ಬೆಳಗಾವಿ-೦೯:ಪಾಯೋನಿಯರ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕನ ನಾಮನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ಅವರು ಅವಿರೋಧ ಆಗಿ ಆಯ್ಕೆಯಾಗಿದ್ದಾರೆ
ಬೆಳಗಾವಿ ದಿ ಪಾಯೋನಿಯರ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಡಿಸೆಂಬರ್ 15ರಂದು ನಡೆಯಲಿದ್ದು ಇಂದು ಸೋಮವಾರ 9/12/2024 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.
ಹಿಂದುಳಿದ ವರ್ಗದ ಎಸ್ ಸಿ ಗುಂಪಿನ ನಾಲ್ಕು ಅಭ್ಯರ್ಥಿಗಳಲ್ಲಿ ಮೂರು ಅಭ್ಯರ್ಥಿಗಳು ಹಿಂದೆ ಸರಿದಿದ್ದು ಬ್ಯಾಂಕ್ನ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ಅವಿರೋಧ ಆಗಿ ಆಯ್ಕೆಯಾದರು.
ಮಲ್ಲೇಶ್ ಚೌಗುಲೆ ಸದಾ ಸಮಾಜ ಮುಖಿ ಕಾರ್ಯದಲ್ಲಿ ಸಕ್ರಿಯ ರಾಗಿದ್ದು ಅಂತರಾಷ್ಟ್ರೀಯ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಮಲೇಶಿಯಾ ಭಾರತ ಸರ್ಕಾರದ ರಾಷ್ಟ್ರೀಯ ಯುವ ಪ್ರಶಸ್ತಿ ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಅದೇ ರೀತಿ ವಿವಿಧ ಸಂಸ್ಥೆಗಳ ಸದಸ್ಯರು ಕೂಡಾ ಹಾಗೂ ಸರ್ಕಾರದ ನಾಮನಿರ್ದೇಶಕರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದು ಅವರ ಸಾಮಾಜಿಕ ಕಾರ್ಯದ ದೃಷ್ಟಿಯಿಂದ ಬ್ಯಾಂಕ್ ಕಚೇರಿಯಲ್ಲಿ ಆಯ್ಕೆಯಾಗಿದ್ದಾರೆ ಇದರಲ್ಲಿ ಮಾಜಿ ಮೇಯರ್ಗಳಾದ ವಿಜಯ ಮೋರೆ ಚೇತಕ ಕಾಂಬಳೆ ಕುರ್ಣೆ ಹಿಂದೂ ಸರ್ದಿದ್ದು ಅವರಿಗೆ ಉತ್ತೇಜನ ನೀಡಲು ಮಲ್ಲೇಶ ಅ ವಿರೋಧವಾಗಿ ಆಯ್ಕೆಯಾದರೂ.
ದಿ ಪಾಯೋನಿಯರ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆ ಆಗಿರುವ ಮಲ್ಲೇಶ್ ಚೌಗುಲೆ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಈ ಚುನಾವಣೆ ಯಶಸ್ವಿಗೊಳಿಸಿದ ಹಾಗೂ ಹಿಂದೆ ಬ್ಯಾಂಕಿನ ಹಲಿ ಅಧ್ಯಕ್ಷ ಪ್ರದೀಪ್ ಅಷ್ಟೇಕರ ನಿರ್ದೇಶಕ ಹಾಗೂ ಮಾಜಿ ಶಾಸಕ ರಮೇಶ್ ಕುಡಚಿ ಸೇರಿದಂತೆ ಗಣ್ಯರಿಂದ ಸಹಕಾರ ದೊರೆತಿದೆ.