23/12/2024
IMG-20241209-WA0083

ರಾಮದುರ್ಗ-೦೯: ರಾಜ್ಯದ ಸುಮಾರು 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಸರಕಾರವನ್ನು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರಾಜು ಕಂಬಾರ ಒತ್ತಾಯಿಸಿದ್ದಾರೆ.

  1. ಪತ್ರಿಕಾ ಪ್ರಕಟಣೆಯ ಮೂಲಕ ಸೋಮವಾರ ಈ ವಿಷಯ ತಿಳಿಸಿದ ಕಂಬಾರರು,
    ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಸೇವಾ ಭದ್ರತೆಗಾಗಿ ನಿರಂತರ ಹೋರಾಟವನ್ನು ಮಾಡಲಾಗುತ್ತಿದೆ.ಆದರೆ ಇದುವರೆಗೆ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ- ಖಾಯಮಾತಿ ಘೋಷಣೆ ಮಾಡಿಲ್ಲ. ಇದರಿಂದಾಗಿ ನೂರಾರು ಅತಿಥಿ ಉಪನ್ಯಾಸಕರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕೆಲವರ ವಯೋಮಿತಿ ಮೀರಿ ಹೋಗಿದೆ. ಸರ್ಕಾರ ಇಂದಲ್ಲ ನಾಳೆ ನಮ್ಮ ಸೇವೆಯನ್ನು ಸಕ್ರಮಗೊಳಿಸಿ ಕಾಯಮಾತಿ ಮಾಡಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸದೊಂದಿಗೆ ನೂರಾರು ಅತಿಥಿ ಉಪನ್ಯಾಸಕ ಕುಟುಂಬಗಳು ಜೀವ ಸವೆವಿಸುತ್ತಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಮೇಲೆ ಸಾಂದರ್ಭಿಕವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರು ಖಾಯಮಾತಿಗಾಗಿ ಮನವಿ ಸಲ್ಲಿಸಿದ್ದೇವೆ. ಅವರು ಕೂಡ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುತ್ತಾರೆಂಬ ನಂಬಿಕೆ ವಿಶ್ವಾಸವಿದೆ. ಅವರು ವಿರೋಧ ಪಕ್ಷದ ನಾಯಕರಾದಂತಹ ಸಂದರ್ಭದಲ್ಲಿ ನಾವೆಲ್ಲಾ ಅವರಿಗೆ ಮನವಿಯನ್ನು ಸಲ್ಲಿಸಿದ್ದೆವು. ನಮ್ಮ ಮನವಿಯನ್ನು ಆಲಿಸಿದ್ದ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಅತಿಥಿ
    ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು ಅಂದಿನ ಸರ್ಕಾರವನ್ನು ಅಧಿವೇಶನದಲ್ಲಿಯೇ ಮಾತನಾಡಿ ಒತ್ತಾಯಿಸಿದ್ದರು.
    ಈಗ ಅವರು ಮುಖ್ಯಮಂತ್ರಿಗಳಾದ ಮೇಲೂ ಕೂಡ ಅತಿಥಿ ಉಪನ್ಯಾಸಕರು ಭೇಟಿಯಾದಾಗ ನಮ್ಮಮನವಿ ಆಲಿಸಿ, ಭರವಸೆಯನ್ನು ತುಂಬಿರುವುದಲ್ಲದೆ ಕಳೆದ ಒಂದು ವರ್ಷದಿಂದ ಸೇವಾ ಜೇಷ್ಠತೆಗೆ ಅನುಗುಣವಾಗಿ 8,000 ಗಳನ್ನು ಹೆಚ್ಚಿಸಿದ್ದಾರೆ.
    ಆದರೆ ಇದಕ್ಕಿಂತ ಮುಖ್ಯವಾಗಿ ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲಾಗುವುದು ಎಂದು ಹೇಳಿದ್ದನ್ನು ಸರ್ಕಾರ ಬೇಗ ಸಾಕಾರಗೊಳಿಸಬೇಕು.
    ಮುಖ್ಯಮಂತ್ರಿಗಳ ನಮ್ಮ ಪಾಲಿನ ಈ ಗ್ಯಾರಂಟಿ ಯೋಜನೆಯಿಂದ ರಾಜ್ಯದ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತಮ್ಮ ಉದ್ಯೋಗದ ಬಗ್ಗೆ ಸೇವಾಭದ್ರತೆ ದೊರೆಯಬಹುದೆಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ.
    ಮಾನ್ಯ ಮುಖ್ಯಮಂತ್ರಿಗಳು ಸೋಮವಾರದಿಂದ ಜರುಗುತ್ತಿರುವ ಬೆಳಗಾವಿ ಸುವರ್ಣಸೌಧದ ಅಧಿವೇಶನದಲ್ಲಿಯೇ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ-ಖಾಯಮಾತಿ ಘೋಷಣೆಯನ್ನು ಮಾಡಬೇಕು.
    ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ – ಕಾಯಮಾತಿ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಸಮ್ಮತಿಸಿದ್ದಾರೆ.ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್ ಸರ್ ಅವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ
    ಒತ್ತಾಯಿಸಲಾಗಿದೆ ಎಂದ ಅವರು, 2024- 25 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿದೆ. ಈಗಾಗಲೇ ಪೂರ್ಣಕಾಲಿಕ ಉಪನ್ಯಾಸಕರ ವರ್ಗಾವಣೆ, ಹೊಸ ನೇಮಕಾತಿಯಿಂದ ಸಾವಿರಾರು ಅನುಭವಿ- ಹಿರಿಯ ಅತಿಥಿ ಉಪನ್ಯಾಸಕರು ಕಾರ್ಯಭಾರವಿಲ್ಲದೆ ಉದ್ಯೋಗ ವಂಚಿತರಾಗಿ ಮನೆಯಲ್ಲಿ ಉಳಿದಿದ್ದಾರೆ ತಕ್ಷಣ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಕೌನ್ಸಿಲಿಂಗ್ ಜರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!