ಬೆಳಗಾವಿ-೧೮:ಎರಡು ವರ್ಷದ ಗೃಹಲಕ್ಷ್ಮೀ ಹಣ ಕೂಡಿಟ್ಟು ಬೊರವೆಲ್ ಕೊರೆದ ರೈತರು ವಿದ್ಯುತ್ ಸಂಪರ್ಕಕ್ಕೆ ಇನ್ನೆಷ್ಟು ವರ್ಷಕಾಯಬೇಕು ಎಂಬುದನ್ನು ಕೃಷಿ ಪಂಪಸೆಟ್ ಗಳಿಗೆ 15ರಿಂದ 30 ಸಾವಿರ ರೂಪಾಯಿಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವದನ್ನು ರದ್ದುಗೊಳಿಸಿ ಲಕ್ಷಾಂತರ ರವನ್ನು ವಿದ್ಯುತ್ ಸಂಪರ್ಕಕ್ಕೆ ವ್ಯಯಿಸುವ ಕಾಂಗ್ರೆಸ್ ಸರ್ಕಾರದ ನಿಲುವು ಏನು ಎಂಬುವದನ್ನು ಬಡ ರೈತರಿಗೆ ಮುಖ್ಯಮಂತ್ರಿಗಳು ಸ್ಷಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದ್ದಾರೆ.
ಪತ್ರಿಕಾಪ್ರಕಟಣೆ ಮೂಲಕ ತಿಳಿಸಿದ ಅವರು, ಇತ್ತಿಚ್ಚಿಗೆ ಗದಗ ಜಿಲ್ಲೆಯಲ್ಲಿ ಅತ್ತೆ ಸೋಸೆ ವರ್ಷವಿಡಿ ಬಂದ ಗೃಹಲಕ್ಷ್ಮೀ ಹಣದಲ್ಲಿ ಬೊರವೆಲ್ ಕೊರಿಸಿದ್ದರ ಕುರಿತು ಗ್ಯಾರೆಂಟಿಗಳ ಯಶಸ್ವಿಯ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು , ರಾಜ್ಯದಲ್ಲಿ ನೀರಾವರಿ ಮಾಡಿಕೊಳ್ಳುವ ಕನಸ್ಸು ಕಂಡಿದ್ದ ಸಣ್ಣ ರೈತರಿಗೆ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕದಡಿ 30ಸಾವಿರ ರೂಪಾಯಿಯೊಳಗೆ 500ಮೀ ವರೆಗೆ ಸಂಪರ್ಕ ಕಲ್ಪಿಸುವ ಯೊಜನೆ ರದ್ದುಗೊಳಿಸಿ ಸ್ವನಿರ್ಮಾಣ ಯೋಜನೆಯಡಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಹಾಕಿ ಟಿಸಿ, ವಿದ್ಯುತ್ ಕಂಬ, ತಂತಿ ಮತ್ತು ಅದರ ಮೆಲ್ವಿಚಾರಣೆ ಚಾರ್ಜ್ ಹಣವನ್ನು ರೈತರ ಬರಿಸುವ ಯೋಜನೆ ತಂದು ನೀರಾವರಿಗೆ ಅಡ್ಡಗಾಲು ಹಾಕಿದ್ದೆ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಒಂದು ಕೈಯಲ್ಲಿ ಸ್ವಲ್ಪ ಕೊಟ್ಟು ಎಲ್ಲವನ್ನು ಕಸಿದು ಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ರೈತರ ಕಣ್ಣಿಗೆ ಮಣ್ಣು ಎರುಚುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ನೀರಾವರಿ ಮಾಡಿಕೊಳ್ಳವ ಕನಸ್ಸು ಕಾಣುತ್ತಿರುವ ರೈತರಿಗೆ ಹಿಂದಿನ ಬಿಜೆಪಿ ಸರ್ಕಾರದ ಅಕ್ರಮ ಸಕ್ರಮ ಸಂಪರ್ಕ ಯೋಜನೆ ಮರುಸ್ಥಾಪುಸುವರೆ? ಅಥವಾ ಬೊರವೆಲ್ ಹಾಕಿದ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವರೆ? ಇಲ್ಲಾ ಲಕ್ಷಾಂತರ ಹಣ ಕೂಡವವರೆಗೆ ಜೀವನ ಪರ್ಯಂತ ಗೃಹ ಲಕ್ಷ್ಮೀ ಹಣಕ್ಕಾಗಿ ಮಹಿಳಾ ರೈತರು ಕಾಯಬೇಕೆ? ಇದನ್ನು ಸ್ಪಷ್ಟಪಡಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.