕಾಕಕ್ಕೆ ಗೋಕಾಕಕವೇ ಸಿಂಗಾರಗೊಂಡಿದೆ. ಬೀದಿ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಟೌಟ್, ಬ್ಯಾನರ್, ಪತಾಕೆಗಳನ್ನು ಹಾಕಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಸಿದ್ದತೆ ಲೈಟಿಂಗ್ ವ್ಯವಸ್ಥೆ ಸೇರಿದಂತೆ ಕೊನೇ ಕ್ಷಣದ ಸಿದ್ಧತೆಗಳೂ ನಡೆಯುತ್ತಿವೆ.
ತಂದೆ ಮಾರ್ಗದಲ್ಲಿಯೇ ರಾಹುಲ್- ಪ್ರಿಯಾಂಕಾ ನಡಿಗೆ: ಬೆಳಗಾವಿ ಸೇರಿದಂತೆ ರಾಜ್ಯದಲ್ಲಿಯೇ ಸತೀಶ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು, ಸಮಾಜ ಸೇವೆ ಮೂಲಕ ದೀನ ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾಗಿದ್ದಾರೆ. ಈಗ ಅವರ ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ 20 ವರ್ಷಗಳಿಂದ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿಕೊಟ್ಟು ತಂದೆಯ ದಾರಿಲ್ಲೇ ಸಾಗಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿರ: ಜ. 19 ರಂದು ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ವರ್ಧೆ, ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ವರ್ಧೆ ಹಾಗೂ ಮುಕ್ತ ವಿಭಾಗಕ್ಕೆ ಸಮೂಹ ನೃತ್ಯ ಸ್ವರ್ಧೆ ಜರುಗಲಿದ್ದು, ಇದೇ ದಿನ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ಭಾಷಣ ಸ್ವರ್ಧಾ ವಿಜೇತರಿಗೆ ಮತ್ತು ಸದರಿ ದಿನದಂದು ನಡೆದ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಜ. 20 ರಂದು: ಗಾಯನ ಸ್ವರ್ಧೆ ಮುಕ್ತ ವಿಭಾಗ, ಜಾನಪದ ಗಾಯನ ಕಾಲೇಜು ವಿಭಾಗ, ಜಾನಪದ ನೃತ್ಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಸಮೂಹ ನೃತ್ಯ ಸ್ವರ್ಧೆಗಳು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಸದರಿ ದಿನ ನಡೆದ ಸ್ವರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಜ. 21 ರಂದು ಬಹುಮಾನ ವಿತರಣೆ: ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ವರ್ಧೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ , ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ವರ್ಧೆ ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸದರಿ ದಿನ ವಿಜೇತ ವಿದ್ಯಾರ್ಥಿಗಳಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮತ್ತು ಗಣ್ಯರು ಬಹುಮಾನ ವಿತರಿಸಲಿದ್ದಾರೆ.