ಬೆಳಗಾವಿ-೦೯: ನಗರದ ಡಾ. ದೇವಗೌಡ ಇಮಗೌಡನವರ ಅವರ ಶ್ರೀ ಆರ್ಥೋ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನಲ್ಲಿ ತಿಂಗಳ ಎರಡನೇಯ ಗುರುವಾರ ಪ್ಲಾಸ್ಟಿಕ್ ಹಾಗೂ ನಾಳೀಯ ಕುರಿತಾದ ಉಚಿತ ಆರೋಗ್ಯ ಶಿಬಿರ ಡಿಸೆಂಬರ 12 ರಂದು ನಡೆಯಲಿದ್ದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಲು ಕೋರಲಾಗಿದೆ.
ಖ್ಯಾತ ಪ್ಲಾಸ್ಟಿಕ್ ಹಾಗೂ ನಾಳೀಯ ಶಸ್ತ್ರಚಿಕಿತ್ಸಕ ಡಾ. ವಿನಾಯಕ್ ಲೋಕರೆ ಉಚಿತ ಸಮಾಲೋಚನೆ ನಡೆಸಿಕೋಡಲಿದ್ದಾರೆ. ಸೌದರ್ಯ ವರ್ಧನೆ, ಕುರುಪತನ ಹೋಗಲಾಡಿಸಲು, ವೆರಿಕೋಜ್ ವೇನ್ಸ್ ಸೇರಿದಂತೆ ರಕ್ತ ನಾಳಗಳ ಕುರಿತಾದ ತೊಂದರೆಗಳಿಂದ ಬಳಲುತ್ತಿರುವವರು, ದೇಹದ ವಿರೂಪತೆಗಳು ಹಾಗೂ ಅಸಮರ್ಪಕ ರಕ್ತ ಚಾಲನೆಗೆ ಸಂಬಂದಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿರುವವರ, ಸುಟ್ಟಗಾಯಗಳ ಕಲೆಗಳಿಂದ ಮುಕ್ತಿ ಹೊಂದದವರು, ಸೀಳು ತುಟಿ ಹೊಂದಿದ ಮಕ್ಕಳ ಚಿಕಿತ್ಸೆ, ಮೂಗಿನ ಸುಂದರತೆ ಸೇರಿದಂತೆ ಸೌಂದರ್ಯ ವರ್ಧನೆ ಬಯಸುವವರು, ದೀರ್ಘಕಾಲದಿಂದ ಗಾಯಗಳು ಸೇರಿದಂತೆ ಡಾಯಾಬಿಟಿಕ್ ಅಲ್ಸರನಿಂದ ಬಾದೆಗೊಳಗಾದವ̧̧̧ರು, ಕೊಬ್ಬು ಕಡಿಮೆ ಮಾಡಲಿಚ್ಚಿಸುವವರು ಈ ಶಿಬಿರದಲ್ಲಿ ಪಾಲ್ಗೋಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು .
ಶಿಬಿರ ಬೆಳಿಗ್ಗೆ 10.00 ರಿಂದ ಮದ್ಯಾನ್ಹ 2.00 ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9606960150 ಕರೆ ಮಾಡಿ.