26/04/2025
IMG-20241219-WA0000

ಬೆಳಗಾವಿಯಲ್ಲಿ ” ಪೃಥ್ವಿ ಫೌಂಡೇಶನ್ ” ಸಂಘವು ಸಾಮಾಜಿಕ ಕಳಕಳಿ, ಸಾಮಾಜಿಕ ಪ್ರಗತಿ, ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿ, ಮತ್ತು ಮಹಿಳಾ ಸಬಲೀಕರಣ ಉದ್ದೇಶಗಳ ಸಾರ್ಥಕತೆಗೆ, ಅಧ್ಯಕ್ಷರಾದ ಡಾ. ಹೇಮಾವತಿ ಸೊ ನೊಳ್ಳಿ ಅವರ ಮಾರ್ಗದರ್ಶನದಲ್ಲಿ ಶ್ರೀಮತಿಯರಾದ ಮಹಾದೇವಿ ಹಿರೇಮಠ್, ಶೈಲಜಾ ಹಿರೇಮಠ್, ರಶ್ಮಿ ಪಾಟೀಲ್, ಭುವನೇಶ್ವರಿ ಪೂಜೇರಿ, ಪಾರ್ವತಿ ಪಾಟೀಲ್, ಗಿರಿಜಾ ಹಟ್ಟಿಹೊಳಿ, ಪದಾಧಿಕಾರಿಗಳೊಂದಿಗೆ, ಸಾಹಿತ್ಯ ಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬೆಳೆಯುವವರಿಗೆ ವೇದಿಕೆಯು ಪ್ರೋತ್ಸಾಹಿಸುತ್ತಲಿದೆ. , ” ಪೃಥ್ವಿ ಫೌಂಡೇಶನ್, ” ವೇದಿಕೆಯ ಆಶ್ರಯದಲ್ಲಿ ಇತ್ತೀಚಿಗೆ ಬೆಳಗಾವಿಗೆ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ ದಾವಣಗೆರೆ ಜಿ. ಹೊನ್ನಾಳಿಯ ಹಿರಿಯ ಸಾಹಿತಿ ಶ್ರೀ, ಯು. ಎನ್. ಸಂಗನಾಳಮಠ ಅವರಿಗೆ ಡಾ. ಹೇಮಾವತಿ ಸೊನೊಳ್ಳಿ ಅವರು ಆತ್ಮೀಯವಾಗಿ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ “ಪೃಥ್ವಿ ಫೌಂಡೇಶನ್ ” ದ ಎಲ್ಲ ಪದಾಧಿಕಾರಿಗಳು, ” ಹೊಂಬೆಳಕು ಸಾಂಸ್ಕೃತಿಕ ಸಂಘ ” ದ ಅಧ್ಯಕ್ಷರಾದ ಸ. ರಾ. ಸುಳಕೂಡೆ, ಕಾರ್ಯದರ್ಶಿಗಳಾದ ಆರ್. ಬಿ. ಬನಶಂಕರಿ ಅವರು ಉಪ ಸ್ಥಿತರಿದ್ದರು.

error: Content is protected !!