22/12/2024
IMG-20241218-WA0003

ಬೆಳಗಾವಿ-೧೮:ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲೆ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು.

ಇದೇ ವೇಳೆ ವಿಜಯೇಂದ್ರ ಅವರು ಮಾತನಾಡಿ ಬೆಳಗಾವಿ ಜಿಲ್ಲೆಗೆ ಕ್ರಿಯಾಶೀಲ ಅಧ್ಯಕ್ಷ ಸುಭಾಷ್ ಪಾಟೀಲ ಅವರು ಮುಂಚೂಣಿಯಲ್ಲಿ ಕ್ಷೇತ್ರದ ತುಂಬೆಲ್ಲ ಓಡಾಡಿ ಸಂಘಟನೆಗೆ ಶ್ರಮಿಸುತ್ತಿದ್ದಾರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮವಹಿಸಿ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಲು ಕರೆ ನೀಡಿದರು ಇದೇ ವೇಳೆ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳು ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ವಿಶ್ವನಾಥ್ ಪಾಟೀಲ, ರಾಷ್ಟ್ರೀಯ ಓ.ಬಿ.ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿಧ್ಧನಗೌಡರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ,ಯಲ್ಲೇಶ್ ಕೊಲಕಾರ, ಸಚಿನ್ ಕಡಿ, ಸಂತೋಷ ದೇಶನೂರ, ಯುವರಾಜ ಜಾಧವ,ಚೇತನ ಅಂಗಡಿ,ನಯನಾ ಬಸ್ಮೆ, ಯುವರಾಜ ಜಾಧವ, ರಾಜೇಂದ್ರ ಗೌಡಪ್ಪಗೋಳ,ಭೀಮಶಿ ಭರಮಣ್ಣವರ, ಸುಭಾಷ್ ತುರಮರಿ,ಡಾ.ಕೆ.ವಿ.ಪಾಟೀಲ, ಶ್ರೀಕರ ಕುಲಕರ್ಣಿ, ಸುಭಾಷ್ ಸಣ್ಣವೀರಪ್ಪನವರ, ಮನೋಜ್ ಪಾಟೀಲ,ಕುಲಕರ್ಣಿ, ಬಸವರಾಜ ಸಾಣಿಕೊಪ್ಪ, ಮಹಾದೇವ ಶೆಕ್ಕಿ,ಪ್ರಮೋದ ಕೋಚೇರಿ,ಗುರು ಕೋತಿನ್, ಶಿವಾನಂದ್ ಹನುಮಸಾಗರ ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!